ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

 ರಾಮನಗರ ನ 11 : ಮನೆಯಲ್ಲಿ ವಾಮಾಚಾರ ಮಾಡಿದರೆ ನಿಧಿ ಸಿಗುತ್ತದೆ ಎಂದು ಹೇಳಿ ವಂಚಿಸಿ ಮಹಿಳೆಯೊಬ್ಬಳನ್ನು ಬೆತ್ತಲೆಯಾಗಿಸಿ ಪೂಜೆ ಮಾಡುತ್ತಿದ್ದ ತಮಿಳುನಾಡಿನ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಭೂಹಳ್ಳಿ ಗ್ರಾಮದಲ್ಲಿ ಈ ಆರೋಪಿಗಳನ್ನು ಸಾತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಭೂಹಳ್ಳಿ ಗ್ರಾಮದ ಶ್ರೀನಿವಾಸ್‌ ಎಂಬುವರನ್ನು ನಂಬಿಸಿ ವಾಮಾಚಾರ ಮಾಡುತ್ತಿದ್ದ ತಮಿಳುನಾಡು ಮೂಲದ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳವಾರ ತಡರಾತ್ರಿ ಶ್ರೀನಿವಾಸ್‌ರವರ ನೂರು ವರ್ಷಗಳಷ್ಟು ಹಳೆಯ ಮನೆಯಲ್ಲಿ ಮಹಿಳ ಒಬ್ಬಳನ್ನು ಬೆತ್ತಲೆಯಾಗಿಸಿ ವಾಮಾಚಾರದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಸಾತನೂತು ಪೊಲೀಸರು, ತಮಿಳುನಾಡು ಮೂಲದ ಪ್ರಮುಖ ಆರೋಪಿ ಪಾರ್ಥಸಾರಥಿ, ಮೇಸ್ತ್ರಿ, ನಾಗರಾಜು, ಗುರೂಜಿ ಶಶಿಕುಮಾರ್, ಆತನ ಶಿಷ್ಯ ಮೋಹನ್ ಲಕ್ಷ್ಮಿ ನರಸಪ್ಪ ಹಾಗೂ ಲೋಕೇಶ್ ಎಂಬುವರನ್ನು ಬಂಧಿಸಿದ್ದಾರೆ.

ಮಾಂತ್ರಿಕನ ಸಲಹೆಯಂತೆ ಮಂಗಳವಾರ ರಾತ್ರಿ ಶ್ರೀನಿವಾಸ್ ಮನೆಯಲ್ಲಿ ಬೆಂಗಳೂರಿನ ಕೆಂಗೇರಿ ಮೂಲದ ಕೂಲಿ ಕೆಲಸ ಮಾಡುವ ಮಹಿಳೆಯನ್ನು 50 ಸಾವಿರ ನೀಡುವ ಆಸೆ ತೋರಿಸಿ ಕರೆತಂದ ಬೆತ್ತಲುಗೊಳಿಸಿ ಪೂಜೆ ಮಾಡಿದ್ದಾರೆ ಆ ಮಹಿಳೆ ತನ್ನ ಆರು ವರ್ಷದ ಮಗುವನೂ, ಜತೆಗೆ ಕರೆದುಕೊಂಡು ಬಂದಿದ್ದಳು.

Exit mobile version