vijaya times advertisements
Visit Channel

ಫ್ಯಾಂಟಮ್ ಬೆಡಗಿ ‘ಅಪರ್ಣ ಬಲ್ಲಾಳ್‍’ ಪಾತ್ರದ ಫಸ್ಟ್ ಲುಕ್ ರಿವಿಲ್

Ef1rKztU4AAolaq

ಬಹುನಿರೀಕ್ಷಿತ ಫ್ಯಾಂಟಮ್‍ ಚಿತ್ರದ ಒಂದೊಂದೇ ಪಾತ್ರಗಳನ್ನು ರಿವಿಲ್‍ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲ ಹೆಚ್ಚು ಮಾಡುತ್ತಿರುವ ಚಿತ್ರತಂಡ ಇದೀಗ ಚಿತ್ರದ ಮತ್ತೊಂದು ಮುಖ್ಯ ಪಾತ್ರದ ಫಸ್ಟ್ ಲುಕ್‍ ರಿಲೀಸ್‍ ಮಾಡಿದೆ.

ಕಿಚ್ಚ ಸುದೀಪ್‍ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಫ್ಯಾಂಟಮ್ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸುದೀಪ್‍ ಅವರು ನಿರ್ವಹಿಸುತ್ತಿರುವ ‘ವಿಕ್ರಾಂತ್ ರೋಣ’ನ ಪಾತ್ರ ಹಾಗೂ ನಿರೂಪ್ ಭಂಡಾರಿ ನಿರ್ವಹಿಸುತ್ತಿರುವ ‘ಸಂಜೀವ್ ಗಾಂಭೀರ’ ಅಲಿಯಾಸ್ ಸಂಜು ಪಾತ್ರದ ಫಸ್ಟ್ ಲುಕ್‍ ರಿಲೀಸ್ ಮಾಡಲಾಗಿತ್ತು. ಆ ಮೂಲಕ ಫ್ಯಾಂಟಮ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು.

ಇದೀಗ ಚಿತ್ರದ ಮತ್ತೊಂದು ಪಾತ್ರವಾಗಿರುವ ‘ಅಪರ್ಣ ಬಲ್ಲಾಳ್’ ಅಲಿಯಾಸ್ ಪನ್ನ ಪಾತ್ರವನ್ನು ರಿವಿಲ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ನೀತಾ ಅಶೋಕ್‍ ನಿರ್ವಹಿಸುತ್ತಿದ್ದಾರೆ. ಅಪರ್ಣ ಬಲ್ಲಾಳ್‍ ಪಾತ್ರದ ಕುರಿತು ನಿರ್ದೇಶಕ ಅನೂಪ್ ಭಂಡಾರಿ, ಸಾಮಾಜಿಕ ಜಾಲತಾಣದ ಮೂಲಕ ರಿವಿಲ್ ಮಾಡಲಾಗಿದೆ. ಅಪರ್ಣ ಬಲ್ಲಾಳ್(ಪನ್ನ) ಪಾತ್ರದ ಪರಿಚಯ ಮಾಡಿಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ, ಅಪರ್ಣ ಬಲ್ಲಾಳ್‍ ಪಾತ್ರ ಫ್ಯಾಂಟಮ್ ಚಿತ್ರದ ಪ್ರಮುಖ ಪಾತ್ರವಾಗಿದ್ದು, ಮುಂಬೈನಲ್ಲಿ ಹುಟ್ಟಿಬೆಳೆದ ಪನ್ನ ಹಿಂದಿ ಮಿಶ್ರಿತ ಕನ್ನಡ ಮಾತನಾಡಲಿದ್ದಾರೆ. ಸಾಹಸಮಯ ಪ್ರವೃತ್ತಿ ಹೊಂದಿರುವ ಪನ್ನ, ಎಲ್ಲಾ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಹೊಂದಿದ್ದಾರೆ ಎಂದು ಪನ್ನ ಪಾತ್ರದ ಎಳೆಯನ್ನು ಬಿಟ್ಟುಕೊಟ್ಟಿದ್ದಾರೆ.

Latest News

ರಾಜ್ಯ

POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ!

ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ರಾಜ್ಯ

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ

ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದೇಶ-ವಿದೇಶ

ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು!

ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು.

ಮನರಂಜನೆ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.