ಮೈಸೂರನ್ನು ಸುಂದರವಾಗಿ ಚಿತ್ರಿಸಿ, ಪ್ರೇಮಿಗಳ ಮನಗೆದ್ದ ನೆನಪಿರಲಿ ಚಿತ್ರಕ್ಕೆ 17 ವರ್ಷಗಳ ‘ನೆನಪು’

Sandalwood : ಲವ್ಲಿ ಸ್ಟಾರ್ ಪ್ರೇಮ್(Lovely Star Prem) ಅಭಿನಯದ ‘ನೆನಪಿರಲಿ’(17 years for nenapirali) ಸಿನಿಮಾದ(Cinema) ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 2005ರಲ್ಲಿ ರಿಲೀಸ್(Release) ಆಗಿದ್ದ ‘ನೆನಪಿರಲಿ’ ಸಿನಿಮಾಗೆ ಈಗ 17 ವರ್ಷಗಳಾಗಿದೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಪ್ರೇಮ್, ಪ್ರಾಣ ಚಿತ್ರದ ಮೂಲಕ 2004ರಲ್ಲಿ ಹೀರೋ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ಆದರೆ, ಇವರ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ಚಿತ್ರ ರತ್ನಜ ನಿರ್ದೇಶನದಲ್ಲಿ ಮೂಡಿ ಬಂದ ‘ನೆನಪಿರಲಿ’. ಈ ಚಿತ್ರ ಬ್ಲಾಕ್ ಬಾಸ್ಟರ್ ಹಿಟ್(Blockbuster Hit) ಆಗುವ ಜೊತೆಗೆ,

https://youtu.be/3esp1W4vIcg ಸದನದಲ್ಲಿ ಕದನ!

ಎರಡನೇ ಸಿನಿಮಾದಲ್ಲಿಯೇ ಪ್ರೇಮ್ಗೆ ಸ್ಟಾರ್ ಪಟ್ಟ ಕೊಟ್ಟ ಸಿನಿಮಾವೂ ಹೌದು. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದ ಕರೆಯುವುದಕ್ಕೆ ಶುರು ಮಾಡಿತು. ಪ್ರೇಮ್ ಮಾತ್ರವಲ್ಲ, ಸಿನಿಮಾದ ದ್ವಿತಿಯಾರ್ಧದಲ್ಲಿ ನಾಯಕಿಯಾಗಿ ಮಿಂಚಿದ್ದ ವರ್ಷ ಕೂಡ ಅಷ್ಟೆ ಫೇಮಸ್ ಆದರು.


ಹೌದು, ಪ್ರೇಮ್ ಕುಮಾರ್ ಅವರ ವೃತ್ತಿ ಬದುಕಿನ ಅತ್ಯದ್ಭುತ ಸಿನಿಮಾಗಳಲ್ಲಿ ಇದೂ ಒಂದು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೂ ಪಾತ್ರರಾಗಿದ್ದಾರೆ ಪ್ರೇಮ್. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರ ಹೆಸರಿನ ಜೊತೆಗೆ ನೆನಪಿರಲಿ ಸಹ ಸೇರಿಕೊಂಡಿತು, ಹಾಗೂ ಈ ಸಿನಿಮಾ ಮೂಲಕ ಪ್ರೇಮ್ ಮನೆಮಾತಾದರು.

ಇದನ್ನೂ ಓದಿ : https://vijayatimes.com/actor-raju-srivastava-is-no-more/


ಇನ್ನು ಸಿನಿಮಾ ನಿರ್ದೇಶಕರಾದ ರತ್ನಜ ಅವರ ಬಗ್ಗೆ ಹೇಳುವುದಾದರೆ, ಒಬ್ಬ ವ್ಯಕ್ತಿ ತಾಯಿಯ ಮೇಲೆ ಎಷ್ಟು ಪ್ರೀತಿ ಇಟ್ಟಿರುತ್ತಾನೋ, ಅಷ್ಟೇ ಪ್ರೀತಿ ತನ್ನೂರಿನ ಬಗ್ಗೆಯೂ ಇಟ್ಟಿರುತ್ತಾನೆ. ನಿರ್ದೇಶಕ ರತ್ನಜ ಅವರಿಗೂ ಅಷ್ಟೇ, ಮೈಸೂರಿನ(Mysuru) ಬಗ್ಗೆ ಹೆಚ್ಚಿನ ಮಮಕಾರ.

ಅವರಿಗೆ ಆ ಊರಿನ ಬಗ್ಗೆ ಇರುವ ಅಭಿಮಾನಕ್ಕೆ ‘ನೆನಪಿರಲಿ’ ಚಿತ್ರದ ಕುರಕ್ಕೆ ಕುಕ್ಕರಳ್ಳಿ ಕೆರೆ ಹಾಡೇ ಸಾಕ್ಷಿ. ಮೈಸೂರನ್ನು ಅತ್ಯಂತ ಸುಂದರವಾಗಿ ತೋರಿಸುವುದರ ಜೊತೆಗೆ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಹ ಸಿನಿಮಾ ನೆನಪಿರಲಿ. ಆಗಿನ ದಿನಗಳಲ್ಲಿ ಪ್ರೇಮಿಗಳಿಗೆ, ನೆನಪಿರಲಿ ಸಿನಿಮಾ ಹಾಗೂ ಸಿನಿಮಾದ ಹಾಡುಗಳು ಹಬ್ಬದೌತಣವನ್ನೇ ಬಡಿಸಿತ್ತು ಎಂದರೆ ತಪ್ಪಾಗುವುದಿಲ್ಲ.
Exit mobile version