ಅನಧಿಕೃತ ಸಂಪರ್ಕ ಅಧಿಕೃತಗೊಳಿಸದಿದ್ದರೆ ಜಲಮಂಡಳಿಯ ಕ್ರಮ

ಬೆಂಗಳೂರು, ಅ. 28: ಜಲಮಂಡಳಿಯಿಂದ ಇತ್ತೀಚೆಗೆ ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕಗಳ ತಪಾಸಣೆ ನಡೆಸಲಾಗಿ ಹಲವಾರು ಕಟ್ಟಡಗಳಿಗೆ ಅನಧಿಕೃತವಾಗಿ  ನೀರು ಮತ್ತು  ಒಳಚರಂಡಿ ಸಂಪರ್ಕವನ್ನು ಅದರಲ್ಲೂ ಒಳಚರಂಡಿ ಸಂಪರ್ಕವನ್ನು ತೆಗೆದುಕೊಂಡಿರುವುದು ಗಮನಕ್ಕೆ ಬಂದಿದ್ದು, ಅಂತಹ ಸಂಪರ್ಕಗಳನ್ನು ಕಡಿತಗೊಳಿಸಲಾಗಿರುತ್ತದೆ. ಕಡಿತಗೊಳಿಸಲಾದ ಅನಧಿಕೃತ ಸಂಪರ್ಕಗಳನ್ನು ಅಧಿಕೃತಗೊಳಿಸಿಕೊಳ್ಳಲು ಹಲವು ಕಟ್ಟಡಗಳ ಮಾಲೀಕರು ಮಂಡಳಿಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಅನಧಿಕೃತವಾಗಿ ತೆಗೆದುಕೊಂಡಿರುವ ಸಂಪರ್ಕಗಳನ್ನು ಅಧಿಕೃತಗೊಳಿಸಿಕೊಳ್ಳಲು ಕೂಡಲೇ ಆನ್‍ಲೈನ್ ಮುಖಾಂತರ  ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ದಮಾಷ (Prorata)    ಶುಲ್ಕ ಬರುವ ಕಟ್ಟಡಗಳನ್ನು ಹೊರತುಪಡಿಸಿ ಇತರೆ ಕಟ್ಟಡಗಳಿಗೆ ದಂಡ ವಿಧಿಸದೆ ಮಂಡಳಿಯಿಂದ ತತ್‍ಕ್ಷಣವಾಗಿ  ಸಂಪರ್ಕವನ್ನು ಮಂಜೂರು ಮಾಡಲಾಗುವುದು. ಈಗಾಗಲೇ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿರುವ   ಇಂತಹ ಕಟ್ಟಡದ ಮಾಲೀಕರು ಈಗಲೂ ಸಹ ದಿ: 30.11.2020 ರೊಳಗಾಗಿ ಅಧಿಕೃತಗೊಳಿಸಿಕೊಳ್ಳದಿದ್ದಲ್ಲಿ ಮಂಡಳಿಯ ನಿಯಮಾನುಸಾರ ದಂಡ ವಿಧಿಸುವುದಲ್ಲದೆ ಬಿ.ಎಂ.ಟಿ.ಎಫ್.ಗೂ ಸಹ ದೂರನ್ನು ಸಲ್ಲಿಸಲಾಗುವುದೆಂದು ಈ ಮೂಲಕ ತಿಳಿಸದೆ.

Exit mobile version