ಭರದಿಂದ ಸಾಗಿದ ದಿಲ್ಲಿ ವಿಧಾನಸಭಾ ಚುನಾವಣೆ

ಭಾರಿ ಕುತೂಹಲ ಮೂಡಿಸಿದ ದೆಹಲಿ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದ್ದು ; ಇಂದು ಭರದಿಂದ ಮತದಾನ ಸಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಇನ್ನು ಆಡಳಿತರೂಢ ಆಮ್ ಆದ್ಮಿ ಪಕ್ಷ ಗೆಲುವಿನ ಕನಸು ಕಾಣುತ್ತಿದ್ದು ಫೆ .11 ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನು ಈ ಸಲದ ಚುನಾವಣೆಯಲ್ಲಿ ಹೇಗಾದರು ಮಾಡಿ ರಾಷ್ಟ್ರ ರಾಜಧಾನಿಯ ಅಧಿಕಾರಗಿಟ್ಟಿಸಿಕೊಳ್ಳಲು ಬಿಜೆಪಿ ಸತಾಯಗತಾಯ ಪ್ರಯತ್ನ ನಡೆಸಿದ್ದು ; ಬಿಜೆಪಿಯತ್ತ ಒಲವು ತೊರಿಸಲು ದೆಹಲಿಯಲ್ಲಿ ಪ್ರಯತ್ನಪಟ್ಟಿದೆ. ಇನ್ನೊಂದೆಡೆ ಗೆಲುವು ಎಂಬುವುದು ಕನಸಾಗಿದ್ರು ಕಾಂಗ್ರೆಸ್ ಮಾತ್ರ ತಮ್ಮ ಅಸ್ಥಿತ್ವ ಮರು ಸ್ಥಾಪಿಸಲು ಹರಸಾಹಸಮಡುತ್ತಿದೆ.

ಇನ್ನು ಮತದಾನಕ್ಕೆ ಸಂಬಂಧಪಟ್ಟಂತೆ ಕ್ರೇಜಿವಾಲ್ ಟ್ವೀಟ್ ಮಾಡಿದ್ದು ; ಮಹಿಳೆಯರೇ ಮತಹಾಕಲು ಬನ್ನಿ . ಮನೆಯ ಸಂಪೂರ್ಣ ಜವಬ್ಧಾರಿ ನಿಮ್ಮ ಕೈಯಲ್ಲಿದೆ. ಮಾತ್ರವಲ್ಲ ಊರು -ದೆಹಲಿಯ ಜವಬ್ದಾರಿಯು ನಿಮ್ಮ ಮೇಲಿದೆ.ನೀವು ವೋಟ್ ಮಾಡಿ , ನಿಮ್ಮ ಮನೆಯ ಗಂಡುಮಕ್ಕಳನ್ನು ಕರೆದುಕೊಂಡು ವೋಟ್ ಮಾಡಿಸಿ .ಎಂದು ಬರೆದಿದ್ದಾರೆ .ಇದಕ್ಕೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿದ ಸ್ಮøತಿ ಇರಾನಿ ಯಾರಿಗೆ ವೋಟ್ ಮಾಡಬೇಕು ಅನ್ನೋದು ಹೆಣ್ಣುಮಕ್ಕಳಿಗೆ ಗೊತ್ತಿದೆ. ಗಂಡಸರೊಂದಿಗೆ ಯಾಕೆ ಚರ್ಚೆ ಮಾಡಬೇಕು ಅನ್ನೋದನ್ನು ಟ್ವೀಟ ಮೂಲಕ ಉತ್ತರಿಸಿದ್ದಾರೆ .

Exit mobile version