ಮೋದಿ ಸರ್ಕಾರಕ್ಕೆ ಮುಖಭಂಗ

ನವದೆಹಲಿ: ಕಾರ್ಮಿಕ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಭಾರತ ಕಳಪೆ ಸಾಧನೆ ತೋರಿದೆ. 158 ದೇಶಗಳಲ್ಲಿ 151ನೇ ಸ್ಥಾನಕ್ಕೆ ಕುಸಿದಿದೆ ಎಂದು ಆಕ್ಸ್ ಫ್ಯಾಮ್ ನ ಕಮಿಟ್ಮೆಂಟ್ ಟು ರೆಡ್ಯೂಸಿಂಗ್ ಇನ್ ಇಕ್ವಾಲಿಟಿ ಇಂಡೆಕ್ಸ್ ( ಸಿ ಆರ್ ಐ ಐ) ವರದಿ ಬಹಿರಂಗಪಡಿಸಿದೆ.

ದುರ್ಬಲ ಕಾರ್ಮಿಕ ಹಕ್ಕುಗಳು ಮತ್ತು ಹೆಚ್ಚುತ್ತಿರೋ ನಿರುದ್ಯೋಗ ಸಮಸ್ಯೆಗಳು ಭಾರತವನ್ನು141ನೇ ಸ್ಥಾನದಿಂದ 151ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.  ಉತ್ತರಪ್ರದೇಶದಲ್ಲಿ ಅನೌಪಚಾರಿಕ ವಲಯದಲ್ಲಿ ಅತೀ ಹೆಚ್ಚು ಅಂದ್ರೆ ಶೇ86.9  ಪುರುಷ ಕಾರ್ಮಿಕರಿದ್ದಾರೆ. ಆಂಧ್ರ ಪ್ರದೇಶದಲ್ಲಿ ಶೇ 73.6 ಮಹಿಳೆಯರು ಅನೌಪಚಾರಿಕ ವಲಯದಲ್ಲಿ ದುಡಿಯುತ್ತಿದ್ದಾರೆ.  

ದೆಹಲಿಯಲ್ಲಿ ಅನೌಪಚಾರಿಕ ವಲಯದಲ್ಲಿ ಉಧ್ಯೋಗಸ್ಥ ಮಹಿಳೆಯರ ಸಂಖ್ಯೆ  ಶೇ 31.8 ಮತ್ತು ಪರುಷರು 64.8ರಷ್ಟಿದ್ದಾರೆ ಎಂದು ವಿಶ್ಲೇಷಣೆಯಿಂದ ತಿಳಿದಿದೆ. ಕೋವಿಡ್ ಕಾರಣದಿಂದಾಗಿ ಅಸಮಾನತೆ ಪ್ರಮಾಣ ಹೆಚ್ಚಾಗಿದ್ದು ಇದನ್ನು ಸರಿದೂಗಿಸಲು ಸರ್ಕಾರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ವರದಿ ತಿಳಿಸಿದೆ.

ಸಾರ್ವಜನಿಕ ಸೇವೆಗಳಲ್ಲಿ ಸಿ ಆರ್ ಐ  ಸೂಚ್ಯಂಕದಲ್ಲಿ ಭಾರತವು 141ನೇ ಸ್ಥಾನದಲ್ಲಿದೆ. ಇನ್ನು ಕಾರ್ಮಿಕರ ಆರೋಗ್ಯ, ಶಿಕ್ಷಣ, ಇತರೆ ಸೌಲಭ್ಯ ಕಲ್ಪಿಸುವ ಪಟ್ಟಿಯಲ್ಲಿ 159 ದೇಶಗಳ ಪೈಕಿ ಭಾರತಕ್ಕೆ 129 ಸ್ಥಾನ ಸಿಕ್ಕಿದೆ. ಇದು ಜಾಗತಿಕ ವರದಿಯಾಗಿದ್ದು , ಭಾರತ ಸೇರಿ 158 ರಾಷ್ಟ್ರಗಳು ಈ ಬಗ್ಗೆ ವರದಿ ಮಾಡಿವೆ.

Exit mobile version