ಚೀನಾದಿಂದಾಗಿ ಜಾಗತಿಕವಾಗಿ ಒಂಟಿಯಾಗಬೇಕಾಗುತ್ತೆ ಪಾಕಿಸ್ತಾನ!

ಭಾರತದೊಂದಿಗೆ ಲಡಾಖ್‍ನ ಪೂರ್ವಭಾಗದಲ್ಲಿ ಜಟಾಪಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಕುರಿತು ತನ್ನ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳುವ ಒತ್ತಡಕ್ಕೆ ಪಾಕಿಸ್ತಾನ ಸಿಲಿಕಿದೆ. ಜತೆಗೆ ನೀತಿಯನ್ನು ಬದಲಿಸಿಕೊಳ್ಳದೆ ಇದ್ದರೆ ಚೀನಾದಂತೆ ಜಾಗತಿಕವಾಗಿ ಒಬ್ಬಂಟಿಯಾಗುವ ಅಪಾಯ ಪಾಕಿಸ್ತಾನಕ್ಕೆ ಇದೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎಚ್ಚರಿಕೆ ನೀಡಿದೆ.
ಜೂ.15 ರಂದು ಗಲ್ವಾನ್‍ನಲ್ಲಿ ಭಾರತೀಯ ಯೋಧರೊಂದಿಗೆ ಚೀನಾದ ಯೋಧರ ಬಲಿಯಾದ ಮೇಲೆ ಈ ಒತ್ತಡ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಚೀನಾ ಕುರಿತ ವಿದೇಶಾಂಗ ನೀತಿಯನ್ನು ತ್ವರಿತವಾಗಿ ಬದಲಿಸಿಕೊಳ್ಳದಿದ್ದರೆ ಆರ್ಥಿಕ ಬಲಾಢ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೋವಿಡ್-19 ನಂತಹ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಚೀನಾದ ಈ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಇದರಿಂದ ಜಾಗತಿಕ ಶಕ್ತಿಗಳು ಚೀನಾವನ್ನು ಜಾಗತಿಕವಾಗಿ ಏಕಾಂಗಿಯಾಗಿ ಮಾಡಲು ನಿರ್ಧರಿಸಿದೆ. ಇದರಿಂದ ಇದರ ನೇರ ಪರಿಣಾಮವನ್ನು ಪಾಕಿಸ್ತಾನ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದಾಗಿ ಪಾಕ್ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿದೆ.
ಭಾರತದ ವಿರುದ್ಧ ಚೀನಾದ ನಿಲುವನ್ನು ಖಂಡಿಸಿ ಯುರೋಪ್ ರಾಷ್ಟ್ರಗಳು ಚೀನಾವನ್ನು ರಾಜತಾಂತ್ರಿಕವಾಗಿ ಏಂಕಾಗಿಯನ್ನಾಗಿಸುವ ಕ್ರಮಗಳನ್ನು ಕೈಗೊಳ್ಳಲಾರಂಬಿಸಿವೆ. ಇದರಿಂದ ನೇರ ಪರಿಣಾಮ ಪಾಕಿಸ್ತಾನದ ಮೇಲೆ ಆಗಲಿದೆ ಎನ್ನಲಾಗಿದೆ. ಚೀನಾ ಈಗಾಗಲೇ ಭಾರತದ ಸಾಕಷ್ಟು ಪ್ರಮಾಣದ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ. ಇದನ್ನು ನಿಯಂತ್ರಿಸದಿದ್ದರೆ ಪಾಕಿಸ್ತಾನದಲ್ಲೂ ಭೂಮಿಯನ್ನು ಅತಿಕ್ರಮಿಸಿಕೊಳ್ಳಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ.

Exit mobile version