ದಸರಾದಂದು ‘ದಸರಾ’ ಪೋಸ್ಟರ್‌ ಬಿಡುಗಡೆ

ಬೆಂಗಳೂರು, ಅ. 21: ನಟ ಸತೀಶ್ ನೀನಾಸಂ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯದ ‘ದಸರಾ’ ಚಿತ್ರದ ಪೋಸ್ಟರ್‌ ಬಿಡುಗಡೆಗೊಂಡಿತು.

ಶರ್ಮಿಳಾ ಮಾಂಡ್ರೆ ಪ್ರೊಡೆಕ್ಷನ್‍ನಲ್ಲಿ ನಿರ್ಮಾಣವಾಗುತ್ತಿರುವ ದಸರಾ ಚಿತ್ರಕ್ಕೆ ಅರವಿಂದ ಶಾಸ್ತ್ರಿ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಶೇ.50 ಚಿತ್ರೀಕರಣ ಲಂಡನ್‍ನಲ್ಲಿ ಮುಕ್ತಾಯಗೊಂಡಿದೆ. ನಾಯಕ ಸತೀಶ್ ನೀನಾಸಂ ಜೊತೆಗೆ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದನ್‍ ಸಂಗೀತ ನಿರ್ದೇಶನ ಮಾಡಿದ್ದಾರೆ.

Exit mobile version