download app

FOLLOW US ON >

Monday, August 8, 2022
Breaking News
ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಮೌತ್ ವಾಶ್ ಬಳಕೆ ಮಿತಿಯಲ್ಲಿರಲಿ, ಇಲ್ಲದಿದ್ದಲ್ಲಿ ಅಪಾಯ ಖಂಡಿತ

ಮೌತ್ ವಾಶ್ ಅತಿ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಅದು ಹೇಗೆ ಎಂದು ತಿಳಿಯೋಣ.

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೌತ್ ವಾಶ್ ಬಳಸುವುದು ಒಳ್ಳೆಯದೇ. ಆದರೆ ಅದನ್ನು ಅತಿಯಾಗಿ ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಹೌದು, ಮೌತ್ ವಾಶ್ ಅತಿ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಅದು ಹೇಗೆ ಎಂದು ತಿಳಿಯೋಣ.

ಮೌತ್ ವಾಶ್ ಕುರಿತ ಅಧ್ಯಯನವು ಏನು ಹೇಳುತ್ತದೆ?:

‘ಕ್ವೀನ್ ಮೇರಿ ಯೂನಿವರ್ಸಿಟಿ’ಯು ನಿರ್ದಿಷ್ಟ ಬ್ರಾಂಡ್‌ನ ನಂಜುನಿರೋಧಕ ಮೌತ್ ವಾಶ್ ನ್ನು ಅಧ್ಯಯನ ಮಾಡಿದೆ. ಮೌತ್ ವಾಶ್ ನ ದೈನಂದಿನ ಬಳಕೆಯು ಹೃದಯಾಘಾತದ ಅಪಾಯವನ್ನು ಏಳು ಪ್ರತಿಶತ, ಪಾರ್ಶ್ವವಾಯು ಅಪಾಯವನ್ನು 10 ಪ್ರತಿಶತದಷ್ಟು ಮತ್ತು ರಕ್ತದೊತ್ತಡದ ಅಪಾಯವನ್ನು 3.5 ಪ್ರತಿಶತ ಹೆಚ್ಚಿಸುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಪ್ರಮುಖ ಸಂಶೋಧಕ ಅಮೃತಾ ಅಹ್ಲುವಾಲಿಯಾ ಅವರ ಪ್ರಕಾರ, ಮೌತ್ ವಾಶ್ ನಲ್ಲಿರುವ ರಾಸಾಯನಿಕವು ಕೆಟ್ಟ ಬ್ಯಾಕ್ಟೀರಿಯಾಗಳು ಜೊತೆಗೆ ಉತ್ತಮ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತವೆ, ಇದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮೌತ್ವಾಶ್ ಬಳಸುವುದರ ಅನಾನುಕೂಲಗಳು:

ಡಯಾಬಿಟಿಸ್ ಅಪಾಯ ಹೆಚ್ಚಾಗಬಹುದು:

ಒಂದು ವರದಿಯ ಪ್ರಕಾರ, ಇತರರಿಗೆ ಹೋಲಿಸಿದರೆ, ಮೌತ್ವಾಶ್ ಕನಿಷ್ಠ 2 ಬಾರಿ ಬಳಸುವುದರಿಂದ ಜನರು 55% ಮಧುಮೇಹದ ಅಪಾಯವನ್ನು ಎದುರಿಸಿದ್ದಾರೆ ಎಂದು ಹೇಳಿದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ.

ಬಾಯಿ ಒಣಗುವುದು:

ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವ ಮೌತ್ ವಾಶ್ ಬಳಸುವುದರಿಂದ ನಿಮ್ಮ ಬಾಯಿ ಒಣಗುತ್ತದೆ. ಈ ಕಾರಣದಿಂದಾಗಿ ಬಾಯಿಯ ಕೆಟ್ಟ ವಾಸನೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮೌತ್ ವಾಶ್ ಬಳಸುವವರು ಜಾಗರೂಕರಾಗಿರಿ.

ಬಾಯಿ ಹುಣ್ಣು ಸಮಸ್ಯೆ:

ಮೌತ್ವಾಶ್ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವುದರಿಂದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಬಾಯಿಯೊಳಗೆ ಅಂಗಾಂಶಗಳ ನೋವು ಉಂಟುಮಾಡುತ್ತದೆ. ಆದ್ದರಿಂದ ಆಲ್ಕೋಹಾಲ್ ಆಧಾರಿತ ಮೌತ್‌ವಾಶ್ ಬಳಸಬಾರದು. ಇದು ಬಾಯಿಯಲ್ಲಿ ಗುಳ್ಳೆಗಳನ್ನು ಉಂಟುಮಾಡಬಹುದು.

ರುಚಿ ಸಂವೇದನಾ ದುರ್ಬಲವಾಗಬಹುದು:

ರಾಸಾಯನಿಕಗಳ ಬಳಕೆಯು ಬಾಯಿಯೊಳಗಿನ ರುಚಿ ಸಂವೇದನಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಲ್ಲುಗಳ ಮೇಲೆ ಕಂದು ಬಣ್ಣದ ಕಲೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಅಲರ್ಜಿಗಳು ಸಂಭವಿಸಬಹುದು ಮತ್ತು ದೇಹಕ್ಕೆ ಪ್ರಯೋಜನವಾಗುವ ಬ್ಯಾಕ್ಟೀರಿಯಾವನ್ನು ಸಹ ಅದರ ಬಳಕೆಯಿಂದ ನಿರ್ಮೂಲನೆ ಮಾಡಬಹುದು.

ಸಲಹೆ:

ಯಾವುದೇ ಕಾರಣಕ್ಕಾಗಿ ಹಲ್ಲುಜ್ಜಿದ ನಂತರ ನೀವು ಮೌತ್ವಾಶ್ ಬಳಸಲು ಬಯಸಿದರೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ಹೇಳಿದ ಮೌತ್ ವಾಶ್ ಬಳಸಿ. ವೈದ್ಯರ ಸಲಹೆಯಿಲ್ಲದೆ ಬಳಸುವ ಮೌತ್‌ವಾಶ್ ನಿಮ್ಮ ಬಾಯಿ ಮತ್ತು ಹಲ್ಲು ಎರಡನ್ನೂ ಹಾನಿಗೊಳಿಸುತ್ತದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article