ಹತ್ರಾಸ್‌: ಸಿಸಿಟಿವಿ ಫೂಟೇಜ್‌ಗಳು ನಾಪತ್ತೆ

ನವದೆಹಲಿ, ಅ. 15 : ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿನ ಸಿಸಿ ಟಿವಿ ಫೂಟೇಜ್ ಗಳು ನಾಪತ್ತೆಯಾಗಿದ್ದು, ಪೋಲೀಸರ ನಿರ್ಲಕ್ಷಕ್ಕೆ ಮತ್ತೊಂದು ಸಾಕ್ಷಿ ಎಂಬಂತಾಗಿದೆ.

ಘಟನೆಯ ಸಾಕ್ಷ್ಯಗಳನ್ನು ಸಂಗ್ರಹಿಸಲು ಹತ್ರಾಸ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಿಬಿಐ ತಂಡ ಯಾವುದೇ ಸಾಕ್ಷ್ಯಗಳಿಲ್ಲದೇ ವಾಪಾಸಾಗಿದೆ. ಸಿಬಿಐ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಘಟನೆಯ ಒಂದು ತಿಂಗಳ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾನ್ಯವಾಗಿ ಬ್ಯಾಕಪ್‌ನಲ್ಲಿರುವುದಿಲ್ಲ. ಆದರೆ ಇಲ್ಲಿ ಆಸ್ಪತ್ರೆಯ ಲೋಪ ಎದ್ದು ಕಾಣುತ್ತಿದ್ದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು ಮತ್ತು ವೈದ್ಯರನ್ನು ಸಿಬಿಐ ತರಾಟೆಗೆ ತೆಗೆದುಕೊಂಡಿದೆ.

Exit mobile version