ಕೊರೋನಾ ಮಹಾಮಾರಿ ಜನರ ಜೊತೆ ಚೆಲ್ಲಾಟವಾಡ್ತಾ ಇದೆ. ಇತ್ತ ಜನರನ್ನು ರಕ್ಷಣೆ ಮಾಡೋ ಆರಕ್ಷಕರಿಗೂ ಕೊರೋನಾ ರೋಗ ಅಂಟಿಕೊಂಡಿದೆ. ರಾಜ್ಯದಲ್ಲಿ ಸತತವಾಗಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗ್ತಿದೆ.
ಬುಧವಾರ ನಗರದಲ್ಲಿ ೫ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದ್ದು ಈವರೆಗೆ ಬೆಂಗಳೂರಿನಲ್ಲಿ ೪೧೬ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.ಇಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಂಚಾರಿ ಠಾಣೆಯ ಎಎಸ್ಐ , ಬ್ಯಾಟರಾಯನಪುರದ ಸಂಚಾರಿ ಠಾಣೆಯ ಮೂವರು ಹಾಗೂ ಕಾಮಾಕ್ಷಿ ಪಾಳ್ಯದ ಎಎಸ್ ಐಗೆ ಕೊರೋನಾ ಸೋಂಕು ದೃಢಪಟ್ಟಿದೆ.