ವಾಟ್ಸಾಪ್ View Once Featureನ ಬಳಕೆ ಹೇಗೆ ?

ವಾಟ್ಸಾಪ್‌ ತನ್ನ ಬಳಕೆದಾರರಿಗಾಗಿ ಸದಾ ಒಂದಲ್ಲ ಒಂದು ಹೊಸತನ್ನು ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೆ  ವಾಟ್ಸಾಪ್‌ನಲ್ಲಿ ವಾಟ್ಸಾಪ್ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.

ಆದರೆ, ಈ ಚಾಟ್ ಅಥವಾ ಇದರಲ್ಲಿನ ಫೋಟೊ, ವಿಡಿಯೋ ಫೋನಿನಲ್ಲಿ ಎಲ್ಲಿಯೂ ಸೇವ್ ಆಗಿರುವುದಿಲ್ಲ ಹಾಗೂ ಇದನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಕೂಡ ಮಾಡಲಾಗುವುದಿಲ್ಲ ಎಂಬುದು ಬೇಸರದ ಸಂಗತಿ.

ಈ View Once Feature ತನ್ನದೇ ಆದ ಕೆಲ ಅನುಕೂಲತೆಗಳೊಂದಿಗೆ ಕೆಲ ಅನಾನುಕೂಲಗಳನ್ನು ಸಹ ಹೊಂದಿದೆ. ಚಾಟ್ ಒಂದನ್ನು ಓಪನ್ ಮಾಡಿದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಮಾಯವಾಗುವುದು ಹೊಸ ಫೀಚರ್ನ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ.

Exit mobile version