Rio Grande do Sul: ಬ್ರೆಝಿಲ್ನ ದಕ್ಷಿಣ (South of Brazil) ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ (Rain) , ಭೂಕುಸಿತ ಹಾಗೂ ಪ್ರವಾಹದಿಂದ ಈಗಾಗಲೇ 75 ಮಂದಿ ಮೃತಪಟ್ಟಿದ್ದು 103 ಮಂದಿ ನಾಪತ್ತೆಯಾಗಿದ್ದಾರೆ (disappeared) . ಕನಿಷ್ಠ 155 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ನಿರಂತರ ಮಳೆಯಿಂದಾಗಿ 88,000 ಹೆಚ್ಚಿನ ಜನರು ನಿರಾಶ್ರಿತರಾಗಿದ್ದು, 16,000 ಶಾಲೆಗಳಲ್ಲಿ (School) ಆಶ್ರಯ ಪಡೆದಿದ್ದಾರೆ. ಭೂಕುಸಿತ ಸೇರಿದಂತೆ ಹಲವೆಡೆ ರಸ್ತೆ (Roads) , ಸೇತುವೆಗಳು (Bridges) ಕೊಚ್ಚಿ ಹೋಗಿವೆ. ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ಸಂಪರ್ಕ (Electic poll) ಕಡಿತಗೊಂಡಿದೆ ಎಂದು ಸಿವಿಲ್ ಡಿಫೆನ್ಸ್ ಏಜೆನ್ಸಿ(Civil Defense Agency) ತಿಳಿಸಿದೆ.
ದಕ್ಷಿಣದ ರಾಜ್ಯ ರಿಯೊ ಗ್ರಾಂಡೆ ದೊಸುಲ್ (The southernmost state is Rio Grande Dosul) ಜಲಾವೃತಗೊಂಡಿದ್ದು ವಾಣಿಜ್ಯ ಕೇಂದ್ರ ಅಲೆಗ್ರೆಯಲ್ಲಿ ವ್ಯಾಪಾರ ಚಟುವಟಿಕೆಗೆ ತೊಡಕಾಗಿದೆ. ಪ್ರವಾಹದಿಂದಾಗಿ ದೇಶದ 281 ಪುರಸಭೆಗಳಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಗುಯಾಬ ನದಿ (Guayaba River) ನೀರು ಅಪಾಯದ ಮಟ್ಟ ಮೀರಿ 5.04 ಮೀಟರ್ ಗೆ ತಲುಪಿದ್ದು ಇದು 1941ರ ಪ್ರವಾಹದ ಬಳಿಕದ ದಾಖಲೆಯ ಮಟ್ಟವಾಗಿದೆ. ಪೋರ್ಟೋ ಅಲೆಗ್ರೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ.
ರಕ್ಷಣಾ ಪಡೆಗಳು ಹೆಲಿಕಾಪ್ಟರ್ಗಳ (helicopters) ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಮಾಡುತ್ತಿವೆ. ಇದುವರೆಗೆ 1,15,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬ್ರೆಜಿಲ್ನ (Brazil) ಕಣಿವೆ ಪ್ರದೇಶಗಳು ಸೇರಿದಂತೆ ಪರ್ವತ ಇಳಿಜಾರುಗಳು ಮತ್ತು ನಗರಗಳಂತಹ ಕೆಲವು ಪ್ರದೇಶಗಳಲ್ಲಿ ಒಂದು ವಾರದೊಳಗೆ 300 ಮಿಲಿಮೀಟರ್ಗಳಿಗಿಂತ ಹೆಚ್ಚು (11.8 ಇಂಚುಗಳು) ಮಳೆ ಸುರಿದಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಟಿಯೊರಾಲಜಿ ಹೇಳಿದೆ.