ವಿಪರೀತ ಕೆಮ್ಮಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ವ್ಯಕ್ತಿ : ಸ್ಕ್ಯಾನ್ ನಲ್ಲಿ ನೋಡಿದಾಗ ದೇಹ ಪೂರ್ತಿ ಹುಳುಗಳು!

ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ವೈದ್ಯರು ಸಾಮಾನ್ಯವಾಗಿ ಅನೇಕ ವಿಚಿತ್ರವಾದ ಕಾಯಿಲೆಗಳನ್ನು (disease) ಪತ್ತೆ ಹಚ್ಚಿದ್ದಾರೆ ಹಾಗೂ ಮಾನವ ದೇಹದಿಂದ ಅಸಾಮಾನ್ಯ ವಸ್ತುಗಳು ಕೂಡ ಕಂಡು ಬಂದಿದೆ. ಈ ಹಿಂದೆ ವೈದ್ಯಕೀಯ (Worms all over the body) ಸಮುದಾಯವನ್ನು ಬೆಚ್ಚಿಬೀಳಿಸಿದ ಒಂದು ಘಟನೆ ಎಂದರೆ ಮನುಷ್ಯನ ಹೊಟ್ಟೆಯೊಳಗೆ ಕಂಡುಬಂದ ಕೂದಲು ಮತ್ತು ಬಗೆಬಗೆಯ ವಸ್ತುಗಳು.

ಮತ್ತೊಂದು ಘಟನೆಯಲ್ಲಿ ವೈದ್ಯರು ರೋಗಿಯ ಕಣ್ಣಿನಿಂದ ಜೀವಂತ ಹುಳುವನ್ನು ತೆಗೆದುಹಾಕಿದರು. ಮೂಗುಗಳಿಂದ ಕೀಟಗಳನ್ನು ಹೊರತೆಗೆದ ಅನೇಕ ವಿಲಕ್ಷಣ ಪ್ರಕರಣಗಳಿವೆ.

ತೀರಾ ಇತ್ತೀಚಿನ ಪ್ರಕರಣದಲ್ಲಿ, ನಿರಂತರ ಕೆಮ್ಮಿಗಾಗಿ ವೈದ್ಯಕೀಯ ಆರೈಕೆಯನ್ನು ಪಡೆದ ವ್ಯಕ್ತಿಯೊಬ್ಬರು ಅವರ ದೇಹದಲ್ಲಿ ಹಲವಾರು ಹುಳಗಳನ್ನು ವೈದ್ಯರು ಕಂಡುಹಿಡಿದಾಗ ಆಶ್ಚರ್ಯಚಕಿತರಾದರು.

ಹಂದಿಮಾಂಸದ ಸೇವನೆಯಿಂದ ದೇಹಕ್ಕೆ ಸೇರಿಕೊಂಡಿದ್ದವು ಹುಳಗಳು :

ಹಲವಾರು ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳಿಗೆ ಒಳಗಾದ ನಂತರ, ವ್ಯಕ್ತಿಯು ಹಂದಿಮಾಂಸವನ್ನು ಸೇವಿಸುವುದರಿಂದ ಹುಳುಗಳಿಗೆ (Worms all over the body) ತುತ್ತಾಗಿರುವುದು ಪತ್ತೆಯಾಗಿದೆ.

ಮಾನವನ ಮಲದಿಂದ ಹುಟ್ಟುವ ಲಾಡಿ ಹುಳಗಳ ಮೊಟ್ಟೆಗಳನ್ನು ಒಳಗೊಂಡಿರುವ ಕಲುಷಿತ ಆಹಾರ ಅಥವಾ ನೀರನ್ನು ಸೇವಿಸುವುದರಿಂದ ಈ ಭಯಾನಕ ಸಮಸ್ಯೆ ಬರುತ್ತದೆ.

ಈ ವ್ಯಕ್ತಿಯು ಅಂಗಾಂಶದ ಸೋಂಕಾದ ಸಿಸ್ಟಿಸರ್ಕೋಸಿಸ್‌ನಿಂದ (Cysticercosis) ಬಳಲತ್ತಿದ್ದಾರೆ ಎಂದು ಹೆಚ್ಚಿನ ಪರೀಕ್ಷೆಗಳು ದೃಢಪಡಿಸಿದವು.

ಇದನ್ನೂ ಓದಿ : https://vijayatimes.com/10-lakhs-for-astrologers-reward/

ಕಿವಿ ನೋವಿನಿಂದ ಆಸ್ಪತ್ರೆಗೆ ಬಂದ ಮುದುಕನ ಕಿವಿಯನ್ನು ನೋಡಿ ವೈದ್ಯರೇ ಕಂಗಾಲು

ಕೆಲವು ವರ್ಷಗಳ ಹಿಂದೆಯಿಂದ ನಿರಂತರವಾದ ತಲೆನೋವು ಮತ್ತು ರೋಗಗ್ರಸ್ತವಾಗುವಿಕೆಗಳ ಬಗ್ಗೆ ದೂರು ನೀಡಿದ

ನಂತರ ಝೆಜಿಯಾಂಗ್ ಪ್ರಾಂತ್ಯದ (Zhejiang Province) ಆಸ್ಪತ್ರೆಗೆ ಒಬ್ಬ ವ್ಯಕ್ತಿಯನ್ನು ದಾಖಲಿಸಲಾಯಿತು.

ನಂತರ ಡಾ ವಾಂಗ್ ಜಿಯಾನ್-ರಾಂಗ್ ರವರು ಈ ರೋಗಿಯ ವೈದ್ಯಕೀಯ ಪರೀಕ್ಷೆಯನ್ನು ಮಾಡಿದರು.

ಇವರು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿದ್ದರು. ನಂತರ ರೋಗಿಯ ಪ್ರಮುಖ ಅಂಗಗಳ ಸಂಪೂರ್ಣ ಸ್ಕ್ಯಾನ್ ಮಾಡಿದಾಗ ಆ ರೋಗಿಯ ವ್ಯಕ್ತಿಯ ಮೆದುಳು,

ಎದೆ ಮತ್ತು ಶ್ವಾಸಕೋಶದಲ್ಲಿ ಸುಮಾರು 700 ಲಾಡಿ ಹುಳಗಳಿವೆ ಎಂದು ಸ್ಕ್ಯಾನ್‌ನಲ್ಲಿ ತಿಳಿದು ಬಂದಿತು. ಅವರು ಟೇನಿಯಾಸಿಸ್, ಲಾಡಿ ಹುಳಗಳ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕಂಡುಹಿಡಿದರು.

ಇದನ್ನೂ ಓದಿ : https://vijayatimes.com/karavali-district-polling/

ಈ ಕಾಯಿಲೆಯು ಸಾಮಾನ್ಯವಾಗಿ ತಲೆನೋವು, ತಲೆತಿರುಗುವಿಕೆ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಒಬ್ಬ ವ್ಯಕ್ತಿಯು ಲಾಡಿಹುಳಗಳ ಮೊಟ್ಟೆಗಳನ್ನು ನುಂಗಿದ ನಂತರ ಈ ಸೋಂಕು ಉಂಟಾಗುತ್ತವೆ.

ಈ ಸೊಂಕಿನಲ್ಲಿ ಮೊದಲು ಹುಳದ ಮೊಟ್ಟೆಯು ನಮ್ಮ ದೇಹದ ಸ್ನಾಯು ಮತ್ತು ಮೆದುಳಿನಂತಹ ಅಂಗಾಂಶಗಳನ್ನು ಪ್ರವೇಶಿಸುತ್ತವೆ.

ಕಳಪೆ ಬೇಯಿಸಿದ ಹಂದಿ ಮಾಂಸವನ್ನು ತಿನ್ನುವುದರಿಂದ ಈ ಸಮಸ್ಯೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಈ ರೋಗ ಸೋಂಕಿತ ಜನರ ಮಲದಲ್ಲಿ ಲಾಡಿ ಹುಳಗಳ ಮೊಟ್ಟೆಗಳು ಇರುತ್ತವೆ.

ಈ ಆರೋಗ್ಯ ಸಮಸ್ಯೆಯು ಟೇನಿಯಾ ಸೋಲಿಯಮ್ (Taenia solium) ಎಂದು ಎಂದು ಕರೆಯಲ್ಪಡುತ್ತದೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

Exit mobile version