ಅಶ್ಲೀಲ ಮತ್ತು ಅಸಭ್ಯ ಮಾಹಿತಿ ಬಿತ್ತರಿಸುತ್ತಿದ್ದ 18 ಒಟಿಟಿ ಫ್ಲಾಟ್​ಫಾರ್ಮ್​ ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ

New Delhi: ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ “ಅಶ್ಲೀಲ ಮತ್ತು ಅಸಭ್ಯ” ವಿಷಯಗಳ (18 OTT Platform Banned in IND) ಪ್ರದರ್ಶಿಸಿ ಜನರ ದಿಕ್ಕು ತಪ್ಪಿಸಲು ಶತಪ್ರಯತ್ನ ಪಡುತ್ತಿರುವ

18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು (OTT platforms) ಹಾಗೂ 19 ವೆಬ್​ಸೈಟ್​ ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ನಿರ್ಬಂಧಿಸಿದೆ. 

ಇವುಗಳನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗದಂತೆ (18 OTT Platform Banned in IND) ನೋಡಿಕೊಳ್ಳಲು ಆದೇಶ ಹೊರಡಿಸಿದೆ.

ಈ ಕುರಿತು ತಿಳಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಚಿವರಾದ ಅನುರಾಗ್​ ಠಾಕೂರ್​​, ಸೃಜನಾತ್ಮಕತೆ ಅಭಿವ್ಯಕ್ತಿ ಹೆಸರಿನಲ್ಲಿ ಫ್ಲಾಟ್​​ಫಾರ್ಮ್​​ಗಳ ಅಶ್ಲೀಲತೆ ಮತ್ತು ಅಸಭ್ಯತೆ,

ದೌರ್ಜನ್ಯದ ಕುರಿತು ಉತ್ತೇಜಿಸಿದಂತೆ ಕಂಡು ಬಂದಿರುವ ಎಲ್ಲ ಪ್ಲಾಟ್ ಫಾರ್ಮ್ ಬ್ಯಾನ್ ಆಗಿದೆ. ಈ ಫ್ಲಾಟ್​ಫಾರ್ಮ್​ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ಮಹಿಳೆಯರ ಗೌರವಕ್ಕೆ

ಧಕ್ಕೆ ತರುವ ರೀತಿಯ ಚಿತ್ರಿಸಲಾಗಿದೆ. ಇದರಲ್ಲಿ ಹಲವು ವಿಷಯದಲ್ಲಿ ನಗ್ನ ಮತ್ತು ಲೈಂಗಿಕತೆ ಪ್ರಚೋದಿಸುವ ಕಂಟೆಂಟ್​ ಹೊಂದಿವೆ ಎಂದು ತಿಳಿಸಿದೆ.

ಡ್ರೀಮ್ಸ್ ಫಿಲ್ಮ್ಸ್ (Dreams Films), ವೂವಿ (Voovi), ಯೆಸ್ ಮ (Yess Ma), ಅನ್ ಕಟ್ ಅಡ್ಡಾ (Uncut Adda), ಟ್ರೈ ಫ್ಲಿಕ್ಸ್ (Tri Flicks), ಎಕ್ಸ್ ಪ್ರೈಮ್ (X Prime), ನಿಯಾನ್ ಎಕ್ಸ್ ವಿಐಪಿ

(Neon X VIP) ಮತ್ತು ಬೇಷರಮ್ಸ್(Besharams). ಇನ್ನುಳಿದಂತೆ ಒಟಿಟಿಗಳಾದ ಹಂಟರ್ಸ್ (Hunters), ರ್ಯಾಬಿಟ್ (Rabbit), ಎಕ್ಸ್ ಟ್ರಾ ಮೋಡ್ (Xtramood), ಮೂಡ್ ಎಕ್ಸ್ (MoodX),

ಮೋಜ್ ಫ್ಲಿಕ್ಸ್ (Mojflix), ಹಾಟ್ ಶಾಟ್ಸ್ ವಿಪಿಐ (Hot Shots VIP), ಚಿಕೂಫ್ಲಿಕ್ಸ್ (Chikooflix), ಪ್ರೈಮ್ ಪ್ಲೇ (Prime Play), ನ್ಯೂಫ್ಲಿಕ್ಸ್ (Nuefliks) ಮತ್ತು ಫಂಗಿ (Fungi). ಮುಂತಾದ


OTT ಪ್ಲಾಟ್‌ಫಾರ್ಮ್‌ಗಳನ್ನು ನಿರ್ಭಂಧಿಸಿದೆ.

ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಹೊಂದಿರುವ 19 ವೆಬ್​ಸೈಟ್ (Website)​, 10 ಆ್ಯಪ್​​ (ಏಳು ಗೂಗಲ್​ ಪ್ಲೇ ಸ್ಟೋರ್, ಮೂರು ಆಪಲ್​ ಆ್ಯಪ್​ ಸ್ಟೋರ್​ನಲ್ಲಿ ಲಭ್ಯವಿರುವ​​) ಮತ್ತು 57 ಸಾಮಾಜಿಕ ಮಾಧ್ಯಮ

ಖಾತೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.ಇದರಲ್ಲಿ ಗೂಗಲ್​ ಸ್ಟೋರ್​ನಲ್ಲಿ (Google Store) ಲಭ್ಯವಿರುವ ಒಂದು ಒಟಿಟಿಯೂ 1 ಕೋಟಿ ಡೌನ್​ಲೋಡ್ ​ ಕಂಡರೆ,

ಎರಡು ಒಟಿಟಿಗಳು 50 ಲಕ್ಷ ಡೌನ್​ಲೋಡ್​ ಆಗಿವೆ. ಇನ್ನು ಸಾಮಾಜಿಕ ಮಾಧ್ಯಮದ ಫ್ಲಾಟ್​​ಫಾರ್ಮ್​ನಲ್ಲಿ 32 ಲಕ್ಷಕ್ಕೂ ಅಧಿಕ ಬಳಕೆದಾರರಿರುವುದು ಕಂಡು ಬಂದಿದೆ.

ಹಾಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ 200 ಅಡಿಯಲ್ಲಿ, ಸೆಕ್ಷನ್​ 67 ಮತ್ತು 67ಎ ಉಲ್ಲಂಘನೆ, ಐಪಿಸಿ ಸೆಕ್ಷನ್​ 292 ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿದ್ಯ (ತಿದ್ದುಪಡಿ) ಕಾಯ್ದೆ ಸೆಕ್ಷನ್​ 4ರ ಅಡಿ ಕ್ರಮ

ಕೈಗೊಳ್ಳಲಾಗಿದೆ. ಈ ಒಟಿಟಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಇದನ್ನು ಓದಿ: ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲು!

Exit mobile version