ವಿಜಯೇಂದ್ರ‌ ಆಪ್ತ ಕೊಟ್ಟ ‘ಗಿಫ್ಟ್’ ಕವರ್ ನಲ್ಲಿ ಏನಿದೆ?: ಹೊಸ ಚರ್ಚೆಗೆ ಕಾರಣವಾಯ್ತು ಮಠಾಧೀಶರ ನಡೆ

ಬೆಂಗಳೂರು, ಜು. 22: ನಾಯಕತ್ವ ಬದಲಾವಣೆ‌ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ‌ ಬೆಂಬಲಕ್ಕೆ ನಿಂತಿದ್ದು, ಮಠಾಧೀಶರುಗಳ ಈ ನಡೆಗೆ ಜನಪ್ರತಿನಿಧಿಗಳಷ್ಟೇ ಅಲ್ಲದೇ‌ ಜನಸಾಮಾನ್ಯರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬುಧವಾರ ಬೆಂಗಳೂರಿನ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿಕೊಟ್ಟ ಮಠಾಧೀಶರು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದೆಂದು ಆಗ್ರಹಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೆ, ಬಿಜೆಪಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕಲ್ಲವೆ ಎಂಬ ಒಂದು ಮಾತು ಹೇಳಿದ್ದಾರೆ.

ಈ ನಡುವೆ ಯಡಿಯೂರಪ್ಪ ಹಾಗೂ ಮಠಾಧೀಶರ ಸಭೆ ಮುಕ್ತಾಯ ಆಗುತ್ತಿದ್ದಂತೆ ಸಭೆಗೆ ಬಂದಿದ್ದ ಎಲ್ಲ ಮಠಾಧೀಶರಿಗೂ ಕವರ್ ಗಿಫ್ಟ್ ಕೊಡಲಾಗಿದೆ. ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರನ ಆಪ್ತ ಸಹಾಯಕ ಮಠಾಧೀಶರಿಗೆ ಕವರ್ ಗಿಫ್ಟ್ ಹಂಚಿದ್ದು, ಎಲ್ಲಾ ಮಠಾಧೀಶರು ಯಾವುದೇ ಮುಜುಗರವಿಲ್ಲದೆ ಕವರ್ ಗಿಫ್ಟ್ ಸ್ವೀಕರಿಸಿದ್ದಾರೆ.

ಆದರೆ ಮಠಾಧೀಶರಿಗೆ ಗಿಫ್ಟ್ ರೂಪದಲ್ಲಿ ಕೊಟ್ಟ ಕವರ್ ನಲ್ಲಿ ಏನಿತ್ತು? ಎಂಬುದು ಇದೀಗ ಹೊಸದೊಂದು ಚರ್ಚೆಗೆ‌ ಆಸ್ಪದ ನೀಡಿದೆ. ಕೆಲವರು ಕವರ್ ಗಿಫ್ಟ್ ನಲ್ಲಿ ಹಣ ಅಥವಾ ಚೆಕ್‌ ಅಲ್ಲದೆ ಮತ್ತೇನು ಇರುತ್ತೆ ಅಂತ ತಮ್ಮ ಅನುಮಾನಕ್ಕೆ ತಾವೇ ಉತ್ತರ ಹುಡುಕಿಕೊಂಡಿದ್ದರೆ. ಇದೆಲ್ಲಾ ವಿಜಯೇಂದ್ರನ ಪೊಲಿಟಿಕಲ್ ಸ್ಟ್ಯಾಟರ್ಜಿಯಾಗಿದೆ ಎಂದಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾಕಷ್ಟು ಅನುಮಾನದ ಜೊತೆಗೆ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದು, ಮುಂದಿನ‌ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.

Exit mobile version