ದೂರದರ್ಶನ, ಸಾಮಾಜಿಕ ಜಾಲತಾಣದಲ್ಲಿ ದಸರಾ ಜಂಬೂ ಸವಾರಿ ನೇರ ಪ್ರಸಾರ

ಮೈಸೂರು, ಅ. 25: ಕೋವಿಡ್-19 ಹಿನ್ನೆಲೆ ಈ ಬಾರಿಯ ನಾಡಹಬ್ಬ ದಸರಾವನ್ನು ಸರಳ, ಸಾಂಪ್ರದಾಯಕ ಹಾಗೂ ವರ್ಚುಯಲ್ ಆಗಿ ಆಚರಿಸಲಾಗುತ್ತಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಕಾರ್ಯಕ್ರಮವನ್ನು ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 2.59 ರಿಂದ 3.20 ಗಂಟೆಯವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ಧ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಮಧ್ಯಾಹ್ನ 3.40 ರಿಂದ 4.15 ಗಂಟೆಯವರೆಗೆ ಸಲ್ಲುವ ಶುಭ ಕುಂಭಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆ ನೆರವೇರಲಿದೆ.
ಈ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೆಸ್‍ಬುಕ್ ಪೇಜ್ ಲಿಂಕ್ https://www.facebook.com/mysorevarthe/ ಹಾಗೂ ಯೂಟೂಬ್ ಲಿಂಕ್ https://www.youtube.com/playlist?list=PLvhg-sbsHV_ybFvK6Iu7HLoaOmh3yCcVC ನಲ್ಲಿ ನೇರಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಮನೆಯಲ್ಲೆ ಕುಳಿತು ವೀಕ್ಷಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version