2 ಕೋಟಿ ರೈತರ ಸಹಿಗಳನ್ನು ರಾಷ್ಟ್ರಪತಿಯವರಿಗೆ ತಲುಪಿಸಿದ ಕಾಂಗ್ರೆಸ್

ನವದೆಹಲಿ, ಡಿ. 24: ಕೇಂದ್ರ ಸರ್ಕಾರದಿಂದ ಹೊರೆಡಿಸಿರುವ ವಿವಾದಿತ ನೂತನ ಕೃಷಿ ಮಸೂದೆಗಳಿಗೆ ಪ್ರೋತ್ಸಾಹ ನೀಡದೆ, ರೈತರು ಪ್ರತಿಭಟಿಸುತ್ತಿದ್ದಾರೆ. ಈ ನುತನ ಕೃಷಿ ಕಾಯ್ದೆ ವಿರೋಧವನ್ನು ಹಾಗೂ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ತಿಳಿಸಬೇಕೆಂದು ಕಾಂಗ್ರೆಸ್‌ನ ನಾಯಕರು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದ್ದಾರೆ.

ಎಪಿಎಂಸಿ ತಿದ್ದುಪಡಿ ಸೇರಿದಂತೆ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ ಸಹಿ ಸಂಗ್ರಹ ಚಳವಳಿ ನಡೆಸಿತ್ತು. ಅದಕ್ಕಾಗಿಯೇ ದೇಶಾದ್ಯಂತ 2ಕೋಟಿ ರೈತರು ಮಸೂದೆಯನ್ನು ವಿರೋಧಿಸಿ ಸಹಿ ಹಾಕಿದ್ದಾರೆ. ಸಹಿ ಮಾಡಿದ ಪತ್ರಗಳನ್ ಇಂದು ರಾಹುಲ್ ಗಾಂಧಿ ನೇತೃತ್ವದ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಆ ಪ್ರತಿಗಳನ್ನು ನೀಡಿದ್ದಾರೆ. ಈ ಕಾಯ್ದೆಗಳನ್ನು ಅಂಗೀಕರಿಸುವ ಮುಂಚೆ ಕೇಂದ್ರ ಸರ್ಕಾರ ಮಾತುಕತೆ ನಡೆಸದೆ ಕಾನೂನು ಮಾರ್ಪಾಡು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸಿನ ನಾಯಕರು ಸೇರಿ ರಾಷ್ಟ್ರಪತಿ ಭವನದವರೆಗೂ ಮೆರವಣಿಗೆ ನಡೆಸಿದ್ದಾರೆ.

Exit mobile version