ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!

Africa : ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ(2 Marriage Law In Africa) ಎನ್ನುವುದು ಬಹಳ ಮುಖ್ಯವಾದ ಕ್ಷಣವಾಗಿದ್ದು, ಕೊನೆಯವರೆಗೂ ನೆನಪಿಡುವ ಸಿಹಿ ನೆನಪಾಗಿದೆ. ವಿವಾಹವಾದ ಕ್ಷಣದಿಂದ ಜೀವನದ ಹೊಸ ಪಯಣ ಆರಂಭವಾಗುತ್ತದೆ.

ಅದಕ್ಕಾಗಿಯೇ ಮದುವೆ ಎನ್ನುವ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿವಾಹ ಸಂಪ್ರದಾಯಗಳು(2 Marriage Law In Africa) ರಾಜ್ಯ ಹಾಗೂ ಸಾಮಾಜಿಕ ವರ್ಗವನ್ನು ಅವಲಂಬಿಸಿ ಬದಲಾಗುತ್ತವೆ.

ಇದಲ್ಲದೆ, ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ.

ಪ್ರಾಚೀನ ಕಾಲದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಯಲ್ಲಿತ್ತು, ಒಬ್ಬ ಪುರುಷ ಎಷ್ಟು ಪತ್ನಿಯರನ್ನು ಬೇಕಾದರೂ ಹೊಂದಲು ಅವಕಾಶವಿತ್ತು.

ಆದರೆ ಕಾಲಕ್ರಮೇಣ ಈ ಸಂಪ್ರದಾಯ ಕಣ್ಮರೆಯಾಯಿತು, ಹೆಚ್ಚಾಗಿ ಏಕ ಪತ್ನಿತ್ವವನ್ನು ಪ್ರತಿಯೊಬ್ಬರೂ ಅನುಸರಿಸುತ್ತಾರೆ.

ಇದನ್ನೂ ಓದಿ : https://vijayatimes.com/5-years-rigorous-imprisonment/

ಕಾನೂನು ಪ್ರಕಾರ, ಎರಡನೇ ಮದುವೆಯಾಗ ಬಯಸಿದರೆ ಮೊದಲ ಪತ್ನಿಗೆ ಕಡ್ಡಾಯವಾಗಿ ವಿಚ್ಛೇದನ(Divorce) ನೀಡಲೇಬೇಕು. ಆದರೆ ಕೆಲವು ಪ್ರದೇಶಗಳಲ್ಲಿ,

ಈಗಲೂ ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳುವ ಸಂಪ್ರದಾಯ ರೂಡಿಯಲ್ಲಿದೆ. ಉದಾಹರಣೆಗೆ, ಆಫ್ರಿಕಾದ ಎರಿಟ್ರಿಯಾದಲ್ಲಿ ಬಹುಪತ್ನಿತ್ವ ಎನ್ನುವ ವಿಚಿತ್ರ ವಿವಾಹ ಸಂಪ್ರದಾಯವಿದೆ.

ಇದು ಕೇವಲ ಸಂಪ್ರದಾಯವಷ್ಟೇ ಅಲ್ಲ ಕಾನೂನು ಕೂಡ ಆಗಿದ್ದು, ಇಲ್ಲಿ ಪ್ರತಿಯೊಬ್ಬ ಪುರುಷನೂ ಎರಡು ಮದುವೆಯಾಗಲೇಬೇಕು.

ಒಂದು ವೇಳೆ, ಪುರುಷನೊಬ್ಬ ಎರಡನೇ ಮದುವೆಗೆ ನಿರಾಕರಿಸಿದರೆ ಜೈಲಿಗೆ ಹಾಕಲಾಗುತ್ತದಂತೆ. ಜೊತೆಗೆ ಏಕಕಾಲದಲ್ಲಿ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗುತ್ತದೆ.

https://fb.watch/h4m9r-F31S/ 4 ವರ್ಷಗಳಾದ್ರೂ ಮುಗಿದಿಲ್ಲ ವೆಸ್ಟ್ ಆಫ್ ಕಾರ್ಡ್ ಮೇಲ್ಸೇತುವೆ ಕಾಮಗಾರಿ!


ಇನ್ನೊಬ್ಬ ಮಹಿಳೆಯೊಂದಿಗೆ ತನ್ನ ಗಂಡನನ್ನು ಹಂಚಿಕೊಳ್ಳಲು ಸಮ್ಮತಿಯಿಲ್ಲದಿದ್ದರೂ, ಮಹಿಳೆಯರು ಇದನ್ನು ವಿರೋಧಿಸುವಂತಿಲ್ಲ.

ಒಂದು ವೇಳೆ, ಈ ಯಾವುದೇ ಮಹಿಳೆ ಈ ಕಾನೂನಿನ ವಿರುದ್ಧ ಮಾತನಾಡಿದರೆ, ಅವರ ಮೇಲೆಯೂ ಕಾನೂನು ಕ್ರಮ ಜರುಗಿಸಲಾಗುವುದು.

ಇಷ್ಟವಿರಲಿ ಬಿಡಲಿ, ಪ್ರತಿಯೊಬ್ಬರೂ ಈ ನಿಯಮವನ್ನು ಪಾಲಿಸಲೇಬೇಕು. ಗಂಡಸರು ಕೂಡ ಇಷ್ಟವಿಲ್ಲದಿದ್ದರೂ ಎರಡು ಮದುವೆ ಆಗವುದು ಕಡ್ಡಾಯ.

ಮದುವೆಯ ನಂತರ, ಇಬ್ಬರು ಪತ್ನಿಯರನ್ನು ಸರಿಯಾಗಿ ನೋಡಿಕೊಳ್ಳಬೇಕು. ಸಂಪ್ರದಾಯಗಳಿಗೆ ಬೆಲೆ ಕೊಟ್ಟು ಕಾನೂನನ್ನು ಗೌರವಿಸಬೇಕು ಎನ್ನುವ ಕಾರಣದಿಂದ, ಅಲ್ಲಿನ ಗಂಡಸರು ಎರಡು ವಿವಾಹ ಮಾಡಿಕೊಳ್ಳುತ್ತಿದ್ದಾರೆ.

https://youtu.be/Gcg0pNHfa70 4 ವರ್ಷಗಳಾದ್ರೂ ಮುಗಿದಿಲ್ಲ ವೆಸ್ಟ್ ಆಫ್ ಕಾರ್ಡ್ ಮೇಲ್ಸೇತುವೆ ಕಾಮಗಾರಿ!

ಇನ್ನು, ಗಂಡಸರು ಎರಡು ಮದುವೆಯಾಗಲೇಬೇಕು ಎನ್ನುವ ನಿಯಮದ ಹಿಂದೆ ಬಲವಾದ ಕಾರಣವೂ ಇದೆ. ಭಾರತದಲ್ಲಿ ಪುರುಷರು ಹಾಗೂ ಮಹಿಳೆಯರ ಅನುಪಾತ ಕಡಿಮೆಯಾಗಿದೆ.

ಎಂದರೆ, ನಮ್ಮ ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯಿದೆ. ಆದರೆ ಎರಿಟ್ರಿಯಾದಲ್ಲಿ ಹೀಗಿಲ್ಲ, ಪುರುಷರಿಗಿಂತ ಮಹಿಳಾ ಜನಸಂಖ್ಯೆಯೇ ಹೆಚ್ಚು.

ಹಾಗಾಗಿ ಪುರುಷ ಹಾಗೂ ಮಹಿಳೆಯ ಅನುಪಾತವನ್ನು ಸರಿದೂಗಿಸುವ ಸಲುವಾಗಿ ಪುರುಷರು ಎರಡು ವಿವಾಹವಾಗಬೇಕೆಂಬ ನಿಯಮವನ್ನು ತರಲಾಗಿದೆ. ಈ ಕಾನೂನಿನ ಪ್ರಕಾರ, ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿಯಿದ್ದರೆ, ಅವನನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ಈ ಕಾನೂನನ್ನು ಜಾರಿಗೆ ತಂದಿರುವ ಎರಿಟ್ರಿಯಾವನ್ನು ಪ್ರಪಂಚದಾದ್ಯಂತ ಟೀಕಿಸಲಾಗುತ್ತಿದೆ. ಆದರೆ ಎರಿಟ್ರಿಯಾ ತನ್ನ ದೇಶದಲ್ಲಿ ಮಹಿಳೆಯರ ಹಾಗೂ ಪುರುಷರ ಅನುಪಾತವನ್ನು ನಿಯಂತ್ರಿಸಲು ಬೇರೆ ದಾರಿಯಿಲ್ಲದೇ, ಎರಡು ವಿವಾಹಗಳ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ : https://vijayatimes.com/covid-spike-at-bejing/

ಮದುವೆ, ಮತದಾನ ಹಾಗೂ ಚಾಲನೆಗೆ ಕನಿಷ್ಠ ವಯಸ್ಸು ದೇಶದಿಂದ ದೇಶಕ್ಕೆ ಬದಲಾಗುವುದು ಸಾಮಾನ್ಯ. ಇವುಗಳನ್ನು ಆಯಾ ದೇಶದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

Exit mobile version