ಶಿಂಜೋ ಅಬೆ ಹತ್ಯೆಗೆ ಕಾರಣ ತಿಳಿಸಿದ ಹಂತಕ ಯಮಗಾಮಿ

Shinzo Abe

ಜಪಾನ್‌ನ(Japan) ಮಾಜಿ ಪಧಾನಿ(Former Primeminister) ಶಿಂಜೊ ಅಬೆ(Shinzo Abe) ಅವರನ್ನು ಗುಂಡು ಹಾರಿಸಿ ಹತ್ಯೆ(Murder) ಮಾಡಿರುವ ಜಪಾನ್‌ನ ನಾರಾ ನಗರದ ನಿವಾಸಿ ಮತ್ತು ಜಪಾನೀಸ್ ನೌಕಾಪಡೆಯಾಗಿರುವ ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ನ ಮಾಜಿ ಉದ್ಯೋಗಿ ಟೆಟ್ಸುಯಾ ಯಮಗಾಮಿ ಹತ್ಯೆಯ ಕಾರಣವನ್ನು ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.


ಟೆಟ್ಸುಯಾ ಯಮಗಾಮಿ ಜಪಾನೀಸ್ ನೌಕಾಪಡೆಯಾಗಿರುವ ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತನಾಗಿದ್ದನು. ನಿವೃತ್ತಿಯ ನಂತರ ಈತನಿಗೆ ಯಾವುದೇ ಕೆಲಸವಿಲ್ಲದ ಕಾರಣ, ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ನಿರುದ್ಯೋಗ ಸಮಸ್ಯೆ ಈತನನ್ನು ಬಹುವಾಗಿ ಕಾಡಿತ್ತು. ಜಪಾನ್‌ನಲ್ಲಿ ನಿರುದ್ಯೋಗ ಸೃಷ್ಟಿಯಾಗಲು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ರಾಜಕೀಯ ನಿಲುವುಗಳೇ ಕಾರಣ ಎಂದು ಈತ ವಾದಿಸುತ್ತಿದ್ದನು.

ಹೀಗಾಗಿಯೇ ನಿರುದ್ಯೋಗದಿಂದ ಬೇಸತ್ತು ಮತ್ತು ಶಿಂಜೊ ಅಬೆ ಅವರ ರಾಜಕೀಯ ನಡೆಯಿಂದ ಅಸಮಾಧಾನಗೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಈತ ಆಯುಧಗಳ ಬಳಕೆಯಲ್ಲಿ ಪರಿಣಿತನಾಗಿದ್ದನು. ಹೀಗಾಗಿ ಮನೆಯಲ್ಲಿಯೇ ದೇಸಿ ಗನ್‌ ತಯಾರಿಸಿದ್ದನು. ಜಪಾನ್‌ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಪರವಾನಗಿ ಕೂಡ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಹೀಗಾಗಿ ಈತನೇ ಸ್ವತಃ ಅನೇಕ ದಿನಗಳ ಕಾಲ ಶ್ರಮವಹಿಸಿ ಹತ್ಯೆಗೆ ಬೇಕಾಗುವ ಗನ್‌ ತಯಾರಿಸಿದ್ದನು.

ಇದೇ ಗನ್‌ನಿಂದ ಕೇವಲ ೧೦ ಅಡಿಗಳ ಅಂತರದಿಂದ ಎರಡು ಸುತ್ತು ಗುಂಡು ಹಾರಿಸಿ, ಶಿಂಜೊ ಅಬೆ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಜಪಾನ್‌ ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ. ಇನ್ನು ಜಪಾನ್ ಇತಿಹಾಸದಲ್ಲೇ ಜಪಾನ್ನ ಹಾಲಿ ಅಥವಾ ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡಿರುವುದು ಇದೇ ಮೊದಲು. ಇನ್ನು ಶಿಂಜೊ ಅಬೆ ಅವರ ಹತ್ಯೆಗೆ ಸಂತಾಪ ಸೂಚಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಒಂದು ದಿನದ ಶೋಕಾಚರಣೆ ಘೋಷಿಸಿದ್ದಾರೆ.

Exit mobile version