ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಪ್ಪು ಪತ್ರ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ್ ಖರ್ಗೆ

New Delhi: ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ವಿರುದ್ಧವಾಗಿ ಎಐಸಿಸಿ ಅಧ್ಯಕ್ಷ (White Paper vs Black Paper) ಮಲ್ಲಿಕಾರ್ಜುನ್ ಖರ್ಗೆ (Mallikarjun Kharge)

ಅವರು ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ 2014ರಿಂದ 2024ರವರೆಗೆ ಮೋದಿ ಸರ್ಕಾರದ ಅವಧಿಯ ಲೋಪಗಳ ಬಗ್ಗೆ ಮಾಹಿತಿ ನೀಡುವ ಮೂಲಕ 10ವರ್ಷದ

ಅನ್ಯಾಯ ಕಾಲ ಅನ್ನುವ ಬ್ಲ್ಯಾಕ್ ಪೇಪರನ್ನು (White Paper vs Black Paper) ಬಿಡುಗಡೆ ಮಾಡಿದರು..

ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ಬಿಜೆಪಿ (BJP) ಸರ್ಕಾರ ಮಾತನಾಡಲ್ಲ. ನೆಹರು ಕಾಲದಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಿಸಲಾಯಿತು.

ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು, ಅಥಾವ ಉದ್ಯೋಗ ಸೃಷ್ಟಿ ಮಾಡಿಲ್ಲ. ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ

ಅನುದಾನ ನೀಡುವುದಿಲ್ಲ. ಆಮೇಲೆ ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಉದ್ದೇಶ ಪೂರ್ವಕವಾಗಿ ಅವರು ಹಣ ಕೊಡಬಾರದು ಎಂದು ನಿರ್ಧರಿಸಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು. ಬಿಜೆಪಿ ಅವರು ಆಡಳಿತ ವೈಫಲ್ಯಗಳನ್ನು

ಮುಚ್ಚಿಕೊಳ್ತಾರೆ. ನಾವು ಇದನ್ನು ಪ್ರಶ್ನಿಸಿದಾಗ ಅದಕ್ಕೆ ಮಹತ್ವ ನೀಡಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಕಪ್ಪು ಪತ್ರ ಬಿಡುಗಡೆ ಮಾಡುತ್ತಿದ್ದೇವೆ.

ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎನ್ನುವ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡ್ತಿದ್ದಾರೆ.

ದೇಶದಲ್ಲಿ ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನೀವು ಈಗ ಆಡಳಿತ ನಡೆಸುತ್ತಿದ್ದೀರಿ. ಈಗ ಏನ್

ಮಾಡುತ್ತಿದ್ದೀರಿ ಹೇಳಬೇಕು. ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದಾರೆ.

ರೈತರು ಧರಣಿ ಕೂತಿದ್ದರು, ಒಂದು ವರ್ಷ ಪ್ರತಿಭಟನೆ ನಡೆಸಿದರು. ಮೂರು ಕಾನೂನು ತಂದು ಮತ್ತೆ ವಾಪಸ್ ಪಡೆದರು. ರೈತರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಂಬಲ ಬೆಲೆ ಹೆಚ್ಚಿಸುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ಈವರೆಗೂ ಅದು ಆಗಿಲ್ಲ ಸಂಸತ್‌ನಲ್ಲಿ ಮಾತೂ ಆಡಲ್ಲ. ಅವರ ಎಲ್ಲ ಭರವಸೆ ಸುಳ್ಳಾಗಿದೆ.

ಕೃಷಿ ಬಳಕೆ ವಸ್ತುಗಳ ಮೇಲೆ‌ ಜಿಎಸ್‌ಟಿ ಹಾಕಲಾಗಿದೆ. ಎರಡು ಕೋಟಿ ಉದ್ಯೋಗ ಪ್ರತಿ ವರ್ಷ ನೀಡಬೇಕಿತ್ತು ನೀಡಿಲ್ಲ. ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.

ಮೋದಿ (Modi) ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ.

‘ಕಪ್ಪು’ ಪತ್ರದಲ್ಲಿ ಏನಿದೆ?
ಮೋದಿ ಸರ್ಕಾರ ಕೊಟ್ಟ ಭರವಸೆಯಂತೆ ಉದ್ಯೋಗ ಸೃಷ್ಟಿಸಲು ವಿಫಲ
MSMEಗಳಿಗೆ ಸೂಕ್ತ ಬೆಂಬಲ, ಪೋತ್ಸಾಹ ನೀಡಿಲ್ಲ
ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ
ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪ
ದೇಶದಲ್ಲಿ ಕೋಮು‌ ಸೌಹಾರ್ದತೆ ಕಾಪಾಡಲು ಮೋದಿ ಸರ್ಕಾರ ವಿಫಲ
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಸರಿಯಾಗಿ ನೀಡುತ್ತಿಲ್ಲ
ಮೋದಿ ಕಾಲದಲ್ಲಿ ಬ್ಯಾಂಕ್ (Bank) ಸಾಲ ಪಡೆದ ಉದ್ಯಮಿಗಳು ವಿದೇಶಕ್ಕೆ ಪರಾರಿ
ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ವಾಪಸ್ ಕರೆತಂದು ಹಣ ವಸೂಲಿಯಲ್ಲಿ ವಿಫಲ

ಚುನಾವಣೆ ಬಾಂಡ್‌ಗಳ (Election Bond) ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ. ಮೊದಲು

ಯಾಕೆ ಇಷ್ಟು ಪ್ರಮಾಣದ ಹಣ ಬರ್ತಿರಲಿಲ್ಲ. ಈಗ್ಯಾಕೆ ಹಣ ಹೆಚ್ಚು ಬಿಜೆಪಿಗೆ ಬರ್ತಿದೆ. ಕೋಟ್ಯಾಂತರ ಹಣ ನೀಡಿ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ (Congress)

ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನನ್ನ ವಿರುದ್ಧ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ

ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಕರ್ನಾಟಕದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ ನಿಷೇಧ: ಆರೋಗ್ಯ ಇಲಾಖೆ

Exit mobile version