ನವದೆಹಲಿ, ಅ. 16: ಕೊರೊನಾ ಮಹಾಮಾರಿ ದೇಶದಾದ್ಯಂತ ಉದ್ಯೋಗಿಗಳ ಭವಿಷ್ಯವನ್ನು ಕಿತ್ತುಕೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಂಡವರಿಗೆ ವೇತನ ಪರಿಹಾರ ನೀಡಲು ಕೇಂದ್ರ ಸರ್ಕಾರ ನೂತನ ಯೋಜನೆ ರೂಪಿಸಿದೆ.
ಸರ್ಕಾರ ಆಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ(ABVKY) ಅಭಿಯಾನವನ್ನು ನೌಕರರ ರಾಜ್ಯ ವಿಮಾ ನಿಗಮದಡಿ ನೊಂದಾಯಿತ ಉದ್ಯೋಗಿಗಳು ಕೆಲಸವನ್ನು ಖಾತ್ರಿ ಪಡಿಸಿಕೊಳ್ಳಲು ಆರಂಭಿಸಿದೆ. ನೌಕರರ ರಾಜ್ಯ ವಿಮಾ ನಿಗಮದಲ್ಲಿ ನೋಂದಾಯಿತ ಕಾರ್ಮಿಕರು ತಮ್ಮ ವೇತನದ ಶೇಕಡಾ 50 ರಷ್ಟನ್ನು ಮೂರು ತಿಂಗಳವರೆಗೆ ಪಡೆಯಬಹುದಾಗಿದೆ.
ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಅಭಿಯಾನ ಆರಂಭಿಸಲಾಗಿದ್ದು, ಕೆಲಸವನ್ನು ಪ್ರಾರಂಭಿಸಿದರು ಕೂಡ ನಿರುದ್ಯೋಗ ಪರಿಹಾರವಾಗಿ ವೇತನ ಪರಿಹಾರ ಪಡೆಯಲು ರಾಜ್ಯ ವಿಮಾ ನಿಗಮ 44 ಸಾವಿರ ಕೋಟಿ ರೂಪಾಯಿ ನೀಡಲು ಕ್ರಮ ಕೈಗೊಂಡಿದೆ. ಹಿಂದೆಯೇ ಯೋಜನೆ ಜಾರಿಯಾಗಿದ್ದರೂ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.