14 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಸ್ಪೋಟದ ತೀರ್ಪು ಪ್ರಕಟ!

blast

ಸುಮಾರು 14 ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ ದೇಶವೇ ಬೆಚ್ಚಿ ಬೀಳುವಂತಹ ಸರಣಿ ಸ್ಪೋಟ ನಡೆದಿತ್ತು. ಆ ಸರಣಿ ಸ್ಪೋಟದಲ್ಲಿ 56 ಮಂದಿ ಸಾವನಪ್ಪಿದ್ದರು. 2008ರ ಅಹಮದಬಾದ್ ಸರಣಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ. 2008ರಲ್ಲಿ ನಡೆದ ಸರಣಿ ಸ್ಪೋಟಗಳಲ್ಲಿ 56 ಮಂದಿ ಸಾವನಪ್ಪಿದ್ದರು. ಈ ಕುರಿತು ಸುಮಾರು 80 ಜನ ಆರೋಪಿಯರನ್ನು ವಿಚಾರಣೆ ನಡೆಸಲಾಗಿತ್ತು.
2008ರ ಅಹಮದಾಬಾದ್ ಸರಣಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ನ ವಿಶೇಷ ನ್ಯಾಯಾಲಯವು 38 ಮಂದಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಘೋಷಣೆ ಮಾಡಿದೆ.

2008ರ ಜುಲೈ 26ರಂದು ಅಹಮದಾಬಾದಿನ ಹಲವು ಕಡೆ ಕೇವಲ 70 ನಿಮಿಷಗಳ ಅಂತರದಲ್ಲಿ 20 ಬಾಂಬ್ಗಳನ್ನು ಸ್ಫೋಟಗೊಳಿಸಿದ್ದ ಭಯೋತ್ಪಾದಕರು, 56 ಜೀವಗಳನ್ನು ಬಲಿ ಪಡೆದಿದ್ದರು. 200ಕ್ಕೂ ಹೆಚ್ಚು ಮಂದಿ ಈ ದಾಳಿಯಲ್ಲಿ ಗಾಯಗೊಂಡಿದ್ದರು. 2002ರ ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರು ಈ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು. ಪ್ರಕರಣದಲ್ಲಿ ಉಳಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಭಾರತೀಯ ನೀತಿ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಪ್ರತಿ ಸೆಕ್ಷನ್ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಘೋಷಿಸಲಾಗಿದೆ.

Exit mobile version