ಎಂ.ಎಸ್.ಧೋನಿಗೆ ಎರಡು ಪುಟದ ಪತ್ರ ಬರೆದ ಮೋದಿ

ಆ.15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ವದ ಹಲವು ಕ್ರಿಕೆಟಿಗರು, ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಕೂಲ್ ಕ್ಯಾಪ್ಟನ್‍ ಧೋನಿ ಅವರಿಗೆ ಶುಭ ಕೋರಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಸಹ ಸೇರ್ಪಡೆಯಾಗಿದ್ದು, ಈ ಸಂಬಂಧ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ಪತ್ರದ ಪ್ರಾರಂಭದಲ್ಲಿ ಡಿಯರ್ ಮಹೇಂದ್ರ ಸಿಂಗ್ ಧೋನಿ ಎಂದು ಉಲ್ಲೇಖಿಸಿದ್ದು, ಟೀಮ್ ಇಂಡಿಯಾ ಮಾಜಿ ನಾಯಕನ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎರಡು ಪುಟಗಳ ಪತ್ರದಲ್ಲಿ ಭಾರತ ಕ್ರಿಕೆಟ್‍ ತಂಡಕ್ಕೆ ಧೋನಿ ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.

ನರೇಂದ್ರ ಮೋದಿಯವರು ತಮ್ಮ ಪತ್ರದಲ್ಲಿ ಧೋನಿಯವರನ್ನು ಹಾಡಿ ಮನಸೂರ್ತಿ ಹೊಗಳಿದ್ಯಾರೆ, ನಿಮ್ಮ ಹೇರ್‌ಸ್ಟೈಲ್ ಹೇಗಿತ್ತು ಎಂಬುದು ಮುಖ್ಯವಲ್ಲ. ಆದರೆ ಸೋಲು ಮತ್ತು ಗೆಲುವು ಎರಡೂ ಸಂದರ್ಭದಲ್ಲಿ ನೀವು ಅದೇ ಶಾಂತ ರೀತಿಯಲ್ಲಿ ಇರುತ್ತಿದ್ದೀರಲ್ಲ, ಆ ನಿಮ್ಮ ತಾಳ್ಮೆ ಯುವಜನತೆಗೆ ಅದ್ಭುತ ಪಾಠ ಎಂದು ಹೇಳಿದ್ದಾರೆ. ಹಾಗೇ, ಭಾರತೀಯಾ ಸೇನೆ ಬಗ್ಗೆ ನಿಮಗೆ ಇರುವ ಪ್ರೀತಿ, ಗೌರವ ನೋಡಿ ನನಗೆ ತುಂಬಾ ಖುಷಿಯಾಗಿದೆ. ಸೇನಾ ಸಿಬ್ಬಂದಿ ಒಳಿತಿಗಾಗಿ ಯೋಚಿಸುವ ನಿಮ್ಮ ನಿರ್ಗುಣ ಶ್ಲಾಘನೀಯ ಎಂದು ಉಲ್ಲೇಖಿಸಿದ್ದಾರೆ. ನೀವಿನ್ನು ನಿಮ್ಮ ಪತ್ನಿ ಮತ್ತು ಮಗಳು ಝೀವಾ ಜತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ. ಅವರಿಗೂ ನನ್ನ ಶುಭಹಾರೈಕೆಗಳು, ನಿಮ್ಮ ಸಾಧನೆಯಲ್ಲಿ ಅವರು ತ್ಯಾಗವಿದೆ. ಪಂದ್ಯಗಳಲ್ಲಿ ಗೆದ ಬಳಿಕ ನೀವು ನಿಮ್ಮ ಮುದ್ದಾದ ಮಗಳೊಂದಿಗೆ ಅದನ್ನು ಖುಷಿಯಿಂದ ಆಚರಿಸುವ ಫೋಟಗಳನ್ನು ನಾನು ನೋಡಿದ್ದೇನೆ. ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನೀವು ಸಮತೋಲನ ಮಾಡಿದ ರೀತಿ ಅನುಕರಣೀಯ ನಿಮ್ಮ ಭವಿಷ್ಯ: ಅದ್ಭುತವಾಗಿರಲಿ.. ಒಳ್ಳೆಯದಾಗಲಿ ಎಂದು ಬರೆದಿದ್ದಾರೆ.ಇನ್ನೂ ಪ್ರಧಾನಿ ಮೋದಿ ಬರೆದಿರುವ ಈ ಪತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಧೋನಿ, ಕಲಾವಿದನಾಗಲಿ, ಯೋಧನಾಗಲಿ, ಕ್ರೀಡಾಪಟುವಾಗಲಿ.. ಬಯಸುವುದು ಮೆಚ್ಚುಗೆಯನ್ನು. ಹಾಗೂ ಅವರು ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಪ್ರತಿಯೊಬ್ಬರೂ ಗಮನಿಸುತ್ತಾರೆ ಹಾಗೂ ಸ್ವಾಧಿಸುತ್ತಾರೆ. ನಿಮ್ಮ ಮೆಚ್ಚುಗೆ ಹಾಗೂ ಶುಭ ಹಾರೈಕೆಗೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿ ಅವರೇ ಎಂದು ಬರೆದಿದ್ದಾರೆ.

Exit mobile version