ದೇಶದಲ್ಲಿ ಬರೋಬ್ಬರಿ 71ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್: ಕಾರಣವೇನು?

ಜಗತ್ತಿನೆಲ್ಲೆಡೆ ಸಾಮಾಜಿಕ ಜಾಲತಾಣ ಅತ್ಯಂತ ದೊಡ್ಡದಾಗಿ ಹಬ್ಬಿದ್ದು, ಇದರಲ್ಲಿ ಪ್ರಸಿದ್ಧ ಮೆಟಾ #Meta ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಕಳೆದ ವರ್ಷ ನ.1 ಮತ್ತು ನ.30ರ ನಡುವೆ 71,96,000 ಖಾತೆಗಳನ್ನು ನಿಷೇಧಿಸಿದ್ದು, ವಾಟ್ಸ್​ಆ್ಯಪ್​ @WhatsApp ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರಿಂದ ಸ್ವೀಕರಿಸಿದ 8,000 ಕ್ಕೂ ಹೆಚ್ಚು ಕುಂದುಕೊರತೆಗಳ ಮೇಲೆ ಈ ಖಾತೆಗಳನ್ನು ನಿಷೇಧಿಸುವ ನಿರ್ಧಾರವನ್ನು ವಾಟ್ಸ್​ಆ್ಯಪ್ ತೆಗೆದುಕೊಂಡಿದೆ.

2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ದೇಶದಲ್ಲಿ ದಾಖಲೆಯ 8841 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಇವುಗಳಲ್ಲಿ ಖಾತೆಗಳನ್ನು ನಿಷೇಧಿಸುವುದು ಅಥವಾ ಹಿಂದೆ ನಿಷೇಧಿತ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಸೇರಿದೆ.

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ (Forward) ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಕಳೆದ ಅಕ್ಟೋಬರ್ 1 ರಿಂದ 31 ರ ನಡುವೆ ಒಟ್ಟು 7,548,000 ಖಾತೆಗಳನ್ನು ನಿಷೇಧಿಸಲಾಗಿತ್ತು.

ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (End-to-End Encrypt) ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದರು ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ (Subscribers) ಮೇಲೆ ವಿಷೇಧ ವಿಧಿಸುತ್ತದೆ ಎಂದಿದ್ದಾರೆ.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ #WahtsAppBan ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು.

ವಾಟ್ಸ್​ಆ್ಯಪ್​ನಿಂದ ಫೋನ್ ಸ್ಟೋರೇಜ್ ಫುಲ್
ವಾಟ್ಸ್​ಆ್ಯಪ್​ನ್ನು ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದು, ಒಂದು ಗ್ರೂಪ್​ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ (Photo, Video) ಅಥವಾ ಜಿಫ್ ಫೈಲ್​ಗಳು ಬರುತ್ತಲೇ ಇರುತ್ತದೆ.

ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ (Phone Gallery) ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್​ಆ್ಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ (Storage-Data) ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.

ನಮ್ಮ ಮೊಬೈಲ್ (Mobile)​ನಲ್ಲಿರುವ ಕೆಲವು ಅಪ್ಲಿಕೇಷನ್​ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್​ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್​ಗಳನ್ನು (Applications) ಮೊದಲು ಅನ್ಇನ್‌ಸ್ಟಾಲ್ ಮಾಡಿ.

ಭವ್ಯಶ್ರೀ ಆರ್ ಜೆ

Exit mobile version