ಮೌತ್ ವಾಶ್ ಬಳಕೆ ಮಿತಿಯಲ್ಲಿರಲಿ, ಇಲ್ಲದಿದ್ದಲ್ಲಿ ಅಪಾಯ ಖಂಡಿತ

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೌತ್ ವಾಶ್ ಬಳಸುವುದು ಒಳ್ಳೆಯದೇ. ಆದರೆ ಅದನ್ನು ಅತಿಯಾಗಿ ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಹೌದು, ಮೌತ್ ವಾಶ್ ಅತಿ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಅದು ಹೇಗೆ ಎಂದು ತಿಳಿಯೋಣ.

ಮೌತ್ ವಾಶ್ ಕುರಿತ ಅಧ್ಯಯನವು ಏನು ಹೇಳುತ್ತದೆ?:

‘ಕ್ವೀನ್ ಮೇರಿ ಯೂನಿವರ್ಸಿಟಿ’ಯು ನಿರ್ದಿಷ್ಟ ಬ್ರಾಂಡ್‌ನ ನಂಜುನಿರೋಧಕ ಮೌತ್ ವಾಶ್ ನ್ನು ಅಧ್ಯಯನ ಮಾಡಿದೆ. ಮೌತ್ ವಾಶ್ ನ ದೈನಂದಿನ ಬಳಕೆಯು ಹೃದಯಾಘಾತದ ಅಪಾಯವನ್ನು ಏಳು ಪ್ರತಿಶತ, ಪಾರ್ಶ್ವವಾಯು ಅಪಾಯವನ್ನು 10 ಪ್ರತಿಶತದಷ್ಟು ಮತ್ತು ರಕ್ತದೊತ್ತಡದ ಅಪಾಯವನ್ನು 3.5 ಪ್ರತಿಶತ ಹೆಚ್ಚಿಸುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಪ್ರಮುಖ ಸಂಶೋಧಕ ಅಮೃತಾ ಅಹ್ಲುವಾಲಿಯಾ ಅವರ ಪ್ರಕಾರ, ಮೌತ್ ವಾಶ್ ನಲ್ಲಿರುವ ರಾಸಾಯನಿಕವು ಕೆಟ್ಟ ಬ್ಯಾಕ್ಟೀರಿಯಾಗಳು ಜೊತೆಗೆ ಉತ್ತಮ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತವೆ, ಇದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮೌತ್ವಾಶ್ ಬಳಸುವುದರ ಅನಾನುಕೂಲಗಳು:

ಡಯಾಬಿಟಿಸ್ ಅಪಾಯ ಹೆಚ್ಚಾಗಬಹುದು:

ಒಂದು ವರದಿಯ ಪ್ರಕಾರ, ಇತರರಿಗೆ ಹೋಲಿಸಿದರೆ, ಮೌತ್ವಾಶ್ ಕನಿಷ್ಠ 2 ಬಾರಿ ಬಳಸುವುದರಿಂದ ಜನರು 55% ಮಧುಮೇಹದ ಅಪಾಯವನ್ನು ಎದುರಿಸಿದ್ದಾರೆ ಎಂದು ಹೇಳಿದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ.

ಬಾಯಿ ಒಣಗುವುದು:

ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವ ಮೌತ್ ವಾಶ್ ಬಳಸುವುದರಿಂದ ನಿಮ್ಮ ಬಾಯಿ ಒಣಗುತ್ತದೆ. ಈ ಕಾರಣದಿಂದಾಗಿ ಬಾಯಿಯ ಕೆಟ್ಟ ವಾಸನೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮೌತ್ ವಾಶ್ ಬಳಸುವವರು ಜಾಗರೂಕರಾಗಿರಿ.

ಬಾಯಿ ಹುಣ್ಣು ಸಮಸ್ಯೆ:

ಮೌತ್ವಾಶ್ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವುದರಿಂದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಬಾಯಿಯೊಳಗೆ ಅಂಗಾಂಶಗಳ ನೋವು ಉಂಟುಮಾಡುತ್ತದೆ. ಆದ್ದರಿಂದ ಆಲ್ಕೋಹಾಲ್ ಆಧಾರಿತ ಮೌತ್‌ವಾಶ್ ಬಳಸಬಾರದು. ಇದು ಬಾಯಿಯಲ್ಲಿ ಗುಳ್ಳೆಗಳನ್ನು ಉಂಟುಮಾಡಬಹುದು.

ರುಚಿ ಸಂವೇದನಾ ದುರ್ಬಲವಾಗಬಹುದು:

ರಾಸಾಯನಿಕಗಳ ಬಳಕೆಯು ಬಾಯಿಯೊಳಗಿನ ರುಚಿ ಸಂವೇದನಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಲ್ಲುಗಳ ಮೇಲೆ ಕಂದು ಬಣ್ಣದ ಕಲೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಅಲರ್ಜಿಗಳು ಸಂಭವಿಸಬಹುದು ಮತ್ತು ದೇಹಕ್ಕೆ ಪ್ರಯೋಜನವಾಗುವ ಬ್ಯಾಕ್ಟೀರಿಯಾವನ್ನು ಸಹ ಅದರ ಬಳಕೆಯಿಂದ ನಿರ್ಮೂಲನೆ ಮಾಡಬಹುದು.

ಸಲಹೆ:

ಯಾವುದೇ ಕಾರಣಕ್ಕಾಗಿ ಹಲ್ಲುಜ್ಜಿದ ನಂತರ ನೀವು ಮೌತ್ವಾಶ್ ಬಳಸಲು ಬಯಸಿದರೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ಹೇಳಿದ ಮೌತ್ ವಾಶ್ ಬಳಸಿ. ವೈದ್ಯರ ಸಲಹೆಯಿಲ್ಲದೆ ಬಳಸುವ ಮೌತ್‌ವಾಶ್ ನಿಮ್ಮ ಬಾಯಿ ಮತ್ತು ಹಲ್ಲು ಎರಡನ್ನೂ ಹಾನಿಗೊಳಿಸುತ್ತದೆ.

Exit mobile version