• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸರಿಯಾದ ಸಮಯಕ್ಕೆ ಹೊರಡದ ವಿಮಾನ, ಪ್ರಯಾಣಿಕರ ಅಸಮಧಾನ

Preetham Kumar P by Preetham Kumar P
in ಪ್ರಮುಖ ಸುದ್ದಿ
ಸರಿಯಾದ ಸಮಯಕ್ಕೆ ಹೊರಡದ ವಿಮಾನ, ಪ್ರಯಾಣಿಕರ ಅಸಮಧಾನ
1
SHARES
0
VIEWS
Share on FacebookShare on Twitter

ಮುಂಬೈ ಅ 8 :  ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣ  ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಇಡೀ ವಿಮಾನನಿಲ್ದಾಣದಲ್ಲಿ ಎಲ್ಲ ಕಡೆಗೂ ಪ್ರಯಾಣಿಕರು ನಿಂತಿರುವ ದೃಶ್ಯದ ವಿಡಿಯೋ, ಫೋಟೋಗಳು ಇಂಟರ್​ನೆಟ್​​ನಲ್ಲಿ ವೈರಲ್ ಆಗುತ್ತಿವೆ. ಸಿಐಎಸ್​ಎಫ್​ ಸೆಕ್ಯೂರಿಟಿ ಗೇಟ್​​ ಬಳಿ ಜನರ ಉದ್ದನೆಯ ಕ್ಯೂ ಇದ್ದು, ಅವರೆಲ್ಲ ತಮ್ಮ ಬೋರ್ಡಿಂಗ್​ ಗೇಟ್​​ ಬಳಿ ಹೋಗಲು ತುಂಬ ಕಷ್ಟಪಡುತ್ತಿದ್ದರು. ಒಟ್ಟಾರೆ ಇಂದು ಬೆಳಗ್ಗೆ ಮುಂಬೈ ಏರ್​ಪೋರ್ಟ್​​ ಅವ್ಯವಸ್ಥೆಗಳ ಆಗರವಾಗಿ ಬಹುತೇಕ ಎಲ್ಲ ದೇಶೀಯ ವಿಮಾನಗಳೂ ವಿಳಂಬವಾಗಿವೆ. ಇದು ಹಬ್ಬದ ಸೀಸನ್ ಮತ್ತು ವೀಕೆಂಡ್​​ ಆಗಿರುವುದರಿಂದ ಏರ್​ಪೋರ್ಟ್​​ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ತುಂಬಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.  

ಒಂದೆಡೆ ವಿಮಾನಗಳು ವಿಳಂವಾದರೆ, ಇನ್ನೂ ಕೆಲವು ಪ್ರಯಾಣಿಕರಿಗೆ ಬೋರ್ಡಿಂಗ್​ ಗೇಟ್​ಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ತಾವು ಹೋಗಬೇಕಿದ್ದ ವಿಮಾನವನ್ನು ತಪ್ಪಿಸಿಕೊಂಡು ಪರದಾಡಿದ್ದಾರೆ. ಇದು ಗಲಾಟೆಗೂ ಕಾರಣವಾಗಿದೆ. ಕೆಲವರು ಏರ್​ಪೋರ್ಟ್​ ಅಧಿಕಾರಿಗಳು, ಸಿಬ್ಬಂದಿ ಬಳಿ ಜಗಳವನ್ನೂ ಮಾಡಿದ್ದಾರೆ. ಅವರನ್ನು ನಿಯಂತ್ರಿಸಲು ಸಿಬ್ಬಂದಿ ತುಂಬ ಕಷ್ಟಪಟ್ಟಿದ್ದಾರೆ.

ಬೆಳಗ್ಗೆ 6ಗಂಟೆಗೂ ಮೊದಲು ಹೊರಡಬೇಕಿದ್ದ ದೇಶೀಯ ವಿಮಾನಗಳು ಮಾತ್ರ ಸರಿಯಾದ ಸಮಯಕ್ಕೆ ಟೇಕ್​ ಆಫ್​ ಆಗಿವೆ. ಅದರಲ್ಲಿ ಹೈದರಾಬಾದ್​, ಗೋವಾ, ನಾಗ್ಪುರಕ್ಕೆ ಪ್ರಯಾಣಿಸಬೇಕಿದ್ದ ಏರ್​ ಇಂಡಿಯಾ ವಿಮಾನಗಳು, ಕೊಚ್ಚಿಗೆ ಹೋಗಬೇಕಿದ್ದ ಸ್ಪೈಸ್​ಜೆಟ್​ ಮತ್ತು ಕೋಲ್ಕತ್ತ, ಉದಯ್​ಪುರಕ್ಕೆ ತೆರಳಬೇಕಿದ್ದ ಇಂಡಿಗೋಗಳಷ್ಟೇ ಸರಿಯಾದ ಸಮಯಕ್ಕೆ ಟೇಕ್​ ಆಫ್​ ಆಗಿದ್ದು ಬಿಟ್ಟರೆ, 6ಗಂಟೆ ನಂತರ ಇದ್ದ ಎಲ್ಲ ವಿಮಾನಗಳೂ ವಿಳಂಬವಾಗಿಯೇ ಹೊರಟಿವೆ. ಕೆಲವು 20-30 ನಿಮಿಷ ತಡವಾಗಿದ್ದರೆ, ಇನ್ನೂ ಕೆಲವು ವಿಮಾನಗಳು ಒಂದು ತಾಸುಗಳ ಕಾಲ ತಡವಾಗಿ ಹೊರಟಿವೆ.

ಅಧಿಕಾರಿಗಳ ಪ್ರತಿಕ್ರಿಯೆ :
 ಇದೀಗ ಹಬ್ಬದ ಸೀಸನ್​ ಶುರುವಾಗಿದೆ. ಅದರೊಂದಿಗೆ ವೀಕೆಂಡ್​ ಬೇರೆ ಬಂದಿದೆ. ಹಾಗಾಗಿಯೇ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಪರಿ ಜನದಟ್ಟಣೆ ಉಂಟಾಯಿತು. ಇದು ಬರಿ ನಮ್ಮಲ್ಲಷ್ಟೇ ಅಲ್ಲ, ದೇಶದ ಬೇರೆ ನಗರಗಳ ವಿಮಾನ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು.  ಹಾಗಂತ ಪ್ರಯಾಣಿಕರ ಭದ್ರತೆ, ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿಲ್ಲ. ಆದ್ಯತೆಯ ಮೇರೆಗೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಈ ಮಧ್ಯೆ ಮುಂಬೈ ಏರ್​​ಪೋರ್ಟ್​​ನ ಗಲಾಟೆ, ಉದ್ದನೆಯ ಕ್ಯೂನಲ್ಲಿ ಸಿಲುಕಿ ಬೆಂಡಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಚೆಕ್ಕಿಂಗ್​ ಪ್ರಕ್ರಿಯೆ ಬೇಗಬೇಗ ಮುಗಿಯುತ್ತಿಲ್ಲ. ಚೆಕ್ಕಿಂಗ್​ ಮುಗಿದರೂ ವಿಮಾನ ಹೊರಡಲು ವಿಳಂಬವಾಗುತ್ತಿದೆ. ಹಲವರ ಕೂಗಾಟ ಎಲ್ಲ ಸೇರಿ ತುಂಬ ಕಿರಿಕಿರಿಯಾಯಿತು ಎಂದು ಸೋಷಿಯಲ್​ ಮೀಡಿಯಾಗಳ ಮೂಲಕ ಅನೇಕರು ಹೇಳಿಕೊಂಡಿದ್ದಾರೆ. ಒಂದಷ್ಟು ಮಂದಿ ಜನಂಗುಳಿಯ ವಿಡಿಯೋ, ಫೋಟೋವನ್ನೂ ಶೇರ್​ ಮಾಡಿಕೊಂಡಿದ್ದಾರೆ. ಏರ್​​ಪೋರ್ಟ್​​ನಲ್ಲಿ ಇಷ್ಟರ ಮಟ್ಟಿಗೆ ಅವ್ಯವಸ್ಥೆಯುಂಟಾಗಿ, ನನ್ನಂತ ಹಲವು ಪ್ರಯಾಣಿಕರು ವಿಮಾನ ಮಿಸ್​ ಮಾಡಿಕೊಂಡಿದ್ದರೂ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

Tags: MumbaiMumbai Airport chaos

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.