ವಾಟ್ಸ್ಯಾಪ್ ಚಾಟ್ ಲೀಕ್ ಆಗುವ ಸಾಧ್ಯತೆ ಇದೆ ಎಚ್ಚರ…

ವಾಟ್ಸ್ಯಾಪ್‌ನಲ್ಲಿ ಸುರಕ್ಷಿತ ಚಾಟ್ ಮಾಡಬಹುದೆಂದು ತಿಳಿದುಕೊಂಡಿದ್ದೇವೆ. ಆದರೆ ವಾಟ್ಸ್ಯಾಪ್ನಲ್ಲಿ ನಿಮ್ಮ ಚಾಟ್‌ಗಳು ಲೀಕ್ ಆಗುವ ಎಲ್ಲಾ ಸಾದ್ಯತೆಗಳಿವೆ. ಅದು ಹೇಗೆ? ಇಲ್ಲಿದೆ ಉತ್ತರ.

ವಾಟ್ಸಾಪ್ ಚ್ಯಾಟ್ ಬ್ಯಾಕ್ ಅಪ್ ನಿಮ್ಮ ಮೊಬೈಲ್‌ನಲ್ಲಿ ಸೇವ್ ಆಗುತ್ತದೆ. ಇದನ್ನು ಪೂರ್ವನಿಯೋಜಿತವಾಗಿ ಐ ಕ್ಲೌಡ್ಗೆ ಹೊಂದಿಸಲಾಗಿದೆ. ಆಪನ್ನು ಬಳಕೆ ಮಾಡುವಾಗ ಇರುವಂತಹ ಸುರಕ್ಷತೆ, ಐಕ್ಲೌಡ್‌ನಲ್ಲಿ ಸೇವ್ ಆದಾಗ ಆ ಚ್ಯಾಟ್ ಬ್ಯಾಕಪ್‌ಗೆ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಇದರಿಂದಾಗಿ ಐಕ್ಲೌಡಲ್ಲಿರುವ ಬ್ಯಾಕಪ್ಪನ್ನು ತೆಗೆದುಕೊಂದು  ಚ್ಯಾಟ್ ಮಾಡಿದ್ದನ್ನು ನೋಡಬಹುದಾಗಿದೆ. ಡಿಲಿಟ್ ಫಾರ್ ಎವ್ರಿಒನ್ ಎಂಬ ಆಯ್ಕೆಯನ್ನು ವಾಟ್ಸಾಪ್ ನೀಡಿದ್ದರೂ ಮೆಸೇಜ್ ಬಂದ ತಕ್ಷಣ ಸ್ಕ್ರೀನ್ ಸೋಟ್ ತೆಗೆದರೆ ಅದು ನಿಮ್ಮ ಮೊಬೈಲಲ್ಲಿ ಸೇವ್ ಆಗುತ್ತದೆ. ಈ ಆಯ್ಕೆಯನ್ನು ತೆಗೆದು ಹಾಕಬೇಕೆಂದು ಜನ ಅಭಿಪ್ರಾಯಪಡುತ್ತಿದ್ದಾರೆ.

Exit mobile version