vijaya times advertisements
Visit Channel

October 8, 2021

ದಸರಾ ಪ್ರಯುಕ್ತ ಕೆಎಸ್ಆ‌ರ್‌ಟಿಸಿಯಿಂದ ಹೆಚ್ಚುವರಿ ಬಸ್‌

ಈ ಹೆಚ್ಚುವರಿ ಬಸ್ಸುಗಳ ಸೇವೆಯು ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಚೆನ್ನೈ, ಕೊಯಮತ್ತೂರ್, ಪುಣೆ ಸೇರಿದಂತೆ ಇನ್ನೂ ಹಲವು ಪ್ರದೇಶಗಳಿಗೆ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯಿಂದ ಸುಬ್ರಹ್ಮಣ್ಯನ್ ಸ್ವಾಮಿ ಔಟ್

 ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕಿಸುತ್ತಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಅವರನ್ನು ಎರಡು ದಿನಗಳ ಹಿಂದೆ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಮಂಡಳಿಯಿಂದ ತೆಗೆದು ಹಾಕಲಾಗಿತ್ತು. ಕೃಷಿ ಕಾಯ್ದೆ ಮತ್ತು ಲಖೀಮ್ ಪುರ್ ಹಿಂಸಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ದ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿ ಅವರನ್ನೂ ಕಾರ್ಯಕಾರಿ ಸದಸ್ಯತ್ತದಿಂದ ತೆಗೆದು ಹಾಕಲಾಗಿದೆ.

ಲಾರಿಗೆ ಬಸ್‌ ಡಿಕ್ಕಿ 9 ಮಂದಿ ಸಾವು

ದೆಹಲಿಯಿಂದ ಬಹರೀಚ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ 70 ಪ್ರಯಾಣಿಕರಿದ್ದರು. ರಸ್ತೆಯಲ್ಲಿ ನಿಂತಿದ್ದ ಹಸುವನ್ನು ರಕ್ಷಿಸಲು ಹೋದ ಚಾಲಕ ಮರುಳು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಕಾರಿ ಯಮುನಾ ಪ್ರಸಾದ್ ತಿಳಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಲಕ್ನೋ ಅಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.

ಸಬ್‌ಇನ್ಸ್ಪೆಕ್ಟರ್‌ ಹುದ್ದೆ ಆಸೆಯಿಂದ 18 ಲಕ್ಷ ಕಳೆದುಕೊಂಡ ತುಮಕೂರು ನಿವಾಸಿ

ತುಮಕೂರು ಜಿಲ್ಲೆಯ ಉರ್ದಿಗೆರೆ ನಿವಾಸಿಯಾಗಿರುವ ಪುಟ್ಟರಾಜು ಅವರ ಮಗಳಿಗೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕು ಅನ್ನೋ ಆಸೆ. ಅದೇ ಕಾರಣಕ್ಕೆ ಆಕೆ ಸಿದ್ದತೆಯನ್ನೂ ಮಾಡಿಕೊಂಡು ಸಬ್‌ಇನ್ಸ್ಪೆಕ್ಟರ್‌ ಹುದ್ದೆಗೆ ಪರೀಕ್ಷೆಯನ್ನೂ ಬರೆದಿದ್ದಾಳೆ. ಇನ್ನೇನು ಪರೀಕ್ಷೆಯ ಫಲಿತಾಂಶ ಬರುತ್ತೆ ಅನ್ನೋ ಹೊತ್ತಲ್ಲೇ ಪುಟ್ಟರಾಜು ಅವರ ಸ್ನೇಹಿತನಾಗಿರುವ ಯಶವಂತಪುರದ ನಿವಾಸಿ ಕೃಷ್ಣಪ್ಪ ಕರೆ ಮಾಡಿದ್ದ. ಮನೆಯ ವಿಚಾರ ಮಾತನಾಡುವ ಹೊತ್ತಲ್ಲೇ ಮಗಳು ಸಬ್‌ಇನ್ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿರೋ ವಿಚಾರವನ್ನೂ ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಹೊರಡದ ವಿಮಾನ, ಪ್ರಯಾಣಿಕರ ಅಸಮಧಾನ

ಬೆಳಗ್ಗೆ 6ಗಂಟೆಗೂ ಮೊದಲು ಹೊರಡಬೇಕಿದ್ದ ದೇಶೀಯ ವಿಮಾನಗಳು ಮಾತ್ರ ಸರಿಯಾದ ಸಮಯಕ್ಕೆ ಟೇಕ್​ ಆಫ್​ ಆಗಿವೆ. ಅದರಲ್ಲಿ ಹೈದರಾಬಾದ್​, ಗೋವಾ, ನಾಗ್ಪುರಕ್ಕೆ ಪ್ರಯಾಣಿಸಬೇಕಿದ್ದ ಏರ್​ ಇಂಡಿಯಾ ವಿಮಾನಗಳು, ಕೊಚ್ಚಿಗೆ ಹೋಗಬೇಕಿದ್ದ ಸ್ಪೈಸ್​ಜೆಟ್​ ಮತ್ತು ಕೋಲ್ಕತ್ತ, ಉದಯ್​ಪುರಕ್ಕೆ ತೆರಳಬೇಕಿದ್ದ ಇಂಡಿಗೋಗಳಷ್ಟೇ ಸರಿಯಾದ ಸಮಯಕ್ಕೆ ಟೇಕ್​ ಆಫ್​ ಆಗಿದ್ದು ಬಿಟ್ಟರೆ, 6ಗಂಟೆ ನಂತರ ಇದ್ದ ಎಲ್ಲ ವಿಮಾನಗಳೂ ವಿಳಂಬವಾಗಿಯೇ ಹೊರಟಿವೆ. ಕೆಲವು 20-30 ನಿಮಿಷ ತಡವಾಗಿದ್ದರೆ, ಇನ್ನೂ ಕೆಲವು ವಿಮಾನಗಳು ಒಂದು ತಾಸುಗಳ ಕಾಲ ತಡವಾಗಿ ಹೊರಟಿವೆ.

ಆರ್ಯನ್‌ ಬೆನ್ನಿಗೆ ನಿಂತ ನಟಿ ರಮ್ಯಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ ಎಂದು ನಟಿ ರಮ್ಯಾ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಆ್ಯಂಬುಲೆನ್ಸ್ ಸೈರನ್ ಹಾರ್ನ್ ಬದಲಾವಣೆಗೆ ಕೇಂದ್ರ ಚಿಂತನೆ

ಗುರುವಾರ ನಾಸಿಕ್‌ನಲ್ಲಿ ನಡೆದ ಸಮಾ​ರಂಭ​ವೊಂದ​ರಲ್ಲಿ ಮಾತ​ನಾ​ಡಿದ ಅವರು, ಈ ನಿಯಮ ಜಾರಿಗೆ ಬಂದರೆ ಆ್ಯಂಬುಲೆನ್ಸ್‌ ಜಾಗತಿಕವಾಗಿ ಬಳಸಲ್ಪಡುತ್ತಿರುವ ಸೈರನ್‌ಗೆ  ಬದಲಾಗಿ ಶಾಸ್ತ್ರೀಯ ಸಂಗೀತ ಕೇಳಿಬರಲಿದೆ. ಹಾರ್ನ್‌ಗಳು ಕರ್ಕಶವಾಗಿದ್ದು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಹಾಗಾಗಿ ಶಾಸ್ತ್ರೀಯ ಸಂಗೀತ ವಾದ್ಯಗಳ ಶಬ್ಧ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಆ್ಯಂಬುಲೆನ್ಸ್‌ಗಳಲ್ಲಿ ಬಳಸುವ ಸೈರನ್‌ ಅನ್ನು ಸಹ ಬದಲಾಯಿಸಲಾಗುವುದು. ಈಗಿರುವ ಸೈರನ್‌ಗೆ ಬದಲಾಗಿ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿಬರುವ ಸಂಗೀತ ಅಳವಡಿಸಿದರೆ ಜನರ ಮನಸ್ಸಿಗೆ ಆಪ್ಯಾಯಮಾನವಾದ ಶಬ್ಧ ಕೇಳಿಸುತ್ತದೆ ಎಂದ​ರು.

ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಹರಿದು ಮಹಿಳೆ ಸಾವು

ರಸ್ತೆಗುಂಡಿಗೆ ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು. ಒಂದೇ ಕುಟುಂಬದ ಮೂವರು ಬೈಕ್ ಮೇಲೆ ಬರುತ್ತಿದ್ದರು. ಆ ವೇಳೆ ರಸ್ತೆ ಗುಂಡಿ ಕಂಡು ವಾಹನವನ್ನು ಪಕ್ಕಕ್ಕೆ ತಿರುಗಿಸಿದಾಗ ಟಿಪ್ಪರ್ ಲಾರಿ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿದ್ದ ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ.

ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಯೋಧರು

ಉಭಯ ಪಡೆಗಳ ಕಮಾಂಡರ್‌ಗಳ ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಬಗೆಹರಿಸಿಕೊಂಡ ನಂತರದಲ್ಲಿ ಎರಡೂ ದೇಶಗಳ ಪಡೆಗಳು ಹಿಂದಿರುಗಿದ ಕೆಲವು ಗಂಟೆಗಳ ವರೆಗೂ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಅಕ್ಟೋಬರ್‌ 15ರಿಂದ ಪ್ರವಾಸಿ ವೀಸಾ ನೀಡಿಕೆ – ಗೃಹ ಸಚಿವಾಲಯ ಸ್ಪಷ್ಟನೆ

ಚಾರ್ಟರ್ಡ್‌‌‌ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿಯರಿಗೆ ಹೊಸ ಪ್ರವಾಸಿ ವೀಸಾಗಳನ್ನು ಅಕ್ಟೋಬರ್‌ 15ರಿಂದ ನೀಡಲು ಪ್ರಾರಂಭಿಸಲಾಗುವುದು. ವಿಮಾನಯಾನ ಸಂಸ್ಥೆಗಳು ಈ ತೀರ್ಮಾನವನ್ನು ಪರಿಶೀಲಿಸುವಂತೆ ಸರ್ಕಾರವನ್ನು ವಿನಂತಿಸಿವೆ” ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. “ಭಾರತಕ್ಕೆ ಬೇರೆ ವಿಮಾನಗಳ ಮೂಲಕ ಪ್ರಯಾಣಿಸುವ ವಿದೇಶಿ ಪ್ರವಾಸಿಗರು ನವೆಂಬರ್‌ 15ರಿಂದ ಎಲ್ಲಾ ಕೊರೊನಾ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ವೀಸಾ ನೀಡಲು ಸಾಧ್ಯವಾಗುತ್ತದೆ. ನವೆಂಬರ್‌ 15ರ ಬಳಿಕ ಇತರ ವಿಮಾನಗಳ ಮೂಲಕ ಭಾರತಕ್ಕೆ ಬರುವವರಿಗೆ ವೀಸಾ ನೀಡಲಾಗುವುದು ಎಂದು ಮಾಹಿತಿ ನೀಡಿದೆ.