ಕೋವಿಡ್-19ಗೆ ಮೂಗಿನ ಔಷಧವೇ ಒಳ್ಳೆಯದು: ಸಂಶೋಧಕರ ಅಭಿಪ್ರಾಯ

ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು, ತಜ್ಞರು ಸಂಶೋಧೆನ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ವೈರಸ್‍ನ ಸೋಂಕು ತಡೆಉಲು ಯಾವುದೆ ಲಸಿಕೆ ಇನ್ನು ಸಿದ್ಧವಾಗಿಲ್ಲ. ಇದರಿಂದ ದೇಶದೆಲ್ಲಡೆ ಆರೋಗ್ಯ ಕಾಪಾಡಿಕೊಳ್ಳಲು ಜನರು ಪರದಾಡುತ್ತಿದ್ದಾರೆ.
ಈಗ ಈ ಸೋಂಕಿಗೆ ಲಸಿಕೆ ಸಂಆಶೋಧನೆ ವಿಚಾರದಲ್ಲಿ ಅತ್ಯಂತ ಆಸಕ್ತಿದಾಯಕ ಅಂಶ ಕೇಳಿ ಬಂದಿದೆ. ಸಂಶೋಧನೆ ನಡೆಸುತ್ತಿರುವ ಎಲ್ಲ ಕಂಪನಿಗಳು ಈ ಸಂಕಿಗೆ ಲಸಿಕೆಯನ್ನು ಚುಚ್ಚುಮದ್ದು ಅಥವಾ ಲಸಿಕೆ ರೂಪದಲ್ಲಿ ನೀಡುವ ಕುರಿತಾಗಿ ಯೋಚಿಸುತ್ತಿದೆ. ಆದರೆ, ಲಂಡನ್‍ನ ಇಂಪೀರಿಯಲ್ ಕಾಲೇಜು ಹಾಗೂ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಬೇರೆ ಚಿಂತನೆಯನ್ನು ಮಾಡಿದ್ದಾರೆ. ಪ್ರಯೋಗದ ಹಂತದಲ್ಲಿರುವ ಔಷಧವನ್ನು ಚುಚ್ಚುಮದ್ದಿನ ಮೂಲಕವೇ ಮನುಷ್ಯರಿಗೆ ನೀಡಲಾಗುತ್ತದೆ. ಆದರೆ, ಇದಕ್ಕಿಂತ ಔಷಧವನ್ನು ಮೂಗಿನ ಮೂಲಕ ನೀಡುವುದು ಅಥವಾ ಇನ್‍ಹೇಲರ್ ವಿಧಾನದ ಮೂಲಕ ಒದಗಿಸುವುದು ಹೆಚ್ಚು ಪರಿಣಾಮಕಾರಿ ಎಂದು ಆಕ್ಸ್‍ಫರ್ಡ್ ವಿವಿ ವಾದ ಮಂಡಿಸಿದೆ.
ಕರೋನಾ ವೈರಸ್ ಶ್ವಾಸಕೋಶಕ್ಕೆ ಹೆಚ್ಚು ಹಾನಿಯುಂಟು ಮಾಡಿ ಉಸಿರಾಟಕ್ಕೆ ತೊಂದರೆ ಕೊಡುತ್ತದೆ. ಆದ್ದರಿಂದ ಔಷಧವನ್ನು ನೇರವಾಗಿ ಶ್ವಾಸಕೋಶಕ್ಕೆ ತಲುಪುವಂತೆ ನೀಡುವುದು ಹೆಚ್ಚು ಅನುಕೂಲ. ಜತೆಗೆ ರೋಗಿಗಳನ್ನು ಕಾಪಾಡಲು ಇದು ಉತ್ತಮ ವಿಧಾನ ಎಂದು ತಜ್ಞರು ತಿಳಿಸಿದ್ದಾರೆ.
ಶ್ವಾಸಕೋಶದ ಮೂಲಕ ಔಷಧ ನೀಡುವುದು ಹಿರಿಯನಾಗರಿಕರಿಗೆ ಹೆಚ್ಚು ರಕ್ಷಣೆ ನೀಡುತ್ತದೆ. ಶ್ವಾಸಕೋಶದ ಹೊರಪದರಕ್ಕೆ ಔಷಧ ನೀಡುವುದರಿಂದ ಉಸಿರಾಟದ ಅಂಗವನ್ನು ನೇರವಾಗಿ ರಕ್ಷಿಸಬಹುದು. ಜತೆಗೆ ಕರೋನಾ ವೈರಸ್ ಮೊದಲು ದೇಹವನ್ನು ಪ್ರವೇಶಿಸುವ ಮೂಗು ಮತ್ತು ಬಾಯಿಗೆ ರಕ್ಷಣಾ ಪದರವಾಗುತ್ತದೆ. ಪ್ರವೇಶ ದ್ವಾರದಲ್ಲೇ ಕಾಯಿಲೆಯನ್ನು ತಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Exit mobile version