vijaya times advertisements
Visit Channel

June 18, 2021

ಮೇಕೆದಾಟು ಅಣೆಕಟ್ಟು ಯೋಜನೆ: ಕನಾ೯ಟಕ ರಾಜ್ಯಕ್ಕೆ ಬಿಗ್ ರಿಲೀಫ್

ಮೇಕೆದಾಟು ಯೋಜನೆಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ಸದ್ಯ ಪರಿಸರ ಅನುಮೋದನೆ ಪ್ರಕ್ರಿಯೆ ಬಾಕಿಯಿದೆ. ಮೇಕೆದಾಟು ಯೋಜನೆ ಪ್ರಶ್ನಿಸಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ. ತಮಿಳುನಾಡು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.ಈ ಮಧ್ಯೆ ಚೆನ್ನೈ ಎನ್ ಜಿಟಿಯಿಂದ ಸಮಿತಿ ರಚನೆ ಸರಿಯಲ್ಲ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದಿಸಿದ್ದರು. ವಾದ ಮನ್ನಿಸಿ ಪ್ರಕರಣವನ್ನು ಎನ್​​ಜಿಟಿ ಮುಕ್ತಾಯಗೊಳಿಸಿದೆ.

ಛತ್ತೀಸಗಡ್: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ ನಲ್ಲಿ ಮಹಿಳಾ ನಕ್ಸಲ್‌ ಹತ್ಯೆ

ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಜಂಟಿ ತಂಡಗಳು ಹೊರಟಿದ್ದಾಗ, ಚಂಡಮೇಟಾ-ಪ್ಯಾರ್‌ಭಟ್ ಗ್ರಾಮಗಳ ದಟ್ಟಾರಣ್ಯದಲ್ಲಿ ನಕ್ಸಲರ ಇರುವಿಕೆಯ ಬಗ್ಗೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮಾಹಿತಿ ಲಭಿಸಿತು. ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದು, ಭದ್ರತಾಪಡೆಗಳೂ ಪ್ರತಿದಾಳಿ ನಡೆಸಿವೆ.

ಬಿಜೆಪಿ ನಾಯಕರ ನಡುವಿನ ವೈಯಕ್ತಿಕ ಕೆಸರೆರಚಾಟಕ್ಕೆ ಕಾರಣವಾಯ್ತು ನಾಯಕತ್ವ ಬದಲಾವಣೆ ಗೊಂದಲ

ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸೇರಿದಂತೆ ಅನೇಕರು ಬಹಿರಂಗ ಅಸಮಾಧಾನ ಹೊರ ಹಾಕಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಒನ್ ಟು ಒನ್ ಚರ್ಚೆ ನಡೆಸಿ, ಸಿಎಂ ಆಡಳಿತ ವೈಖರಿ ಹಾಗೂ ಕುಟುಂಬ ಕಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಾಯಕತ್ವ ಬದಲಾವಣೆ ಕುರಿತ ಭಿನ್ನಮತ ಶಮನಗೊಳಿಸಲಿಲ್ಲ.

ಅಸ್ಸಾಂನ ಕಾಂಗ್ರೆಸ್ ಶಾಸಕ ರೂಪ್​ಜ್ಯೋತಿ ಕುರ್ಮಿ ರಾಜೀನಾಮೆ; ಮುಂದಿನ ವಾರ ಬಿಜೆಪಿಗೆ ಸೇರ್ಪಡೆ

ವಿಧಾನಸಭಾ ಸ್ಪೀಕರ್ ಬಿಸ್ವಜಿತ್ ಡೈಮರಿಗೆ ಕುರ್ಮಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಕುರ್ಮಿ ಶಾಸಕರಾಗಿ ಗೆದ್ದು ಒಂದೂವರೆ ತಿಂಗಳಲ್ಲಿಯೇ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕುರ್ಮಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಹುದ್ದೆಯ ಬಗ್ಗೆ ನನಗೆ ಭರವಸೆ ನೀಡಲಾಯಿತು ಆದರೆ ನಂತರ ಅದನ್ನು ನಿರಾಕರಿಸಲಾಯಿತು.

ಸೋನಿಯಾ, ರಾಹುಲ್‌ ಗಾಂಧಿ ಭೇಟಿಯಾದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ಟಾಲಿನ್‌ ಅವರು ಮೊದಲ ಬಾರಿಗೆ ಮಿತ್ರಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ಮೊಳಕೆಯೊಡೆದ ಕಾಳುಗಳ ಸೇವನೆಯಿಂದ ಈ ಆರೋಗ್ಯ ಪ್ರಯೋಜನಗಳಿವೆ

ದ್ವಿದಳ ಧಾನ್ಯಗಳು, ಬೀಜಗಳು ಅಥವಾ ತರಕಾರಿಗಳು ಮೊಳಕೆಯೊಡೆಯುವುದರಿಂದ ಸಿಪ್ಪೆಗಳಲ್ಲಿರುವ ಫೈಟಿಕ್ ಆಮ್ಲವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ಬೀಜಗಳೊಳಗೆ ಜೀರ್ಣಕಾರಿ ಕಿಣ್ವಗಳ ಉಪಸ್ಥಿತಿಯನ್ನು ಸೀಮಿತಗೊಳಿಸುತ್ತದೆ.

ಕೊವಿಡ್-19 ಮುಂಚೂಣಿ ಕಾರ್ಯಕರ್ತರ ಸಮಗ್ರ ತರಬೇತಿ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಚಾಲನೆ

ದೇಶಾದ್ಯಂತ ಸುಮಾರು 1 ಲಕ್ಷ ಕೋವಿಡ್ ವಾರಿಯರ್ಸ್ ಗೆ ಕೌಶಲ್ಯ ನೀಡಿ, ಅವರ ಕೌಶಲ್ಯ ವೃದ್ಧಿಸುವ ಗುರಿ ಹೊಂದಲಾಗಿದೆ. ಗೃಹ ಆರೈಕೆ ಬೆಂಬಲ, ಮೂಲ ಆರೈಕೆ ನೆರವು, ಅತ್ಯಾಧುನಿಕ ಆರೈಕೆ ನೆರವು, ತುರ್ತು ರಕ್ಷಣೆ ನೆರವು, ಮಾದರಿ ಸಂಗ್ರಹ ನೆರವು ಮತ್ತು ವೈದ್ಯಕೀಯ ಸಾಧನ ನೆರವು ಸೇರಿ ಆರು ಬಗೆಯ ಉದ್ಯೋಗಗಳಲ್ಲಿ ಕೋವಿಡ್ ವಾರಿಯರ್ಸ್ ಗೆ ತರಬೇತಿ ನೀಡಲಾಗುವುದು.

ಇಳಿಕೆ ಕಾಣುತ್ತಿರುವ ಕೊರೊನಾ: ಪಾಸಿಟಿವಿಟಿ ರೇಟ್‌ ಶೇ 3.24

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಒಟ್ಟು 62,480 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 2,97, 62,793 ಆಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 1587. ಇದರೊಂದಿಗೆ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ 3,83,490 ಆಗಿದೆ.

ದರ್ಶನ್ ಅನುಸರಿಸಿದ ನಟ ಅಭಯ್ ವೀರ್

ಕೊರೋನಾ ಲಾಕ್‌ಡೌನ್ ಶುರುವಾದಾಗಿನಿಂದಲೂ ಅಭಯ್ ವೀರ್ ಸಾಕಷ್ಟು ಬಡ ಜನರಿಗೆ, ಚಿತ್ರೋದ್ಯಮದ ಕಾರ್ಮಿಕರಿಗೆ ಆಹಾರ ಧಾನ್ಯ, ಫುಡ್ ಕಿಟ್ ವಿತರಿಸುವ ಮೂಲಕ ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದರು. ಈಗ ವನ್ಯಜೀವಿಗಳಿಗೂ ಆಹಾರದಾತನಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಾಯಕತ್ವ ಬದಲಾವಣೆಗೆ ಮತ್ತೊಮ್ಮೆ ಚಕಾರವೆತ್ತಿದ ಎಚ್. ವಿಶ್ವನಾಥ್; ವಿಜಯೇಂದ್ರ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ ಹಳ್ಳಿಹಕ್ಕಿ

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ‌20 ಸಾವಿರ ಕೋಟಿ ರೂ. ನೀರಾವರಿ ಯೋಜನೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.