ಜಗತ್ತಿನ ಮೊದಲ ಕೊರೊನಾ ಪೇಶೆಂಟ್ ಯಾರು ಗೊತ್ತಾ? ಬಹಿರಂಗವಾಯ್ತು ಅಸಲಿ ಸತ್ಯ

ಜಗತ್ತಿನಾದ್ಯಂತ ಈಗಾಗಲೇ 28 ಸಾವಿರಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವ ಕೋವಿಡ್ 19 ವೈರಸ್ ಸೋಂಕು ಮೊದಲು ಕಾಣಿಸಿಕೊಂಡಿದ್ದು ವುಹಾನ್ ನಗರದ 57 ವರ್ಷದ ಮಹಿಳೆಯಲ್ಲಿ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಪೇಶೆಂಟ್ ಜೀರೊ ಎಂದು ಗುರುತಿಸಿಕೊಂಡಿರುವ ವೈ ಗಿಕ್ಸಿನ್, ಕೋವಿಡ್ 19 ವೈರಸ್ ಹುಟ್ಟಿದ ವುಹಾನ್ ನಗರದ ಹುನಾನ್ ಮಾರುಕಟ್ಟೆಯಲ್ಲಿ ಸಿಗಡಿಗಳ ಮಾರಾಟ ಮಾಡುತ್ತಿದ್ದಳು. ಡಿಸೆಂಬರ್ 10ರಂದು ಈಕೆಗೆ ಶೀತ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದಿದ್ದರು. ಕೋವಿಡ್ 19 ವೈರಸ್ ಸೋಂಕು ಇರುವುದು ದೃಢಪಟ್ಟ ಬಳಿಕ ಅಗತ್ಯ ಚಿಕಿತ್ಸೆ ಪಡೆದ ಗಿಕ್ಸಿನ್ ಜನವರಿ ಮೊದಲ ವಾರದಲ್ಲೇ ಗುಣಮುಖರಾಗಿ, ಮನೆಗೆ ತೆರಳಿದ್ದರು. ಇದೀಗ ವುಹಾನ್ ಮಾರುಕಟ್ಟೆಯ ಸಾಕಷ್ಟು ಮಂದಿಗೆ ಸೋಂಕು ತಗುಲಿತ್ತು ಎಂದು ಆಸ್ಪತ್ರೆಯೊಂದು ತಿಳಿಸಿದೆ.

Exit mobile version