`ಕೈʼ ಬಿಟ್ಟು, `ತೆನೆʼ ಹೊರಲು ಮುನಿಯಪ್ಪ ತಯಾರಿ?

Muniyappa

ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ(KH Muniyappa) ಕಾಂಗ್ರೆಸ್ ಪಕ್ಷಕ್ಕೆ(Congress Party) ಗುಡ್ಬೈ ಹೇಳಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.


ರಾಜ್ಯ ಕಾಂಗ್ರೆಸ್(State Congress) ನಾಯಕರ ವಿರುದ್ದ ತೀವ್ರ ಬೇಸರ ವ್ಯಕ್ತಪಡಿಸಿರುವ ಕೆ.ಎಚ್.ಮುನಿಯಪ್ಪ ನನಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ನನ್ನ ವಿರುದ್ದ ಕೆಲಸ ಮಾಡುತ್ತಿರುವ, ನನ್ನ ವಿರೋಧಿಗಳನ್ನ, ನನ್ನ ವಿರುದ್ದವೇ ಬೆಳೆಸಲಾಗುತ್ತಿದೆ ಎಂದು ಮುನಿಯಪ್ಪನವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ತೊರೆದು, ಜೆಡಿಎಸ್(JDS) ಸೇರ್ಪಡೆ ಕುರಿತು ದೇವೇಗೌಡರ(Devegowda) ಜೊತೆ ಮಾತುಕತೆ ಶುರುವಾಗಿದೆ. ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಮುನಿಯಪ್ಪ ತಮ್ಮ ಮಗಳಿಗೆ ಟಿಕೆಟ್ ನೀಡುವ ಸಂಬಂಧ ದೇವೇಗೌಡರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕೆ.ಎಚ್.ಮುನಿಯಪ್ಪ ಜೆಡಿಎಸ್ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುನಿಯಪ್ಪನವರು ತೆನೆ ಹೊರಲಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ, ಡಾ. ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ದ ಆಕ್ರೋಶಗೊಂಡಿರುವ ಮುನಿಯಪ್ಪ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳಿಂದ ದೂರ ಸರಿದಿರುವ ಮುನಿಯಪ್ಪ ಜೆಡಿಎಸ್ ಸೇರ್ಪಡೆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಬೆಂಬಲಿಗರ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಬೆಂಬಲಿಗರ ಸಭೆಯ ನಂತರ ಎಚ್.ಮುನಿಯಪ್ಪನವರು ತಮ್ಮ ಅಂತಿಮ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ. ಇನ್ನು ಸತತ ಏಳು ಬಾರಿ ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆಯಾಗಿದ್ದ ಮುನಿಯಪ್ಪ ಅವರು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Exit mobile version