4.7 ಲಕ್ಷ ಭಾರತೀಯರ WhatsApp ಖಾತೆಗಳು ಬ್ಯಾನ್ :ಈ ಕೂಡಲೇ ನಿಮ್ಮ ಈ ತಪ್ಪುಗಳನ್ನ ಸರಿಪಡಿಸಿಕೊಳ್ಳಿ

India : ಭಾರತದ ವಾಟ್ಸ್ಆಪ್ (Whatsapp) ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್‌ ! ಇತ್ತೀಚೆಗೆ ಪ್ರಕಟವಾದ ಬಳಕೆದಾರರ ಸುರಕ್ಷತಾ ವರದಿಯ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ WhatsApp ನ ನೀತಿ ಉಲ್ಲಂಘನೆಗಳಿಂದಾಗಿ ಮಾರ್ಚ್‌ನಲ್ಲಿ 4.7 ಮಿಲಿಯನ್ ಭಾರತೀಯ ಖಾತೆಗಳನ್ನು (WhatsApp accounts are banned) ನಿಷೇಧಿಸಲಾಗಿದೆ ಎಂದು ಘೋಷಿಸಿದೆ.


ಎಲ್ಲಾ ನಿಷೇಧಿತ ಖಾತೆಗಳು ಭಾರತದ ಐಟಿ ಕಾನೂನುಗಳನ್ನು ಉಲ್ಲಂಘಿಸಿವೆ.”ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ, ನಾವು 47,15,906 ಖಾತೆಗಳನ್ನು ನಿಷೇಧಿಸಿದ್ದೇವೆ.

ಅಲ್ಲದೆ 16,59,385 ಖಾತೆಗಳ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ವಾಟ್ಸಾಪ್ ಹೇಳಿಕೆಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೆ ಇನ್ನೂ ಕೆಲವು ಖಾತೆಗಳ ಬಗ್ಗೆ ಬಳಕೆದಾರರಿಂದ ಬಂದ ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.


WhatsApp ನ ಭದ್ರತಾ ವರದಿಯ ಪ್ರಕಾರ 4,720 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 4,316 ದೂರುಗಳು ಬ್ಯಾನ್ (WhatsApp accounts are banned) ಮಾಡುವಂತೆ ವಿನಂತಿಸಲಾಗಿದೆ.

ಆದಾಗ್ಯೂ, ಕೆಲವು ಖಾತೆಗಳನ್ನು ಯಾವುದೇ ಪುರಾವೆಗಳಿಲ್ಲದೆ ಆರೋಪಿಸಲಾಗಿದೆ ಹಾಗಾಗಿ ಅದರ ಪರಿಣಾಮವಾಗಿ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ.

ಇದನ್ನೂ ಓದಿ : https://vijayatimes.com/no-vote-for-bjp-in-melukote/

WhatsApp ನಲ್ಲಿ ಅಸಭ್ಯ ವಿಷಯದ ಹರಡುವಿಕೆಯನ್ನು ತಡೆಯಲು AI ಅನ್ನು ಸಹ ಈಗ ಬಳಸಲಾಗುತ್ತಿದೆ.

ಭವಿಷ್ಯದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳೊಂದಿಗೆ ನಾವು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು AI,

ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತೇವೆ. ಅಷ್ಟೇ ಅಲ್ಲದೆ ನಾವು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು whatsap ಸಂಸ್ಥೆ ಸ್ಪಷ್ಟ ಪಡಿಸಿದೆ.

ಈ ಕೂಡಲೇ ನಿಮ್ಮ ಈ ತಪ್ಪುಗಳನ್ನ ಸರಿಪಡಿಸಿಕೊಳ್ಳಿ

1) ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮೊದಲು ಅದನ್ನು ಯಾವಾಗಲೂ ಪರಿಶೀಲಿಸಿ.

2) ಅನುಚಿತ ಸಂದೇಶಗಳನ್ನು ಪ್ರಸಾರ ಮಾಡುವುದನ್ನು ತಡೆಯಿರಿ.

ಇದನ್ನೂ ಓದಿ : https://vijayatimes.com/i-will-dissolve-jds/

ಹೆಚ್ಚುವರಿಯಾಗಿ, ಧರ್ಮ ಅಥವಾ ಜಾತಿಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿರುವ ಸಂದೇಶಗಳನ್ನು WhatsApp ಮೇಲ್ವಿಚಾರಣೆ ಮಾಡುತ್ತದೆ.

ಸ್ನೇಹಿತರಲ್ಲದವರಿಗೆ ಸಂದೇಶಗಳನ್ನು ಕಳುಹಿಸುವುದರಿಂದ ಕೆಲವೊಮ್ಮೆ ನಿಮ್ಮ ವಿರುದ್ಧ ದೂರು ದಾಖಲಾಗಬಹುದು.

ವಾಟ್ಸಾಪ್‌ನಲ್ಲಿ ನಿರ್ದಿಷ್ಟ ಸಂಖ್ಯೆಯಿಂದ ನೀವು ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದರೆ, ದೂರು ದಾಖಲಿಸಲು ಮತ್ತು ಸಮಸ್ಯೆಯನ್ನು ವರದಿ ಮಾಡಲು ಸಾಧ್ಯವಿದೆ.

ಆದಾಗ್ಯೂ, ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಪರಿಶೀಲನೆಯ ನಂತರ, WhatsApp ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ.

ರಶ್ಮಿತಾ ಅನೀಶ್

Exit mobile version