vijaya times advertisements
Visit Channel

June 21, 2021

ರಾಜ್ಯಕ್ಕೆ ಲಸಿಕೆ ನೀಡದಿದ್ದರೂ ಜಾಹೀರಾತಿನಲ್ಲಿ ಮೋದಿ ಫೋಟೋ ಏಕೆ?: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ರಾಜ್ಯದಲ್ಲಿ ಇಂದಿನಿಂದ ಆರಂಭಿಸಿರುವ ಲಸಿಕೆ ಅಭಿಯಾನದ ಕುರಿತು ಎಲ್ಲಾ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಟೀಕಿಸಿರುವ ಕಾಂಗ್ರೆಸ್, ಮೋದಿ ಅವರು ರಾಜ್ಯಕ್ಕೆ ಲಸಿಕೆ ಕೊಡದಿದ್ದರೂ ಜಾಹೀರಾತು ಮಾತ್ರ ಕೊಡಲೇಬೇಕೆಂದು ತಾಕೀತು ಮಾಡಿದ್ದಾರೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಎಂದು ಪ್ರಶ್ನಿಸಿದೆ.

ಸಿಬಿಎಸ್​ಇ, ಐಸಿಎಸ್​ಇ ಆಡಳಿತ ಮಂಡಳಿಗಳಿಗೆ ಮೌಲ್ಯಮಾಪನ ಸೂತ್ರ ಅಂತಿಮಗೊಳಿಸಲು ಸುಪ್ರೀಂಕೋರ್ಟ್ ಸೂಚನೆ

ಉತ್ತರ ಪ್ರದೇಶ ಪೋಷಕರ ಒಕ್ಕೂಟದ ಪರವಾಗಿ ವಾದ ಮಂಡಿಸಿದ ವಕೀಲ ವಿಕಾಸ್ ಸಿಂಗ್, ಲಿಖಿತ ಪರೀಕ್ಷೆಯನ್ನು ಒಂದು ಆಯ್ಕೆಯಾಗಿ ಸಿಬಿಎಸ್​ಇ ಪರಿಗಣಿಸಿದೆ. ಆಂತರಿಕ ಮೌಲ್ಯಮಾಪನದಲ್ಲಿ ಉತ್ತಮ ಸಾಧನೆ ಮಾಡದ ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆ ಬರೆಯಲು ಬಯಸುತ್ತಾರೆ. ಇದು ಅಂಥವರಿಗೆ ಅನುಕೂಲ ಕಲ್ಪಿಸುತ್ತದೆ. ಯಾವುದೇ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲೇ ಈ ಆಯ್ಕೆಯನ್ನು ವಿದ್ಯಾರ್ಥಿ ಮತ್ತು ಶಾಲೆಗಳಿಗೆ ಕೊಡಬೇಕು.

ಈ ವರ್ಷವೂ ಅಮರನಾಥ ಯಾತ್ರೆ ರದ್ದು: ಆನ್ ಲೈನ್ ಮೂಲಕ ಆರತಿ ವ್ಯವಸ್ಥೆ

ಹಿಂದುಗಳ ಪವಿತ್ರ ಅಮರನಾಥ ಯಾತ್ರೆಗೆ ವರ್ಷವೂ ಸಾವಿರಾರು ದೇಶದ ವಿವಿಧ ಭಾಗಗಳಿಂದ ಹೋಗುತ್ತಾರೆ. ಈ ಬಾರಿಯೂ ಜೂ.28ರಿಂದ ಪಹಲ್​ಗಮ್​ ಮತ್ತು ಬಾಲ್ಟಾಲ್​ ಮಾರ್ಗಗಳ ಮೂಲಕ ಪ್ರಾರಂಭವಾಗಬೇಕಿತ್ತು. ಇದು 56 ದಿನಗಳ ಯಾತ್ರೆಯಾಗಿದ್ದು ಆಗಸ್ಟ್​ 22ರಂದು ಮುಕ್ತಾಯವಾಗುತ್ತಿತ್ತು. ಕೊರೊನಾ ಎರಡನೇ ಅಲೆಯ ನಿಮಿತ್ತ ಈ ಮೊದಲು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.

ಕೊರೊನಾ ಸಂತ್ರಸ್ತರಿಗೆ ಪರಿಹಾರ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ವಿಶೇಷ ರಜಾಕಾಲದ ಪೀಠ ಎರಡು ಗಂಟೆಗಳ ಕಾಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಎಸ್.ಬಿ.ಉಪಾಧ್ಯಾಯ ಮತ್ತು ಇತರ ವಕೀಲರು ಮಂಡಿಸಿದ ವಾದವನ್ನು ಆಲಿಸಿತು.

ವಿದ್ಯಾರ್ಥಿಗಳ ಆನ್ ಲೈನ್‌ ತರಗತಿಗಳಿಗೆ ನೆಟ್ವರ್ಕ್, ಇಂಟರ್ ನೆಟ್ ಸಮಸ್ಯೆ: ಸಮಸ್ಯೆ‌ ಬಗೆಹರಿಸುವಂತೆ ಸಿಎಂಗೆ ಸಚಿವ ಸುರೇಶ್ ಕುಮಾರ್ ಮನವಿ

ಶೈಕ್ಷಣಿಕ ವರ್ಷ ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ವಿಶಿಷ್ಟ ಸಮಸ್ಯೆಗೆ ನಾವು ಸಾಕ್ಷಿ ಆಗುತ್ತಿದ್ದೇವೆ. ಮುಂಗಾರು ಆರಂಭಾದಾಗಿನಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಕಳೆದ ಕೆಲವು ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬಳ ಮೊಬೈಲ್‌ ಕಲಿಕಾ ಚಿತ್ರ ಇಂದಿನ ಸ್ಥಿತಿಗತಿ ವಿವರಿಸಲಿದ್ದು, ಇದು ನಿಜಕ್ಕೂ ಮನಕಲಕುವ ಸಂಗತಿಗಳಾಗಿವೆ.

ಜಮೀರ್ ವಿರುದ್ಧ ಕ್ರಮಕೈಗೊಳ್ಳಲು ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆಯೇ?: ಡಿಕೆಶಿಗೆ ರಾಜ್ಯ ಬಿಜೆಪಿ ಟಾಂಗ್

ಬಿಜೆಪಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದೊಳಗಿನ ನಾಯಕತ್ವದ ಹೋರಾಟದ ಬಗ್ಗೆ ಮೌನವಾಗಿದ್ದಾರೆ. ಮುಂದಿನ ಸಿಎಂ ಸ್ಥಾನದ ವಿಚಾರವನ್ನು‌ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ಮುನ್ನಲೆಗೆ ಬಿಟ್ಟಿದ್ದಾರೆ, ಆದರೆ ದುರ್ಬಲ ಅಧ್ಯಕ್ಷರಿಗೆ ಏನೂ ಮಾಡಲಾಗುತ್ತಿಲ್ಲ ಎಂದು ಲೇವಡಿ ಮಾಡಿದೆ.

ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು

ಕಲ್ಲಂಗಡಿ ಮತ್ತು ಸೌತೆಕಾಯಿಗಳಂತಹ ನೀರಿನಾಂಶ ಹೆಚ್ಚಿರುವ ಆಹಾರವನ್ನು ತಪ್ಪಿಸಲು ಪ್ರಯತ್ನಿಸಿ. ಈ ಆಹಾರವನ್ನು ಮಲಗುವ ಮೊದಲು ತಿನ್ನುವುದರಿಂದ ಎಂದರೆ ನಿಮ್ಮ ಮೂತ್ರಕೋಶ ತುಂಬಿಕೊಳ್ಳುತ್ತದೆ. ಇದರಿಂದಾಗಿ ನೀವು ಮಧ್ಯರಾತ್ರಿಯಲ್ಲಿ ಟಾಯ್ಲೆಟ್ ಗೆ ಹೋಗಲು ಎದ್ದೇಳಬೇಕಾಗುತ್ತದೆ. ಇದು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಕೊರೊನಾ ಪ್ರಕರಣ ಇಳಿಕೆ: ಮತ್ತೆ ಆರು ಜಿಲ್ಲೆಗಳು ಅನ್ ಲಾಕ್

ಕೊರೊನಾ ಆತಂಕ ಕ್ಷೀಣಿಸಿದ ಹಾಗೂ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ನಿಯಮಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಪರಿಣಾಮ ಇಂದಿನಿಂದ(ಸೋಮವಾರ) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡಿ,‌ ನಿರ್ದಿಷ್ಟ ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆ.ಜಿ ಬಾಳೆಹಣ್ಣು 3.300 ರೂ

ಕಳೆದ ವಷ೯ ಚಂಡಮಾರುತದಿಂದ ಉಂಟಾದ ಹಾನಿಯಿಂದಾಗಿ ಕೃಷಿ ವಲಯವು ತನ್ನ ಉತ್ಪದನಾ ಯೋಜನೆಯನ್ಜು ಪೂರೈಸಲು ವಿಫಲವಾದ ಕಾರಣ ಜನರ ಆಹಾರ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಉತ್ತರ ಕೊರಿಯಾದ ಸವೋ೯ಚ್ಚ ನಾಯಕ ಕಿಮ್‌ ಜೊಂಗ್ ಉನ್‌ ದೇಶದ ಆಡಳಿತ ಪಕ್ಷದ ಕೇಂದ್ರ ಸಮಿತಿಯ ಸಭೆಯಲ್ಲಿ ತಿಳಿಸಿದ್ದಾರೆ.

ಸ್ಯಾನಿಟೈಸರ್ ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡುವುದು ಉತ್ತಮ

ಕೆಲವು ಜನರು ತಮ್ಮ ಕೈಗಳ ಬ್ಯಾಕ್ಟೀರಿಯಾವನ್ನು ಮುಕ್ತಗೊಳಿಸಲು ಸ್ಯಾನಿಟೈಜರ್ ಅನ್ನು ಬಳಸುತ್ತಾರೆ ಆದರೆ ಅದನ್ನು ಕೈಯಲ್ಲಿ ಚೆನ್ನಾಗಿ ಉಜ್ಜಿಕೊಳ್ಳುವುದಿಲ್ಲ. ಆದರೆ ಹೀಗೆ ಮಾಡಬೇಡಿ. ಸ್ಯಾನಿಟೈಜರ್ ಅನ್ನು ಹಚ್ಚಲು ಇದು ಸರಿಯಾದ ಮಾರ್ಗವಲ್ಲ. ಸ್ಯಾನಿಟೈಜರ್ ಸಂಪೂರ್ಣವಾಗಿ ಒಣಗುವವರೆಗೆ ನಿಮ್ಮ ಕೈಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ.