Bangaluru: ಈಗಾಗಲೇ ಬಿಸಿಲಿನಿಂದ (sun) ಬಳಲಿದ್ದ ಬೆಂಗಳೂರಿನಲ್ಲಿ (Bengaluru) ಕೊನೆಗೂ ಮಳೆ (Rain) ಆರಂಭವಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನತೆಗೆ ಮರೆಯಾಗಿದ್ದ ಮಳೆರಾಯನ ಆಗಮನದಿಂದ ಸಂತಸ ಮೂಡಿದೆ.ಆದರೆ ರಾಜಧಾನಿಯಲ್ಲಿ (capital) ಪ್ರತಿ ಮಳೆಗಾಲದಲ್ಲಿ ರಾಜಕಾಲುವೆಗಳಿಂದಾಗುವ (royal canals) ಅವಾಂತರಗಳನ್ನು ತಪ್ಪಿಸಲು ಬಿಬಿಎಂಪಿ (BBMP) ಅಲರ್ಟ್ ಆಗಿದೆ. ಈಗಾಗಲೇ ರಾಜಕಾಲುವೆ ಕ್ಲೀನಿಂಗ್ ನಡೆಸುತ್ತಿರುವ ಪಾಲಿಕೆ, ರಾಜಕಾಲುವೆಗೆ (Rājakāluvege) ಕಸ, ಘನತ್ಯಾಜ್ಯ ಎಸೆಯುವವರಿಗೆ ಬಿಸಿ ಮುಟ್ಟಿಸಲು ಹೊಸ ನಿಯಮ ಜಾರಿ ಮಾಡಲು ಹೊರಟಿದೆ.
ಕೆಲ ರಾಜಕಾಲುವೆಗಳ ಬಳಿ ಗೋಡೆಗಳು ಒಡೆದು ಹೋಗಿರುವ ಕಡೆ ಜನರು ಡಪಿಂಗ್ ಯಾರ್ಡ್ಗಳಂತೆ (Dumping Yard) ಕಸ ಸುರಿಯಲು ಶುರುಮಾಡಿದ್ದಾರೆ. ಕಸ ಅಲ್ಲದೇ ಕಟ್ಟಡದ ಅವಶೇಷಗಳು, ಘನತ್ಯಾಜ್ಯಗಳನ್ನು ರಾಜಕಾಲುವೆಗೆ ಎಸೆಯುತ್ತಿದ್ದವರಿಗೆ ಬಿಸಿ(Hot) ಮುಟ್ಟಿಸಲು ಬಿಬಿಎಂಪಿ (BBMP) ಹೊಸ ಯೋಜನೆ ನಿರ್ಮಿಸಿದೆ.ಮಾರ್ಷಲ್ಗಳ ಮೂಲಕ ನಿಗಾ ಇಡುವುದರ ಜೊತೆಗೆ ರಾಜಕಾಲುವೆಗೆ ಕಸ ಎಸೆದವರಿಗೆ ದಂಡ (Fine) ವಿಧಿಸಲು ಪಾಲಿಕೆ ಸಜ್ಜಾಗಿದೆ.
ಇನ್ನು ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರಿಗರಿಗೆ (Bangaloreans) ರಾಜಕಾಲುವೆಗಳಿಂದ ಭೀತಿ ಎದುರಾಗುತ್ತದೆ. ಅತ್ತ ರಾಜಕಾಲುವೆಗಳ ಕ್ಲೀನಿಂಗ್ಗೆ ಇಳಿದಿರುವ ಪಾಲಿಕೆ ಅದೆಷ್ಟೇ ಬೇಲಿ ಹಾಕಿದರೂ, ರಾಜಕಾಲುವೆ ಸುತ್ತ ಎತ್ತರದ ಜಾಲರಿ ಅಳವಡಿಸಿದ್ದರೂ ರಾಜಕಾಲುವೆಗೆ ಕಸ ಎಸೆಯುವವರನ್ನು ತಡೆಯುವುದು ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.ಹಾಗಾಗಿ ರಾಜಕಾಲುವೆಗೆ ಕಸ ಎಸೆಯದಂತೆ ಮನವಿ ಮಾಡುತ್ತಿದೆ. ಸದ್ಯ ಕಸ (garbage) ಎಸೆಯುವವರಿಗೆ ದಂಡ ಹಾಕಲು ಹೊರಟಿರುವ ಪಾಲಿಕೆ ಎಷ್ಟರಮಟ್ಟಿಗೆ ಕಡಿವಾಣ ಹಾಕುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.