ಮೇ 25ರಿಂದ ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರದಿಂದ ಅಸ್ತು.

ಕೊರೋನಾ ವೈರಸ್ ಮಹಾಮಾರಿ ಕಾಲಿಟ್ಟಾಗಿನಿಂದ ಲಾಕ್ಡೌನ್ ಮಾಡಲಾಗಿದ್ದು ಸುಮಾರು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿದೆ.. ಮೇ 25ರಿಂದ ವಿಮಾನ ಹಾರಾಟಕ್ಕೆ ಕೇಂದ್ರ ಸಕರ್ಾರ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಕರ್ಾರಿ ಸ್ವಾಮ್ಯದ ಹಾಗೂ ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಈ ಸಂದೇಶವನ್ನು ನಾಗರಿಕ ವಿಮಾನಯಾನ ಸಚಿವ ಹದರ್ಿಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ

ಇನ್ನು ಇದಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ಕೇಂದ್ರ ಸಕರ್ಾರ ಪ್ರಕಟ ಮಾಡಲಿದ್ದು ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಮಾಡಿಕೊಡಲಾಗಿದೆ.ಇನ್ನು ಏಳು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಅದಕ್ಕೆ ತಕ್ಕಂತೆ ವಿಮಾನ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತದೆ.ಇನ್ನು ಬೆಂಗಳೂರಿನಿಂದ ದೆಹಲಿ ವಿಮಾನ ಪ್ರಯಾಣ ಐದನೇ ವಿಭಾಗದ ಅಡಿಯಲ್ಲಿ ಮಾಡಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ದೆಹಲಿ ಪ್ರಯಾಣ ಮಾಡಲು 120, 150 ನಿಮಿಷಗಳು ಸಮಯ ತೆಗೆದುಕೊಳ್ಳುತ್ತೆ.

ಅಂದಹಾಗೆ ಈ ವಿಭಾಗದಲ್ಲಿ ಟಿಕೆಟ್ಬೆಲೆ ಕನಿಷ್ಟ 4500 ರೂ ಗರಿಷ್ಟ 13000 ರು ನಿಗದಿಯಾಗಿದೆ. ಇದಕ್ಕಿಂತ ಹೆಚ್ಚಿಗೆ ಟಿಕೆಟ್ ಮಾರಾಟ ಮಾಡುವ ಹಾಗಿಲ್ಲ ಅನ್ನೋದು ಕೇಂದ್ರದ ಖಡಕ್ ಆದೇಶವಾಗಿದೆ. ಇನ್ನು ಮೇ 25 ರಿಂದ ಆಗಸ್ಟ್ 24ರವರೆಗೂ ಈ ಮಾರ್ಗಸೂಚಿ ಅನ್ವಯವಾಗಲಿದೆ. ಆದುದರಿಂದ ಕೇಂದ್ರದ ಮುಂದಿನ ಆದೇಶದವರೆಗೂ ಎಲ್ಲ ವಿಮಾನಯಾನ ಸಂಸ್ಥೆಗಳು ಅವುಗಳ ಅವಧಿಯ ಆಧಾರದಲ್ಲಿ ಟಿಕೆಟ್ ಬೆಲೆಗಳನ್ನು ನಿಗದಿಪಡಿಸಬೇಕು

Exit mobile version