ಅನಾರೋಗ್ಯದಿಂದ ಬಳಲುತ್ತಿದ್ದಾರಾ ಸೂಪರ್ ಸ್ಟಾರ್ ?

ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.. ಕಳೆದ ಹಲವಾರು ದಿನಗಳಿಂದ ತೀವೃ ಜ್ವರದಿಂದ ಬಳಲುತ್ತಿದ್ದ ರಜನಿ ಚಿಕಿತ್ಸೆ ಪಡೆದು ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಅನ್ನೋದು ಮೂಲಗಳಿಂದ ಬಂದಿರೋ ಮಾತು ..

ಇತ್ತ ರಜನಿಕಾಂತ್ ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತಿದೆ ಅನ್ನೋ ಸುದ್ದಿ ಕೇಳಿ ಬರುತ್ತಾನೇ ಇದೆ .. ಇತ್ತೀಚೆಗೆ ತಮಿಳು ನಾಡಿನಲ್ಲಿ ಮುಂಬರುವ ಚುನಾವಣೆಯಲ್ಲಿ ಅನಾರೋಗ್ಯದ ನಿಮಿತ್ತ ತಾನು ಚುನಾವಣೆಗೆ ನಿಲ್ಲುವುದಿಲ್ಲ ಅನ್ನೋ ಸ್ಪಷ್ಟನೆಯನ್ನು ರಜನಿ ನೀಡಿದ್ರು. ಇದರ ಬೆನ್ನಲೇ ಇದೀಗ ಜ್ವರದಿಂದ ರಜನಿಕಾಂತ್ ಬಳಲುತ್ತಿದ್ದಾರೆ ಅನ್ನೋದು ರಜನಿ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ .
ಸದ್ಯ ಅಣ್ಣಾತೆ ಚಿತ್ರದಲ್ಲಿ ರಜನಿಕಾಂತ್ ಬ್ಯುಸಿ ಇದ್ದಾರೆ ಅನ್ನೋದು ತಿಳಿದು ಬಂದಿದ್ದು . ಕೊರೋನಾ ಹಿನ್ನಲೆ ಸಿನಿಮಾವನ್ನು ಚಿತ್ರತಂಡ ಆರಂಭಿಸಿಲ್ಲ. ಇನ್ನು ಸದ್ಯದಲ್ಲೇ ಚಿತ್ರ ಪ್ರಾರಂಭ ಮಾಡುವ ಸಾಧ್ಯತೆ ಇದೆ ..

Exit mobile version