ಡೆಡ್ಲಿ ಕಾರ್ಡಿಯಾಕ್ ಅರೆಸ್ಟ್ ಅಟ್ಯಾಕ್ ; ಕಾರ್ಡಿಯಾಕ್ ಅರೆಸ್ಟ್ ಗೆ ತುತ್ತಾಗುತ್ತಿರುವ ಯುವಜನತೆ!

ಕಾರ್ಡಿಯಾಕ್ ಅರೆಸ್ಟ್ ನ(Cardiac arrest) ರುದ್ರತಾಂಡವಕ್ಕೆ ಯುವಜನತೆಯೇ ಟಾರ್ಗೆಟ್. ಅಂದು ಚಿರಂಜೀವಿ ಸರ್ಜಾ, ಸಿದ್ಧಾರ್ಥ್, ಪುನೀತ್ ರಾಜ್ ಕುಮಾರ್ ಇಂದು ಆರ್ಜೆ ರಚನಾ. ಇವರಷ್ಟೇ ಅಲ್ಲ ಅನೇಕ ಯುವ ಪೀಳಿಗೆ ಹಾರ್ಟ್ ಅಟ್ಯಾಕ್ ನ ಕ್ರೌರ್ಯಕ್ಕೆ ಬಲಿಯಾಗ್ತಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಯುವಜನತೆಯನ್ನೇ ಟಾರ್ಗೆಟ್ ಮಾಡುತ್ತಿರುವ ಕಾರಣವೇನು? ಅಂದು ನಟ ಚಿರಂಜೀವಿ ಸರ್ಜಾ, ಸಿದ್ಧಾರ್ಥ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಂದು ಆರ್ ಜೆ ರಚನಾ ಕೂಡ ಹಾರ್ಟ್ ಅಟ್ಯಾಕ್ಗೆ ತುತ್ತಾಗಿರುವ ಚಿಕ್ಕ ವಯಸ್ಸಿನವರು. ಇವರಷ್ಟೇ ಅಲ್ಲ ಅನೇಕ ಯುವ ಪೀಳಿಗೆ ಇಂದು ಹಾರ್ಟ್ ಅಟ್ಯಾಕ್ ನ ಕ್ರೌರ್ಯಕ್ಕೆ ಬಲಿಯಾಗ್ತಿದ್ದಾರೆ.


ಹೃದಯ ಸ್ತಬ್ದಕ್ಕೆ ಕಾರಣವಾಗಿದ್ಯಾ ಕೊರೋನಾ ಗಾಳಿ? ಕಾರ್ಡಿಯಾಕ್ ಅರೆಸ್ಟ್ ಗೆ ತುತ್ತಾಗುತ್ತಿರುವ ಯುವಜನತೆ. ಕಾರ್ಡಿಯಾಕ್ ಅರೆಸ್ಟ್ ಯುವಕರ ಮೇಲೆ ಛಾಟಿ ಬೀಸುತ್ತಿದೆ ಜೊತೆಗೆ ಇಂದಿನ ಪೀಳಿಗೆಯ ಯುವಕರು ಸಾವಿನ ಮನೆ ಮುಟ್ಟಲು ಕಾರಣವಾಗಿದೆ ಈ ಕಾರ್ಡಿಯಾಕ್ ಅರೆಸ್ಟ್. ಇಂದು ಹೆಚ್ಚಾಗಿ ಯುವಜನತೆಯ ಮೇಲೆ ಕಾರ್ಡಿಯಾಕ್ ಅರೆಸ್ಟ್ ಟಾರ್ಗೆಟ್ ಮಾಡ್ತಿದೆ.

Rj ರಚನಾ ಇವ್ರ ಸಾವಿಗೆ ಕಾರಣ ಏನು.?

ಮಾತಿನ ಮಲ್ಲಿಯ ಸಾವಿಗೆ ಕಾರಣವಾಯ್ತು ಕಾರ್ಡಿಯಾಕ್ ಅರೆಸ್ಟ್. ಹೆಚ್ಚಾಗಿ ಯುವಕರ ಮೇಲೆ ಯಾಕೆ ಈ ಕಾರ್ಡಿಯಾಕ್ ಅರೆಸ್ಟ್ ತನ್ನ ಕಬಂಧ ಬಾಹುವನ್ನು ಬೀಸ್ತಿದೆ ಎಂಬುದು ತಿಳಿಯದ ವಿಷಯವಾಗಿದೆ. ಇದನ್ನ ಹೇಗೆ ತಡೆಗಟ್ಟಬಹುದು ಎಂಬುದನ್ನು ಮುಂದೆ ತಿಳಿದುಕೊಳ್ಳುವ. ಕನ್ನಡಿಗರ ಮನೆ ಮಾತಾಗಿದ್ದ Rj ರಚನಾ ವಿಧಿವಶರಾಗಿದ್ದು, ಅವರ ಅಭಿಮಾನಿಗಳಲ್ಲಿ ನೋವು ತಂದಿದೆ. ಜೆಪಿನಗರ ಫ್ಲ್ಯಾಟ್ ನಲ್ಲಿ Rj ರಚನಾಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನವೇ ವಿಧಿವಶವಾದರು. ಅವರ ಸಾವು ಎಲ್ಲರಿಗೂ ಬಹಳ ನೋವು ತಂದಿದೆ.
ಸುಮಾರು 7 ವರ್ಷದಿಂದ RJ ರಚನಾ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಅವರು ಒಬ್ಬರೇ ಇದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇಷ್ಟು ಚಿಕ್ಕ ವಯಸ್ಸಿನಲ್ಲೇ ಇವರಿಗೆ ಸಾವು ಬಂದಿದ್ದು ನೋವಿನ ಸಂಗತಿ. ಇವರ ಸಾವಿಗೆ ಕಾರಣವಾದದ್ದು ಕಾರ್ಡಿಯಾಕ್ ಅರೆಸ್ಟ್. ಹೃದಯ ಸ್ಥಗಿತವಾದ ಕಾರಣ ಅವರು ವಿಧಿವಶರಾದರು.ಕಾರ್ಡಿಯಾಕ್ ಅರೆಸ್ಟ್ ಕರಾಳ ರೂಪಕ್ಕೆ ಯುವಕರೆ ಬಲಿಯಾಗ್ತಿದ್ದಾರೆ. ಹೌದು, ಹೃದಯಾಘಾತವು ಇಂದಿನ ಯುವಪೀಳಿಗೆಯಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ. ಅದರಲ್ಲೂ ಹೃದಯಘಾತದ ಲಕ್ಷಣವು ಚಿಕ್ಕ ವಯಸ್ಸಿನ್ನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆಯೇ ಬರುತ್ತೆ.

ಹೃದಯಾಘಾತದ ಲಕ್ಷಣಗಳು :
ಎದೆ ನೋವು, ಭುಜ ನೋವು, ಕತ್ತಿನ ಎಡ ಭಾಗದಲ್ಲಿ ನೋವು, ಉಸಿರಾಡಲು ಕಷ್ಟವಾಗುತ್ತದೆ. ವಾಂತಿ, ಬೆವರು, ಇಲ್ಲದ ಆತಂಕಗಳು ಹೆಚ್ಚಾಗುತ್ತದೆ. ಹೃದಯದ ಬಡಿತವು ಹೆಚ್ಚಾಗುತ್ತದೆ.

ಹೃದಯಘಾತಕ್ಕೆ ಕಾರಣಗಳು :
ಅತಿಯಾದ ಜಿಮ್ ಮತ್ತು ವ್ಯಾಯಾಮ. ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ಯುವಕ, ಯುವತಿಯರು ಕೂಡ ದಿನದಿಂದ ದಿನಕ್ಕೆ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡ್ತಿದ್ದ‍ಾರೆ. ಅದರಲ್ಲಿ ಈ ಜಿಮ್ ಕೂಡ ಒಂದು ಅತಿಯಾದ ವ್ಯಾಮೋಹ. ಮಿತಿಮೀರಿದ ವ್ಯಾಯಾಮ ಮಾಡುವುದು. ದೇಹಕ್ಕೆ ಹಾಗೂ ಹೃದಯಕ್ಕೆ ಉತ್ತಮವಲ್ಲ. ಇದು ಹೃದಯಘಾತಕ್ಕೆ ಬಹುಮುಖ್ಯ ಕಾರಣ. ಅತಿಯಾದ ಜಿಡ್ಡು ಪದಾರ್ಥ ಸೇವನೆ. ಇಂದಿನ ದಿನಗಳಲ್ಲಿ ಉಪಯೋಗಿಸುತ್ತಿರುವ ಅಡಿಗೆ ಎಣ್ಣೆಯು ಕೂಡ ಶುದ್ಧವಾಗಿಲ್ಲ. ಸಂಪೂರ್ಣ ಕೆಮಿಕಲ್ ಭರಿತವಾದ ಅಡುಗೆ ಎಣ್ಣೆಯಾಗಿದೆ. ಇದು ದೇಹದಲ್ಲಿ ಹೆಚ್ಚಾಗಿ ಜಿಡ್ಡನ್ನು ಉಂಟುಮಾಡುತ್ತದೆ. ಇದರಿಂದ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಮತ್ತು ಹೃದಯಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ.

ಮಾದಕ ವಸ್ತುಗಳ ಸೇವನೆ :
ಮಾದಕ ವಸ್ತುಗಳ ಸೇವನೆಗೆ ಉದಾಹರಣೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಮಾದಕ ಪ್ರಿಯರೇ ಆಗಿದ್ದಾರೆ. ಗಾಂಜಾ, ಬೀಡಿ ,ಸಿಗರೇಟ್, ಡ್ರಗ್ಸ್, ಬಿಯರ್, ಹೀಗೆ ನಾನಾ ರೀತಿಯ ಅಮಲು ಪದಾರ್ಥ ಸೇವಿಸುತ್ತಾರೆ. ಇದು ದೇಹ ಮತ್ತು ಹೃದಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ನೇರವಾಗಿ ಹೃದಯ ಮತ್ತು ನರವ್ಯೂಹಕ್ಕೆ ಘಾಸಿಯುಂಟು ಮಾಡುತ್ತವೆ.

ನಿದ್ರೆಯ ಕೊರತೆ : ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಿನಕ್ಕೆ 6 ರಿಂದ 7 ತಾಸಾದರೂ ನಿದ್ದೆ ಮಾಡಲೇಬೇಕು. ನಿದ್ದೆಗೆ ಸಮಯ ಕೊಡದೆ ಕೇವಲ ಕೆಲಸದ ಒತ್ತಡಕ್ಕೆ ಒಳಗಾಗಿ ಕೆಲಸ ಮುಗಿಸುವ ಸಲುವಾಗಿ ನಿದ್ದೆ ಕಡಿಮೆ ಮಾಡುವುದು ಹೃದಯಾಘಾತಕ್ಕೆ ಬಹುಮುಖ್ಯ ಕಾರಣವಾಗಿದೆ. ಅಧಿಕವಾದ ಒತ್ತಡ ನೇರವಾಗಿ ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ.

ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕ : ದೇಹದಲ್ಲಿ ಕೊಲೆಸ್ಟ್ರಾಲ್ ಅತೀ ಹೆಚ್ಚಾಗಿ ಇರುವುದು ಹಾರ್ಟ್ ಅಟ್ಯಾಕ್ಗೆ ಕಾರಣವಾಗಿದೆ. ಅದರಲ್ಲೂ ಕೂಡ ಅಧಿಕ ತೂಕವಿದ್ದರೆ ಹಾರ್ಟ್ ಅಟ್ಯಾಕ್ ಅತಿವೇಗದಲ್ಲಿ ಮನುಷ್ಯನ ಮೇಲೆ ಅಟ್ಯಾಕ್ ಮಾಡುತ್ತದೆ.

ಅತಿಯಾದ ಮಾತ್ರೆ ಸೇವನೆ : ಇಂದಿನ ಯುಗದಲ್ಲಿ ಚಿಕ್ಕಪುಟ್ಟ ಆರೋಗ್ಯ ತೊಂದರೆಯಾದರೂ ನಾವು ಅತಿಯಾದ ಮಾತ್ರೆ ಸೇವನೆ ಮಾಡುತ್ತೇವೆ. ಉದಾಹರಣೆ ತಲೆನೋವಿನ ಮಾತ್ರೆ, ಜ್ವರದ ಮಾತ್ರೆ, ಹೊಟ್ಟೆ ನೋವಿನ ಮಾತ್ರೆ, ಹಾಗೂ ಗರ್ಭನಿರೋಧಕ ಮಾತ್ರೆ ಹೀಗೆ ಅನೇಕ ರೀತಿಯ ಮಾತ್ರೆಯನ್ನು ಸೇವಿಸುವುದರಿಂದಲೂ ಕೂಡ ಹಾರ್ಟ್ ಅಟ್ಯಾಕ್ ಆಗುತ್ತದೆ.

ಕಳಪೆ ಮಟ್ಟದ ಆಹಾರ ಸೇವನೆ :
ಇಂದಿನ ಯುವ ಪೀಳಿಗೆಯು ಪ್ರತಿನಿತ್ಯ ತಮ್ಮ ಜೀವನ ಶೈಲಿ ಮತ್ತು ಆಹಾರ ಕ್ರಮವನ್ನು ಬದಲಾಯಿಸುತ್ತಲೇ ಇರುತ್ತಾರೆ. ಈ ಶತಮಾನದ ಯುವಕರೆಲ್ಲರೂ ಕೂಡ ಜಂಕ್ ಫುಡ್, ಜಿಡ್ಡು ಪದಾರ್ಥ ಸೇವನೆ, ಕೋಕೊ ಕೋಲಾ ಹೀಗೆ ಅನೇಕ ರೀತಿಯ ಕಳಪೆ ಮಟ್ಟದ ಆಹಾರವನ್ನು ಸೇವಿಸುತ್ತಾರೆ. ಇದು ಬಹುಮುಖ್ಯವಾಗಿ ಹಾರ್ಟ್ ಅಟ್ಯಾಕ್ ಗೆ ಕಾರಣವಾಗಿದೆ.

ಮಧುಮೇಹ ಮತ್ತು ರಕ್ತದೊತ್ತಡ :
ಮಧುಮೇಹ ಹೆಚ್ಚುತ್ತಿರುವುದು ಒಂದುದೊಡ್ಡ ಅಪಾಯವೇ ಆಗಿದೆ. ಅಷ್ಟೇ ಅಲ್ಲ ದೇಹಕ್ಕೆ ಹೆಚ್ಚು ಶ್ರಮವಾದಂತೆ ಅಲ್ಲಿ ಅಧಿಕ ರಕ್ತದೊತ್ತಡ ಕೂಡ ಉಂಟಾಗುತ್ತದೆ. ಮಧುಮೇಹದ ಹೆಚ್ಚಳಕ್ಕೆ ಕಾರಣಗಳು. ಡೈರಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳ ಯಥೇಚ್ಛವಾದ ಸೇವನೆ.

Exit mobile version