ಪ್ರಸ್ತುತ ಭಾರತದಲ್ಲಿ ಒಂದು ರೂಪಾಯಿ ನಾಣ್ಯ(1 rupee meal from KBL Canteen bengaluru) ಕಾಣಸಿಗುವುದೇ ಅಪರೂಪವಾಗಿದೆ.
ಅದರಲ್ಲೂ ಆನ್ಲೈನ್ ಪೇಮೆಂಟ್(1 rupee meal from KBL Canteen bengaluru) ಸೇವೆಗಳು ಬಂದ ನಂತರವಂತೂ ಒಂದು ರೂಪಾಯಿ ನಾಣ್ಯ ಕಾಣಿಸಿಗುವುದು ಅಪರೂದಲ್ಲಿಯೇ ಅಪರೂಪ.
https://vijayatimes.com/healthtips-of-dill-leaves/

ಒಂದು ರುಪಾಯಿಗೆ ಏನು ಸಿಗುತ್ತೆ ಎಂದು ಕೇಳುವ ಈಗಿನ ಮಂದಿಗೆ, ಒಂದು ಕಾಲದಲ್ಲಿ 25 ಪೈಸೆಗೊಂದರಂತೆ, 1 ರೂ.ಗೆ ನಾಲ್ಕು ಚಾಕಲೇಟ್ ಸಿಗುತ್ತಿದ್ದರ ಬಗ್ಗೆ ಹೇಳಿದರೆ ಆಶ್ಚರ್ಯವೆನಿಸಬಹುದು. ಆದರೆ, ಒಂದು ರೂಪಾಯಿ ನಾಣ್ಯದ ಸರಿಯಾದ ಬೆಲೆ ತಿಳಿಯದವರ ಮಧ್ಯೆ ಒಂದು ಹೊತ್ತಿನ ಹಸಿವನ್ನು ನೀಗಿಸಲು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಮಗೆ ರಾಜ್ಯ ರಾಜಧಾನಿ ಬೆಂಗಳೂರಿನಂತಹ(Bengaluru) ನಗರ ಪ್ರದೇಶದಲ್ಲಿ ಒಂದು ರೂಪಾಯಿ ನಾಣ್ಯಕ್ಕೆ ತುಂಬ ಬೆಲೆಯಿದೆ ಎಂದು ಹೇಳಿದ್ರೆ ಖಂಡಿತ ಆಶ್ಚರ್ಯವೆನಿಸಬಹುದು.
ಬೆಳೆಯುತ್ತಿರುವ ಬೆಂಗಳೂರಿನಂತಹ ನಗರದಲ್ಲಿ ವಸ್ತುಗಳ ಬೆಲೆಯೂ ದುಬಾರಿಯಾಗುತ್ತಿದೆ. ಆದರೆ ಈ ಸಿಲಿಕಾನ್ ಸಿಟಿಯಲ್ಲಿ ಒಂದು ರೂಪಾಯಿ ಇದ್ದರೆ ಸಾಕು ಒಂದು ಹೊತ್ತಿನ ಊಟವನ್ನು ನೀಗಿಸಬಹುದಾದ ಉಪಹಾರದ ಕ್ಯಾಂಟಿನ ಇದೆ.
ಇಲ್ಲಿ ಒಂದು ರೂಪಾಯಿ ನೀಡಿದರೆ ಸಾಕು ಹೊಟ್ಟೆ ತುಂಬ ಆಹಾರ ಸಿಗುತ್ತದೆ, ಅದರಲ್ಲೂ ಶುಚಿಯಾದ, ರುಚಿಯಾದ ಆಹಾರವೇ ಸಿಗುತ್ತದೆ.
ಹೌದು, ಒಂದು ಕಾಲದಲ್ಲಿ ಜೇಬಿನಲ್ಲಾಗುವ ನಾಣ್ಯಗಳ ಶಬ್ಧದಿಂದ ಆತನನ್ನು ಶೀಮಂತ ಎಂದು ಪರಿಗಣಿಸಲಾಗುತ್ತಿತ್ತು. ಆದರೀಗ ನೋಟುಗಳದ್ದೇ ಕಾರುಬಾರು, ನಾಣ್ಯಗಳು ಮೂಲೆಗೆ ಸರಿಯುತ್ತಾ ಬಂದಿದೆ.
ಇಂತಹ ಸಂದರ್ಭದಲ್ಲಿ ಅಚ್ಚರಿಯ ವಿಚಾರವೆಂದರೆ, ಹರಿನಗರದ, ಅಂಜನಾಪುರದ ಬಳಿ ಕೆ.ಬಿ.ಎಲ್ ಕ್ಯಾಂಟೀನ್ನಲ್ಲಿ(KBL Canteen) ಒಂದು ರೂಪಾಯಿ ನಾಣ್ಯದ ಮೌಲ್ಯವನ್ನು ಅರಿತು ಹಸಿದವರಿಗೆ ಆಹಾರ ನೀಡುತ್ತಿದೆ.
ಬೆಂಗಳೂರಿನಂತಹ ನಗರದಲ್ಲಿ ಒಂದು ಹೊತ್ತಿನ ಆಹಾರಕ್ಕೆ ಅದೆಷ್ಟೋ ಜನರು ಕಷ್ಟಪಡುತ್ತಿದ್ದಾರೆ. ಆದರೆ ಅಂಜನಾಪುರದ ಬಳಿ ಇರುವ ಕ್ಯಾಂಟೀನ್ ಮಾಲೀಕರು, ಅವರೆಲ್ಲರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದೆ.
ಪ್ರಸ್ತುತ ಸಮಾಜದಲ್ಲಿ ಹಸಿವಾದವನಿಗೆ ಆಹಾರ, ನೀರು ಕೊಡಲು ಹಿಂಜರಿಯುತ್ತಾರೆ. ಆದರೆ ಇಲ್ಲಿ ಒಂದು ರೂಪಾಯಿಗೆ ಆಹಾರ ಸಿಗುತ್ತದೆ ಎಂಬ ಸುದ್ದಿ ಕೇಳಿದ್ರೆ ಅಚ್ಚರಿಯಲ್ಲದೆ ಮತ್ತೇನು?
ಒಂದು ರೂಪಾಯಿ ನಾಣ್ಯ ನೀಡಿದರೆ ಊಟ ನೀಡುವ ಕ್ಯಾಂಟೀನ್ ಮಾತ್ರವಲ್ಲ, ಪ್ಲಾಸ್ಟಿಕ್ ಅಥವಾ ಗುಜರಿ ವಸ್ತುಗಳನ್ನು ನೀಡಿದರೆ ಆಹಾರ ನೀಡುವ ಅಂಗಡಿಗಳೂ ಇವೆ. ಈ ಮೊದಲು ಅಂತಹ ಹೋಟೆಲ್ ಕುರಿತು ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ, ಒಂದು ರೂಪಾಯಿ ನಾಣ್ಯ ನೀಡಿದರೆ ಆಹಾರ ನೀಡುವ ಹೋಟೆಲ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಚ್ಚರಿಯೆಂದರೆ, ಕೆ.ಬಿ.ಎಲ್ ಕ್ಯಾಂಟೀನ್ ಎಂದರೆ ಯಾರಿಗೂ ತಿಳಿಯುವುದಿಲ್ಲ, ಅದೇ ಒಂದು ರೂಪಾಯಿ ಕ್ಯಾಂಟೀನ್ ಎಂದರೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ!
- ಪವಿತ್ರ