ಮನರಂಜನಾ ಪಾರ್ಕ್‍ಗಳನ್ನು ತೆರೆಯಲು ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಹೊಸದಿಲ್ಲಿ: ಕೇಂದ್ರ ಸರ್ಕಾರವು ಮನರಂಜನಾ ಪಾರ್ಕ್ಗಳನ್ನು ತೆರೆಯಲು ಅನುಮತಿ ಕಲ್ಪಿಸಿದ್ದು, ಇದಕ್ಕಾಗಿ ಅವಶ್ಯಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಮನರಂಜನಾ ಪಾರ್ಕ್‍ಗಳಲ್ಲಿ ಕೊರೊನಾ ಬೇಗನೆ ಹರಡಲಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನೀಡಲಾಗಿರುವ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಮುಖವಾಗಿ ಮನರಂಜನಾ ಪಾರ್ಕ್‍ಗಳಲ್ಲಿ ನೈಸರ್ಗಿಕ ವಾತಾವರಣ ಬಳಸಿಕೊಳ್ಳಬೇಕು. ಸಣ್ಣದಾದ, ಸುತ್ತುವರೆದ ಸ್ಥಳಗಳನ್ನು ಬಳಸಬಾರದು. ಸಾಧ್ಯವಾದಷ್ಟು ಮಟ್ಟಿಗೆ ಹೊರಗಿನಿಂದ ಬರುವ ಗಾಳಿಯನ್ನು ಬಳಸಿಕೊಳ್ಳಬೇಕು, ಕಿಟಕಿ ಹಾಗೂ ಬಾಗಿಲುಗಳನ್ನು ತೆರೆಯಬೇಕೆಂದು ತಿಳಿಸಿದೆ. ಈ ಹಿಂದೆ ಉದ್ಯಾನವನಗಳಿಗೆ ಹೊರಡಿಸಿದ್ದ ಮಾರ್ಗಸೂಚಿಯಂತೆ ಪ್ರವೇಶದ ಸಂದರ್ಭ ಸರತಿ ಸಾಲಿನಲ್ಲಿ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಅಲ್ಲದೇ ಚಿತ್ರಮಂದಿರಗಳಿಗೂ ಮಾರ್ಗಸೂಚಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಚಿತ್ರಮಂದಿರಗಳಲ್ಲಿ ಕೇವಲ ಶೇ.50 ಮಂದಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಿದೆ. ಇಲ್ಲಿಯೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

ಈ ಪ್ರತಿ ಪ್ರದರ್ಶನದ ಬಳಿಕ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು. ಪ್ರತಿಯೊಬ್ಬರು ಆರೋಗ್ಯ ಸೇತು ಆಪ್ ಹೊಂದಿರಬೇಕೆಂದು ತಿಳಿಸಿದೆ. ಫುಡ್ ಕೋರ್ಟ್ ಹಾಗೂ ಇತರೆ ಸ್ಥಳಗಳಲ್ಲಿ ಜನಸಂದಣಿ ಪತ್ತೆಹಚ್ಚಲು ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ.

Exit mobile version