ತಾಲಿಬಾನಿಗಳಿಂದ ಪಂಜ್‌ಶೀರ್ ಮೇಲೆ ದಾಳಿ 8 ತಾಲಿಬಾನಿಗಳ ಸಾವು

ಪಂಜ್‌ಶೀರ್ ಆ 31 : ಅಮೆರಿಕ ತನ್ನ ಸೈನ್ಯವನ್ನು ವಾಪಸ್‌ ಕರೆಸಿಕೊಂಡ ಬೆನ್ನಲ್ಲೆ ಮತ್ತೊಮ್ಮೆ ತಾಲಿಬಾನ್‌ ಉಗ್ರರು ಪಂಜ್‌ಶೀರ್‌ ಮೇಲೆ ದಾಳಿ ನಡೆಸಿದ್ದಾರೆ. ಅದರೆ ಉಗ್ರರ ವಿರುದ್ದ ಹೋರಾಡಿದ ಪಂಜ್‌ಶೀರ್‌ ಯೋಧರು ಸುಮಾರು 8 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಪಂಜ್‌ಶೀರ್ ವಕ್ತಾರ ಘಹೀಮ್ ಡೆಶ್ಟಿ ಸ್ಪಷ್ಟನೆ ನೀಡಿದ್ದು ಸೋಮವಾರ ರಾತ್ರಿ ತಾಲಿಬಾನ್ ಉಗ್ರರಯ ಹಲವು ಭಾಗಗಳಿಂದ ಪಂಜ್​ಶೀರ್ ಕಣಿವೆ ಮೇಲೆ ದಾಳಿ ನಡೆಸಿದ್ದರು. ಆದರೆ ಅವರನ್ನು ಒಳಗೆ ಪ್ರವೇಶಿಸಲು ನಿಗ್ರಹ ಪಡೆ ಅವಕಾಶ ನೀಡಿಲ್ಲ. ಈ ವೇಳೆ ತಾಲಿಬಾನ್ ಉಗ್ರರು ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ನಮ್ಮವರಿಗೂ ಕೂಡ ಸಾಕಷ್ಟು ಗಾಯಗಳಾಗಿವೆ. ಆದರೂ ನಾವು ತಾಲಿಬಾನ್ ಪಡೆಯ 7 ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಕೂಡ ಪಂಜಶೀರ್ ಮೆಲೆ ದಾಳಿ ಮಾಡಲು ಪ್ರಯತ್ನಿಸಿದ ಸುಮಾರು 300 ತಾಲಿಬಾನಿಗಳನ್ನು ಪಂಜಶೀರ್ ಯೋಧರು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಪಂಜಶೀರ್ ಮುಖಂಡ ನಾವು ಯಾವುದೇ ಕಾರಣಕ್ಕೂ ಪಂಜಶೀರ್‌ನ್ನು ಕಣಿವೆಯನ್ನು ಬಿಟ್ಟು ಕೊಡುವುದಿಲ್ಲ ನಾವು ಅಫ್ಘಾನ್ ಅಧ್ಯಕ್ಷನಂತೆ ಹೆದರಿ ಓಡಿಹೋಗುವುದಿಲ್ಲ ತಾಕತ್ತಿದ್ದರು ಯುದ್ದಮಾಡಿ ಗೆಲ್ಲಿ ಎಂದು ತಾಲಿಬಾನಿಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದರು.

Exit mobile version