ಇರುವೆಗಳ ಗುಂಪು ಸತ್ತ ಇರುವೆಯನ್ನು ಹೊತ್ತುಕೊಂಡು ಹೋಗುವುದಾದರೂ ಎಲ್ಲಿಗೆ? ಇಲ್ಲಿದೆ ಮಾಹಿತಿ!

Dead ant

ಸತ್ತ ಇರುವೆಯನ್ನು(Ants) ಇತರ ಇರುವೆಗಳು ಗುಂಪಾಗಿ ಹೊತ್ತುಕೊಂಡು ಹೋಗುವುದನ್ನು ನೀವು ನೋಡಿರಬಹುದು. ಇದು ಸತ್ತ ಇರುವೆಯ ಜೊತೆ ಇತರ ಇರುವೆಗಳಿಗೆ ಇರುವ ಬಾಂದವ್ಯ ಎಂದು ನೀವು ಅಂದುಕೊಂಡರೆ ಅದು ತಪ್ಪು ಕಲ್ಪನೆ.

ಒಂದು ಇರುವೆ ಸತ್ತರೆ ಆ ಗುಂಪಿನ ಇತರ ಇರುವೆಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ಇರುವೆ ಸತ್ತ 2-4 ದಿನಗಳ ನಂತರ ಸತ್ತಿರುವ ಇರುವೆ ಕೊಳೆಯಲು ಪ್ರಾರಂಭಿಸುತ್ತದೆ. ಆಗ ಅದರ ದೇಹದಿಂದ ಓಲಿಕ್ ಆಮ್ಲ ಹೊರಬರಲು ಆರಂಭಿಸುತ್ತದೆ. ಸಾಮಾನ್ಯವಾಗಿ ಇರುವೆಗಳು ವಾಸನೆಯನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೇ ಶೀಘ್ರವಾಗಿ ಗ್ರಹಿಸುತ್ತವೆ, ಮತ್ತು ವಾಸನೆಗೆ ಅನುಗುಣವಾಗಿ ವಿವಿಧ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಇರುವೆಗಳು ಯಾವಾಗಲೂ ಒಂದರ ಹಿಂದೆ ಒಂದು ನೇರವಾಗಿ ಸರದಿಯಲ್ಲಿ ಹೇಗೆ ನಡೆಯುತ್ತವೆ ಎಂಬುದನ್ನು ಯೋಚಿಸಿದ್ದೀರಾ?

ಅದಕ್ಕೆ ಕಾರಣ ಇರುವೆಗಳು ಸೇವಿಸುವ ಫೆರೋಮೋನ್ ಎಂಬ ರಾಸಾಯನಿಕವೇ ಕಾರಣ. ಹೀಗೆ ಇರುವೆಗಳು ಮತ್ತೊಂದು ಇರುವೆ ಸತ್ತರೆ, ಅದರ ದೇಹದಿಂದ ಹೊರಸೂಸುವ ಒಲಿಕ್ ಆಮ್ಲವನ್ನು ಗ್ರಹಿಸಿ ಅದನ್ನು ಹೊತ್ತುಕೊಂಡು ಒಂದು ರೀತಿಯ ಡಂಪಿಂಗ್ ಗ್ರೌಂಡ್‌ಗೆ ಸಾಗಿಸುತ್ತವೆ. ಸತ್ತ ಇರುವೆಗಳು ಸಾಮಾನ್ಯವಾಗಿ ಸೋಂಕುಗಳನ್ನು ಹರಡುತ್ತೆ, ಈ ಸೋಂಕು ಇರುವೆಗಳಿಗೆ ಸಾಂಕ್ರಾಮಿಕ ರೋಗವನ್ನು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಳಿದ ಇರುವೆಗಳು ಈ ಸತ್ತ ಇರುವೆಯನ್ನು ತಮ್ಮ ಮುಖ್ಯ ವಸಾಹತಿನಿಂದ ದೂರ ಓಯ್ಯುವ ಮೂಲಕ ಸಾಂಕ್ರಾಮಿಕ ರೋಗದಿಂದ ಪಾರಾಗಲು ಪ್ರಯತ್ನಿಸುತ್ತವೆ.


ಆದರೆ ಇಲ್ಲಿ ಒಂದು ಆಸಕ್ತಿದಾಯಕ ವಿಷಯವನ್ನು ಗಮನಿಸಬೇಕು, ಇರುವೆಗಳು ಈ ವಿದ್ಯಮಾನವನ್ನು ರಾಸಾಯನಿಕದ ಹೊರಸೂಸುವಿಕೆಯಿಂದ ಮಾತ್ರವೇ ಗುರುತಿಸುತ್ತವೆ ಮತ್ತು ಆ ಇರುವೆ ನಿಜವಾಗಿಯೂ ಸತ್ತಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರೀಕ್ಷಿಸೋಕೆ ಹೋಗುವುದಿಲ್ಲ. ನೀವು ಒಂದು ವೇಳೆ ಜೀವಂತ ಇರುವೆಯ ಮೇಲೆ ಓಲಿಕ್ ಆಮ್ಲವನ್ನು ಸಿಂಪಡಿಸಿದರೆ, ಇತರ ಇರುವೆಗಳು ಒಲಿಕ್ ಆಸಿಡ್ ಸಿಂಪಡಿಸಲ್ಪಟ್ಟ ಇರುವೆಯನ್ನು ಬಲವಂತವಾಗಿ ಹಿಡಿದುಕೊಂಡು ಹೋಗಿ ಸತ್ತ ಇರುವೆಗಳ ಗುಂಪಿನಲ್ಲಿ ಹಾಕುತ್ತವೆ.

ಹೌದು, ಇರುವೆಗಳು ಸೋಂಕಿನ ಅಪಾಯದ ಬಗ್ಗೆ ಮಾತ್ರ ಯೋಚಿಸುವುದರಿಂದ ಒಲಿಕ್ ಆಸಿಡ್ ಸಿಂಪಡಣೆಗೊಳಗಾದ ಇರುವೆ ಸತ್ತಿದೆಯೇ ಅಥವಾ ಬದುಕಿದೆಯೇ ಎಂದು ಯೋಚಿಸುವುದಿಲ್ಲ.

Exit mobile version