‘ಅಪರೂಪದಲ್ಲಿಯೇ ಅಪರೂಪದ ತೀರ್ಪು’ ಅತ್ಯಾಚಾರಿಗೆ 28 ದಿನದಲ್ಲಿ ಮರಣದಂಡನೆ ಶಿಕ್ಷೆ

ಸೂರತ್(ಗುಜರಾತ್): ಸೂರತ್ಲ್ಲಿ ಕಾರ್ಮಿಕ ದಂಪತಿಯ 2 ವರ್ಷದ ಮಗುವನ್ನು ನವೆಂಬರ್​ 4 ರಂದು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.ಈತನ ಹೆಸರು ಗುಡ್ಡು ಯಾದವ್. ಮಗುವಿನ ಶವ ನವೆಂಬರ್​ 7 ರಂದು ಪತ್ತೆಯಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡಿರುವ  ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ವಿವಿಧ ಬೇರೆ ಸಾಕ್ಷಿಗಳನ್ನು ಕಂಡುಹಿಡಿದರು.ಈ ಆಧಾರದ ಮೇಲೆ ನವೆಂಬರ್​ 8 ರಂದು ಆರೋಪಿಯನ್ನು ಬಂಧಿಸಿದ್ದರು.

ಆರೋಪಿ ಬಂಧನ ಆದ 7 ದಿನಗಳ ನಂತರ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪೋಕ್ಸೋ ಕೋರ್ಟ್ ವಿಚಾರಣೆಯನ್ನು ನಡೆಸಿ ಸಾಕ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಅಪರಾಧ  ಸಾಬೀತಾದ ಹಿನ್ನೆಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತು,ಅಲ್ಲದೆ ಸಂತ್ರಸ್ತ ಕುಟುಂಬಕ್ಕೆ20 ಲಕ್ಷ ಪರಿಹಾರ ಧನ ನೀಡುವಂತೆ ಸರ್ಕಾರಕ್ಕೆ ನ್ಯಾಯಾಧೀಶೆ ಪಿ.ಎಸ್.ಕಲಾರವರು ಘೋಷಿಸಿದ್ಧಾರೆ.

ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೆವು,ಬಡವರಾದ ನಮಗೆ ಇಷ್ಟು ಬೇಗ  ನ್ಯಾಯ ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ, ಎಂದು ಪೋಷಕರು ನ್ಯಾಯಾಲಯದ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಘಟನೆ ನಡೆದ 28 ದಿನದೊಳಗೆ ಆರೋಪಿಗೆ ಶಿಕ್ಷೆಯಾಗಿದ್ಧರಿಂದ ಇದನ್ನು’ಅಪರೂಪದಲ್ಲಿಯೇ ಅಪರೂಪವಾದ’ ತೀರ್ಪು ಎಂದು ಕರೆಯಲಾಗಿದೆ.

Exit mobile version