ಪ್ರಕೃತಿಯ ಮಕರಂದ, ಹಚ್ಚ ಹಸಿರಾಗಿರಲು ದೇಶವೇ ಚಂದ: ಏನಂತೀರಾ?

World Environment Day 2024: ಪರಿಸರವು ಭೂತಾಯಿಯ ಮಡಿಲಲ್ಲಿ ಹಸಿರಿನಿಂದ ಕೂಡಿರುವುದನ್ನು ನೋಡುವುದೆ ಕಣ್ಣಿಗೆ ಆನಂದ. ಅದರಂತೆ ಮರ, ಗಾಳಿ, ಹರಿಯುವ ನದಿ ಮತ್ತು ಮಳೆ

ಇವೆಲ್ಲವೂ ಪ್ರಕೃತಿ ಸೌಂದರ್ಯದ ಒಂದು ಭಾಗಗಳು ಪರಿಸರವು ನಮ್ಮನ್ನೆಲ್ಲ ಮಗುವಂತೆ ತನ್ನ ಮಡಿಲಲ್ಲಿ ಒರಗಿಸಿಕೊಂಡು ಖುಷಿಯಿಂದ ಹೂವಂತೆ ಮುದ ನೀಡುತ್ತದೆ. ಇಂದು ನಾವೆಲ್ಲರೂ ಅಂದರೆ

‘ಜೂನ್ (June) 5‘ ರಂದು ವಿಶ್ವ ಪರಿಸರ ದಿನಾಚರಣೆ (World Environment Day 2024)ಯನ್ನು ಆಚರಿಸಿಕೊಳ್ಳುತ್ತಿದ್ದೇವೆ. ಯಾಕೆ? ನಾವು ಪರಿಸರ ದಿನಾಚರಣೆಯನ್ನು ಆಚರಿಸಿಕೊಳ್ಳಬೇಕು ಮತ್ತು

ಪ್ರಕೃತಿಯ ಕುರಿತು ಹೇಗೆ ? ಜಾಗೃತೆವಹಿಸಬೇಕು ಬನ್ನಿ ತಿಳಿಯೋಣ…

World Environment Day 2024

ಪರಿಸರವೇ ಹಾಗೆ ಯಾವುದೇ ಜಾತಿ ಭೇದವಿಲ್ಲದೆ ಮನುಷ್ಯನಿಗೆ ನಿಸ್ವಾರ್ಥದಿಂದ ಪ್ರೀತಿಯನ್ನು ಉಣಬಡಿಸುತ್ತದೆ. ಇನ್ನು ಶಾಲಾ ಕಾಲೇಜುಗಳಲ್ಲಿ (School-Collage) ಯನ್ನು ವಿಜೃಂಭಣೆಯಿಂದ

ಆಚರಿಸುತ್ತಾ ನೋಡುವವರ ಕಣ್ಣಿಗೆ ರಸದೌತಣ ನೀಡುತ್ತದೆ. ಎಷ್ಟೋ ಜನರು ಪರಿಸರದ ಮಡಿಲಲ್ಲಿ ಮಿಂದೇಳಬೇಕೆಂದು ಪ್ರವಾಸಕ್ಕೆ ಹೋಗುತ್ತಾರೆ. ಪ್ರಕೃತಿಯ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತ

ತಮ್ಮಲ್ಲಿರುವ ಒತ್ತಡಕ್ಕೆ ವಿರಾಮ ಹಾಕುತ್ತಾರೆ.

ಇನ್ನು ಪರಿಸರ ದಿನಾಚರಣೆ ಎಂದಾಗ ಜನರು ಆ ದಿನದಂದು ಮರ ಗಿಡಗಳತ್ತ ಕಣ್ಣು ಹಾಯಿಸುತ್ತಾರೆ, ಈ ಪರಿಸರದ ಮೇಲಿನ ಕಾಳಜಿ ಪ್ರತಿನಿತ್ಯವೂ ಇದ್ದರೆ ಪ್ರೀತಿ ಎಂಬ ಬೀಜವನ್ನು ಬಿತ್ತಿ ಸ್ವಚ್ಛಂದವಾಗಿ

ಹರಿಯುವ ನದಿಯಂತೆ ಮಾನವನ ಪಾಲಿಗೆ ಬೇಳಕೆಂಬ ಫಲ ಕೊಡುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ

ಇನ್ನು ಮನುಷ್ಯ ಜೀವಿಯ ವಿಚಾರಕ್ಕೆ ಬಂದರೆ ಆಸೆ ಎಂಬುವುದಕ್ಕೆ ಅಂತ್ಯವೇ ಇಲ್ಲ. ಮರ ಕಡಿಯುವುದು ಮತ್ತು ಬೋರ್ವೆಲ್ ಗಳನ್ನು ಹಾಕಿಸುವುದು, ನದಿಗಳನ್ನು ಕಲುಷಿತಗೊಳಿಸುವುದು,

ವಾಯು ಮಾಲಿನ್ಯ ಮಾಡುವುದು ಇವೆಲ್ಲವೂ ಪ್ರಕೃತಿಯ ವಿಕೋಪಕ್ಕೆ ದಾರಿ ಇದು ಆಗಬಾರದು ಎಂದರೆ ಹೆಚ್ಚು ಮರಗಳನ್ನು ಬೆಳೆಸಬೇಕು #Nature ನದಿಗಳನ್ನು ಕಾಪಾಡಬೇಕು. ಇದು ಮುಂದಿನ

ಪೀಳಿಗೆಯ ಏಳಿಗೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಜನರೆಲ್ಲರೂ ತಮ್ಮ ಬೇಸರವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಸ್ವಚ್ಛ ಗಾಳಿಯನ್ನು ಪಡೆಯಲು ಪಾರ್ಕ್ ಗಳ ಮೊರೆ ಹೋಗುತ್ತಾರೆ ಅದರಂತೆ

ಸಾಧ್ಯವಾದಷ್ಟು ಮನೆಯ ಮುಂದೆ ಗಿಡವನ್ನು ನೆಟ್ಟರೆ ನೀವೆಲ್ಲರೂ ಆರೋಗ್ಯದಿಂದ ಇರಬಹುದು.

ಇನ್ನೊಂದು ವಿಚಾರ ಏನೆಂದರೆ ಎಷ್ಟು ಔಷಧೀಯ ಗುಣಗಳು ಮರಗಿಡಗಳಲ್ಲಿ ನೋಡಬಹುದು, ಆಯುರ್ವೇದದ ಮುಖಾಂತರ ಸಾಕಷ್ಟು ಕಾಯಿಲೆಗಳನ್ನು ನಿವಾರಣೆಗೊಳಿಸಬಹುದು. ಅದಕ್ಕಾಗಿ ಎಲ್ಲರೂ

ಪರಿಸರವನ್ನು ಉಳಿಸುವುದರ ಕಡೆಗೆ ಗಮನಹರಿಸೋಣ. ಪ್ರಕೃತಿಯು ಏನಾದರೂ ನಮ್ಮ ಮೇಲೆ ಮುನಿಸಿಕೊಂಡರೆ ಪರಿಸರದ ಅಂತ್ಯಕ್ಕೆ ಮುನ್ನುಡಿ ಬರೆದಂತಾಗುತ್ತದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ

ಜೊತೆಗೆ ಪರಿಸರವನ್ನು ರಕ್ಷಿಸೋಣ. ಪ್ಲಾಸ್ಟಿಕ್ (Plastic) ಮುಕ್ತ ನಾಡನ್ನಾಗಿ ಬದಲಾಯಿಸೋಣ ಈ ವಿಷಯಕ್ಕಾಗಿ ಎಲ್ಲರೂ ಕಿವಿಗೊಡುವುದು ತುಂಬಾ ಮುಖ್ಯ. ಅದಕ್ಕಾಗಿ ಎಲ್ಲರೂ ಪರಿಸರವನ್ನು ರಕ್ಷಿಸಿ,

ಆರೋಗ್ಯಕರ ಜೀವನದತ್ತ ಮುಖ ಮಾಡಿರಿ. ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

ಇದನ್ನು ಓದಿ: ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ – ಸಿಎಂ ಸಿದ್ದರಾಮಯ್ಯ

Exit mobile version