ಪ್ರಧಾನಿ ನರೇಂದ್ರ ಮೋದಿ ದೀರ್ಘಾಯುಷ್ಯಕ್ಕಾಗಿ ಮೃತ್ಯುಂಜಯ ಹೋಮ

Dharmasthala

ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಧಳದಲ್ಲಿ ಮಹಾ ಮೃತ್ಯುಂಜಯ ಹೋಮ ನೂರಾರು ಜನರ ಸಮ್ಮುಖದಲ್ಲಿ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯಸ್ಸು ಹಾಗೊ ಆರೋಗ್ಯ ವೃದ್ಧಿಗಾಗಿ ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ , ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ, ಧರ್ಮಸ್ಧಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ನಡೆಯುತ್ತಿದೆ.
ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪೌರೋಹಿತ್ಯದಲ್ಲಿ ಶ್ರಂಗೇರಿ, ಬೆಂಗಳೂರು, ಕಾಸರಗೋಡು, ಮೈಸೂರು ಮತ್ತು ಹಲವಾರು ಕಡೆಗಳಿಂದ 108 ಮಂದಿ ಪೊರೋಹಿತರೊಂದಿಗೆ ಮಹಾ ಮೃತ್ಯುಂಜಯ ಹೋಮ ಧರ್ಮಸ್ಧಳದ ಅಮೃತವರ್ಷಿಣೆ ಸಭಾಭವನದಲ್ಲಿ ಎಲ್ಲಾ ವಿಧಾನಗಳೊಂದಿಗೆ ನಡೆದಿದೆ. ಹಲವಾರು ಪ್ರಮುಖರು ಮತ್ತು ಗಣ್ಯರು ಈ ಹೋಮದಲ್ಲಿ ಭಾಗಿಯಾಗಿದ್ದರು. ಸಚಿವರಾದ ಸಿ.ಸಿ.ಪಾಟೀಲ್, ಕೆ.ಎಸ್.ಈಶ್ವರಪ್ಪ ಮತ್ತು ಶಶಿಕಲಾ ಜೊಲ್ಲೆ ಆಗಮಿಸಿದ್ದರು.
ಹಲವು ವಿಶೇಷ ಪೊಜೆಗಳು ನಡೆಯಲಿದ್ದು, ಪ್ರಧಾನ ಯಾಗ ಕುಂಡ, ಗಣಯಾಗ, ಚತುರ್ವೇದ, ಗೋ ಪೊಜೆ ಮುಖ್ಯವಾಗಿ ನಡೆಯಲಿದೆ.ಈ ಹೋಮದ ಪ್ರಮುಖ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನಾಗಿರಬೇಕು ಮತ್ತು ಅವರ ಆಡಳಿತ ಇನಷ್ಟು ಚೆನ್ನಾಗಿ ನಡೆಸಬೇಕು

Exit mobile version