Bengaluru: ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಹಾಸನದ (Court denies bail for pendrive case) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದೆನ್ನಲಾದ ಅಶ್ಲೀಲ
ವೀಡಿಯೋ ಹಂಚಿದ ಆರೋಪದಲ್ಲಿ ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್, ನವೀನ್ಗೌಡ ಸೇರಿ ನಾಲ್ವರ ನಿರೀಕ್ಷಣ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಬೇಲೂರಿನ ಕಾಂಗ್ರೆಸ್ ಕಾರ್ಯಕರ್ತ ಚೇತನ್ (Chethan), ನವೀನ್ ಗೌಡ ( Naveen Gowda) ಅಲಿಯಾಸ್ ನವೀನ್ ಕುಮಾರ್ ಎನ್ ಆರ್,(Naveen Kumar N S) ಹೊಳೆನರಸೀಪುರ
ತಾಲ್ಲೂಕಿನ ಕಾರ್ತಿಕ್ (Karthik) ಮತ್ತು ಪುಟ್ಟರಾಜು (Puttaraju) ಅಲಿಯಾಸ್ ಪುಟ್ಟಿ ಪ್ರತ್ಯೇಕವಾಗಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ಆನಂದ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಘನತೆ ರಕ್ಷಣೆ ಮತ್ತು ಮಹಿಳೆಯರಿಗೆ ಮುಂದೆ ಆಗುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡದಿರುವುದು
ಅಗತ್ಯ ಎಂದಿದ್ದಾರೆ.
ಇಂಥವರಿಗೆ ಜಾಮೀನು ನೀಡುವುದರಿಂದ ಕಾನೂನು (Law) ಮತ್ತು ಸುವ್ಯವಸ್ಥೆ ಮುರಿದು ಬೀಳಲಿದ್ದು, ಮಹಿಳೆಯರ ಘನತೆಗೆ ಹಾನಿಯಾಗಲಿದೆ. ಇಂಥ ನಡೆಯು ಅಸಹಾಯಕ, ಧ್ವನಿ ಇಲ್ಲದ, ಮುಗ್ಧ
ಮಹಿಳೆಯರನ್ನು (Women’s) ಗುರಿಯಾಗಿಸಿ ಅವರಿಗೆ ಮುಜುಗರ ಉಂಟು ಮಾಡಿ ಅವರ ಕುಟುಂಬಕ್ಕೂ ನೋವು ನೀಡಲಿದೆ.ಈ ಮೂಲಕ ಸ್ಥಾಪಿತ ಹಿತಾಸಕ್ತಿಗಳಿಂದ ತಾವು ಮಾಡದ ತಪ್ಪಿಗೆ ಸಂತ್ರಸ್ತ
ಮಹಿಳೆಯರನ್ನು ಶಾಶ್ವತವಾಗಿ ಸಮಾಜದಿಂದ ಅವಮಾನ ಎದುರಿಸುತ್ತಾರೆ . ಸಮಾಜದಲ್ಲಿ ಇಂಥ ಸ್ಥಿತಿ ನಿರ್ಮಾಣ ಮಾಡುವುದು ಮಹಿಳೆಯರ ಉಳಿವಿಗೆ ಅಪಾಯ (danger) ತಂದೊಡ್ಡಲಿದೆ ಎಂದು
ನ್ಯಾಯಾಲಯ (Court) ಹೇಳಿದೆ.
ಅಷ್ಟಕ್ಕೂ ಸರ್ಕಾರಿ ಅಭಿಯೋಜಕರು ಅರ್ಜಿದಾರರ ವಿರುದ್ಧದ ಪ್ರಕರಣ (Case) ಪ್ರಾಥಮಿಕ ಹಂತದಲ್ಲಿದೆ. ಲಭ್ಯ ಮಾಹಿತಿಯ ಪ್ರಕಾರ ಅರ್ಜಿದಾರರು ಮೇಲ್ನೋಟಕ್ಕೆ ಅಪರಾಧ ಎಸಗಿದ್ದಾರೆ. ತನಿಖೆಯ
ಸಂದರ್ಭದಲ್ಲಿ ದೂರುದಾರ ತೇಜಸ್ವಿ ಅವರು ನೀಡಿದ 8 ಜಿಬಿ ಸ್ಯಾನ್ ಡಿಸ್ಕ್ ಪೆನ್ಡ್ರೈವ್ ಮತ್ತು ಏಳು ಪ್ರಿಂಟ್ಔಟ್ಗಳನ್ನು (Printout) ವಶಕ್ಕೆ ಪಡೆಯಲಾಗಿದೆ. ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳುವುದು
ಅಗತ್ಯವಾಗಿದ್ದು, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷಿಗಳಿಗೆ (Court denies bail for pendrive case) ಬೆದರಿಕೆ ಹಾಕುವ ಸಾಧ್ಯತೆ ಇದೆ.
ಅಪರಾಧದ ಕಾರಣ ಅರ್ಜಿದಾರರು ಅಡಗಿಕೊಳ್ಳುವ ಸಾಧ್ಯತೆ ಇದೆ. ಸಿ ಡಿ ಮತ್ತು ವಿಡಿಯೊಗಳನ್ನು (C.D and Video) ದೇಶಾದ್ಯಂತ ಪ್ರಸಾರ ಮಾಡಲಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ
ಪಡೆಯಬೇಕಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ತನಿಖೆ ಸಹಕರಿಸದೇ ಇರುವ ಸಾಧ್ಯತೆ ಇದೆ. ಇದು ತುರ್ತಾಗಿ ಪ್ರಕರಣ ಇತ್ಯರ್ಥಕ್ಕೆ ಅಡ್ಡಿಯಾಗಲಿದೆ ಹಾಗಾಗಿ ನ್ಯಾಯಾಲಯ ನಿರೀಕ್ಷಣಾ
ಜಾಮೀನು (Court denies bail for pendrive case) ಅರ್ಜಿಯನ್ನು ತಳ್ಳಿ ಹಾಕಿದೆ.
ಇದನ್ನು ಓದಿ: ನಿಮ್ಮ ತೂಕ ನಷ್ಟದ ಪ್ರಮಾಣವನ್ನು ವೇಗಗೊಳಿಸಲು ಸಹಕಾರಿಯಾಗಿದೆ ಈ ಡ್ರೈ ಪ್ರುಟ್ಸ್