ವಾಟ್ಸಾಪ್‌ ಚಾಟ್ ಸೀಕ್ರೆಟ್ ಆಗಿರಬೇಕಾ? ಹಾಗಾದ್ರೆ ಸೀಕ್ರೆಟ್ಆಗಿ ಫೋನಿನಲ್ಲಿ ಈ ಸೆಟ್ಟಿಂಗ್ ಲಾಕ್ ಮಾಡಿ

ವಾಟ್ಸಾಪ್ ಈಗ ಇನ್ನಷ್ಟು ಸುರಕ್ಷಿತವಾಗಿಸುವ ವೈಶಿಷ್ಟ್ಯವೊಂದಿದ್ದು, ವಿಶೇವಾಗಿ (WhatsApp chat be secret) ವಾಟ್ಸಾಪ್ ಚಾಟ್‌ಗೆ ಸೀಕ್ರೆಟ್ ಕೋಡ್ (Secret Code) ಬಳಸಬಹುದು.

ಇದನ್ನು ಹೇಗೆ ಬಳಸುವುದು, ಇದರ ಮಹತ್ವವೇನು ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ.

ಲಾಕ್ ಮಾಡಲು ತುಂಬಾ ಅನುಕೂಲವಾಗಿದೆ. ಈಗ ವಾಟ್ಸಾಪ್ ಸೀಕ್ರೆಟ್ ಕೋಡ್‌’ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಇದು ಚಾಟ್‌ಗಳಿಗೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ. ಆದರೆ, ಸದ್ಯಕ್ಕೆ

ಈ ವೈಶಿಷ್ಟ್ಯ ಎಲ್ಲರಿಗೂ ಸಿಗುತ್ತಿಲ್ಲ. ಬೀಟಾ (Beta) ಆವೃತ್ತಿಯಲ್ಲಿ ಇದು ಲಭ್ಯವಿದ್ದು, ಶೀಘ್ರದಲ್ಲಿಯೇ ಎಲ್ಲಾ ಬಳಕೆದಾರರಿಗೂ ಇದು ಲಭ್ಯವಾಗುವ ಸಾಧ್ಯತೆ ಇದೆ.

ಇದು ವಿಶೇಷವಾಗಿ ಬೇರೆ ಯಾರಾದರೂ ನಿಮ್ಮ ಫೋನ್‌ನ (Phone) ಪ್ರವೇಶ ಪಡೆದರೆ ಅಥವಾ ನೀವು ನಿಮ್ಮ ಫೋನ್ ಅನ್ನು ಬೇರೆಯರಿಗೆ ತಾತ್ಕಾಲಿಕವಾಗಿಯೂ ಬೇರೆಯವರೊಂದಿಗೆ

ಹಂಚಿಕೊಂಡರೆ ಈ ವಿಶೇಷವಾದ ಕೋಡ್ ಮೂಲಕ ನೀವು ಸೀಕೆಟ್ ಕೋಡ್ ಬಳಸಿದರೆ ನಿಮ್ಮ ಚಾಟ್‌ಗಳನ್ನು ನೋಡಲು ಇತರರಿಗೆ ಕಷ್ಟವಾಗುತ್ತದೆ.ಹಾಗಾಗಿ ನೀವು ಚಾಟ್ ಮಾಡಿರು

ಮೆಸ್ಸೆಜ್ ಗಳನ್ನೂ (Message) ನೋಡದೆ ಇರುವ ಹಾಗೆ (WhatsApp chat be secret) ಈ ವೈಶಿಷ್ಟ್ಯ ಪ್ರಯೋಜನಕ್ಕೆ ಬರುತ್ತದೆ.

ಮತ್ತು ಬಳಕೆದಾರರು ತಮ್ಮ ಲಾಕ್ ಮಾಡಿದ ಚಾಟ್‌ಗಳಿಗೆ ಬೇರೆ ಬೇರೆ ಪಾಸ್‌ವರ್ಡ್ (Password) ಅನ್ನು ಬಳಸಬಹುದು ಅಲ್ಲದೆ ಇದರ ಮೂಲಕ ಹೆಚ್ಚುವರಿ ಭದ್ರತೆಯನ್ನು ಒದಗಿಸಬಹುದು.

ಲಾಕ್ ಮಾಡಿದ ಚಾಟ್ಸ್‌ ಫೋಲ್ಡರ್‌ಗಳಲ್ಲಿ (Chats Folder) ಮರೆ ಮಾಡಲಾಗುವ ಚಾಟ್‌ಗಳನ್ನು ಸೀಕ್ರೆಟ್ ಕೋಡ್ ನಮೂದಿಸುವ ಮೂಲಕ ಮತ್ತೆ ಪಡೆಯಬಹುದು.

ಚಾಟ್ ಲಾಕ್ ಮಾಡುವುದು ಹೇಗೆ?
ಮೊದಲು ಚಾಟ್‌ಗಳಲ್ಲಿ ಕೆಳಗೆ ಸ್ವೈಪ್ ಮಾಡುವ ಮೂಲಕ ಚಾಟ್ ಲಾಕ್ ಫೋಲ್ಡರ್ (Chat Lock Folder) ತೆರೆಯಬೇಕು.ನಂತರ ಚಾಟ್ ಲಾಕ್‌ ಸೆಟ್ಟಿಂಗ್‌ಗಳನ್ನು ಓಪನ್ ಮಾಡಿ ಬಲ

ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿರಿ .ನಂತರ “ಸೀಕ್ರೆಟ್ ಕೋಡ್” ಅನ್ನು ಟ್ಯಾಪ್ ಮಾಡಿ. ರಹಸ್ಯ ಕೋಡ್‌ಗಳು ಪದಗಳು ಅಥವಾ ಎಮೋಜಿಗಳನ್ನು ಒಳಗೊಂಡಿರುವ

ಹಾಗೆ ಕಾಡ್ ಫೀಡ್ ಮಾಡಿ. ನಿಮ್ಮ ಸೀಕ್ರೆಟ್ ಕೋಡ್ ರಚಿಸಿ ಹಾಗೂ ಮುಂದೆ ಟ್ಯಾಪ್ ಮಾಡಿ ನಿಮ್ಮ ಕೋಡ್ ಅನ್ನು ದೃಢೀಕರಿಸಿ ಹಾಗೂ `ಡನ್’ ಅನ್ನು ಟ್ಯಾಪ್ ಮಾಡಿ ಈಗ ಹೈಡ್ ಲಾಕ್‌ಡ್‌

ಚಾಟ್ಸ್‌ ಅನ್ನು (Hide locked Chats) ಟ್ಯಾಗಲ್ ಮಾಡಿ.ಇಗ ನಿಮ್ಮ

ಒಮ್ಮೆ ಲಾಕ್ ಮಾಡಿದ ಚಾಟ್‌ಗಳು ನಿಮ್ಮ ಚಾಟ್ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಲಾಕ್ ಆಗಿರುವ ಚಾಟ್‌ಗಳನ್ನು ನೀವು ನೋಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ನಲ್ಲಿನ ಸರ್ಚ್ ಬಾರ್‌ನಲ್ಲಿ ನಿಮ್ಮ

ಸೀಕ್ರೆಟ್ ಕೋಡ್ ಅನ್ನು ನಮೂದಿಸಿ ಅಥವಾ ಚಾಟ್ಸ್ ಟ್ಯಾಬ್‌ಗೆ ಹೋಗಿ ನಂತರ ಲಾಕ್ ಮಾಡಿದ ಚಾಟ್‌ಗಳನ್ನು ಆಯ್ಕೆಮಾಡಿ. ಚಾಟ್‌ಗಳನ್ನು ಅನ್‌ಲಾಕ್ ಮಾಡಲು ಫೇಸ್ ಐಡಿ ಅಥವಾ ಫಿಂಗರ್‌

ಪ್ರಿಂಟ್ ಸೆನ್ಸರ್‌ಗಳನ್ನು ಬಳಸಿಕೊಂಡು ನಿಮ್ಮ ಗುರುತನ್ನು ನೀವು ನಮೂದಿಸಿ ಒಮ್ಮೆ ಅನ್‌ಲಾಕ್ ಮಾಡಿದ ನಂತರ, ಸಂದೇಶವನ್ನು ವೀಕ್ಷಿಸಲು ಅಥವಾ ಕಳುಹಿಸಲು ನೀವು ಚಾಟ್‌ನಲ್ಲಿ ಟ್ಯಾಪ್

ಮಾಡಿದರೆ ಗುಟ್ಟಾಗಿ ಇರುವ ಚಾಟ್ಗಳನ್ನು ನೀವು ಮಾತ್ರ ನೋಡಬಹುದು.

ಚಾಟ್ ಲಾಕ್ ಬಳಸಿ ವಾಟ್ಸಾಪ್ ಚಾಟ್‌ಗಳನ್ನು ಲಾಕ್ ಮಾಡುವುದು ಹೇಗೆ…?
ನೀವು ಲಾಕ್ ಮಾಡಲು ಬಯಸುವ ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ ಅಥವಾ ದೀರ್ಘವಾಗಿ ಒತ್ತಿರಿ ಲಾಕ್ ಚಾಟ್ ಟ್ಯಾಪ್ ಮಾಡಿ. ಫಿಂಗರ್‌ಪ್ರಿಂಟ್‌ನೊಂದಿಗೆ (Fingerprint) ಈ ಚಾಟ್ ಅನ್ನು ಲಾಕ್ ಆಗುತ್ತದೆ

ಫೇಸ್ ಐಡಿಯೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಬಹುದು. ಬೇಕಾದ ಆಯ್ಕೆಯನ್ನು ಟ್ಯಾಪ್ ಮಾಡಿ.ಈರೀತಿ ಮಾಡುವುದರಿಂದ ನಿಮ್ಮ ಸೀಕ್ರೆಟ್ಸ್ ಅನ್ನು ಸೀಕ್ರೆಟ್ ಆಗಿ ಇಡಲು ತುಂಬಾ ಸಹಾಯವಾಗುತ್ತದೆ.

ಇದನ್ನು ಓದಿ: ಗ್ಯಾರಂಟಿ ಎಫೆಕ್ಟ್ : ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಉಚಿತ ಔಷಧಿ ; ಬಡರೋಗಿಗಳ ಪರದಾಟ

Exit mobile version