ಭಾರತೀಯ ನೌಕಾಪಡೆ ಈಗ ಮತ್ತಷ್ಟು ಬಲಿಷ್ಠ

ಮುಂಬೈ, ನ. 12: ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್‌ಎಸ್ ವಗೀರ್ ನ್ನು ಮುಂಬೈ ನ ಮಜಾಗೋನ್ ಡಾಕ್ ನಲ್ಲಿ ಉದ್ಘಾಟಿಸಲಾಗಿದ್ದು, ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಲಾಂತರ್ಗಾಮಿಯ ಲೋಕಾರ್ಪಣೆಗೊಳಿಸಿದ್ದಾರೆ.

6 ಸ್ಕಾರ್ಪಿನ್ ಶ್ರೇಣೀಯ ಜಲಾಂತರ್ಗಾಮಿಗಳ ಪೈಕಿ 2017 ರಲ್ಲಿ ಐಎನ್‌ಎಸ್ ಕಲ್ವಾರಿಯನ್ನು ಲೋಕಾರ್ಪಣೆಗೊಳಿಸಲಾಗಿತ್ತು.ಭಾರತದಲ್ಲೇ ನಿರ್ಮಾಣವಾದ ಕಲ್ವಾರಿ ಶ್ರೇಣಿಯ 6 ನೇ ಜಲಾಂತರ್ಗಾಮಿ ಇದಾಗಿದ್ದು, ಇದನ್ನು ಫ್ರಾನ್ಸ್ ನ ನೌಕಾಪಡೆ ಹಾಗೂ ಇಂಧನ ಸಂಸ್ಥೆ ಡಿಸಿಎನ್‌ಎಸ್ ವಿನ್ಯಾಸಗೊಳಿಸಿದೆ.

Exit mobile version