ಬೆಂಗಳೂರು, ಅ. 31: ಇಂದು ಖಗೋಳದಲ್ಲಿ ಅಪರೂಪದ ವಿಶೇಷವಾದ ವಿಸ್ಮಯವೊಂದು ನಡೆಯಲಿದ್ದು, ಅಪರೂಪದ ಬ್ಲೂ ಮೂನ್(ಚಂದ್ರ) ದರ್ಶನವಾಗಲಿದೆ. ಸಾಮಾನ್ಯವಾಗಿ ವರ್ಷದಲ್ಲಿ 12 ಸಲ ಕಾಣಿಸಿಕೊಳ್ಳುವ ಪೂರ್ಣಚಂದ್ರನ ಹೆಚ್ಚುವರಿ ಆಗಮನವೇ ಬ್ಲೂ ಮೂನ್ ( ನೀಲಿ ಚಂದ್ರ).
19 ವರ್ಷಗಳ ನಂತರ ಇದರ ದರ್ಶನವಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ ಅದಕ್ಕೆ ‘ಬ್ಲೂ ಮೂನ್’ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದೇ ತಿಂಗಳ ಅಕ್ಟೋಬರ್ 1ರಂದು ಚಂದ್ರ ಕಾಣಿಸಿಕೊಂಡಿದ್ದ. ಆದರೆ ಇದೀಗ ಮತ್ತೊಮ್ಮೆ ಗೋಚರವಾಗುತ್ತಿದೆ. ಈ ಹಿಂದೆ 2001ರ ಜೂನ್ ತಿಂಗಳಲ್ಲಿ ‘ಬ್ಲೂ ಮೂನ್’ ಕಾಣಿಸಿಕೊಂಡಿತ್ತು. ಮುಂದಿನ ಬ್ಲೂ ಮೂನ್ 2050ರ ಸೆ. 30ರಂದು ಕಾಣಿಸಿಕೊಳ್ಳಲಿದೆ.
1983ರಲ್ಲಿ ಇಂಡೋನೇಶ್ಯಾದಲ್ಲಿ ಕ್ರಕೋಟಾ ಎಂಬ ಅಗ್ನಿ ಪರ್ವತ ಸ್ಪೋಟಗೊಂಡಿದ್ದು ಅದರ ದಟ್ಟನೆಯ ಹೊಗೆ ಆಕಾಶಕ್ಕೆ ಚಿಮ್ಮಿದ್ದಾಗ ಆ ಮೋಡದ ಕಣಗಳು ರಾತ್ರಿಯಲ್ಲಿ ಕೆಂಪು ಬೆಳಕನ್ನು ತೊಲಗಿಸಿ ನೀಲಿ ಬಣ್ಣದಲ್ಲಿ ಚಂದ್ರನನ್ನು ಕಾಣುವಂತೆ ಮಾಡಿತ್ತು. ಅತ್ಯಂತ ಅಪರೂಪದ ವಿದ್ಯಾಮಾನವಾಗಿದ್ದ ಚಂದ್ರ ಹೆಚ್ಚುವರಿ ಅವಧಿಯಲ್ಲಿ ಸಂಪೂರ್ಣವಾಗಿ ಕಂಡ ಕಾರಣ ನೀಲಿ ಚಂದ್ರ ಎಂಬ ಹೆಸರನ್ನು ಪಡೆದುಕೊಂಡ. ಎಂದು ವಿಜ್ಞಾನಿಗಳು ಹೇಳಿದ್ದಾರೆ.